ಶೃಂಗೇರಿಯಲ್ಲಿ ಹೃದಯಾಘಾತಕ್ಕೆ BCOM ವಿದ್ಯಾರ್ಥಿನಿ ಬಲಿ – ಯುವಕರೇ ಹುಷಾರ್ .. ಹುಷಾರ್!

ಇತ್ತೀಚಿನದಿನಗಳಲ್ಲಿ ಹೃದಯಾಘಾತದಿಂದ ಮೃತಪಡುವರ ಸಂಖ್ಯೆ ಹೆಚ್ಚಾಗಿದೆ. ಚಿಕ್ಕ ಚಿಕ್ಕ ವಯಸ್ಸಿನಲ್ಲೇ ಯುವಕ, ಯುವತಿಯರು ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೊರೊನಾದ ನಂತ್ರ ಹೃದಯಾಘಾತದ ಸಂಖ್ಯೆ ಹೆಚ್ಚಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ. ಕರ್ನಾಟಕದಲ್ಲಿ ಹೃದಯಾಘಾತದಿಂದ ಎಳೆಯ ಪ್ರಾಯದವರ ಸಾವಿನ ಪ್ರಮಾಣ ಮುಂದುವರಿದಿದೆ. 22 ವರ್ಷದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: 7 ಕೋಟಿಗೆ ಬೇಕಿತ್ತಾ ವೆಂಕಿ? -ಗ್ರೀನ್.. ಪತಿ KKRಗೆ ಪ್ಲಸ್ ಆಗ್ತಾರಾ?
22 ವರ್ಷದ ಮೃತ ವಿದ್ಯಾರ್ಥಿನಿ ದಿಶಾ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವರು. ಚಿಕ್ಕಮಗಳೂರಿನ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಶೃಂಗೇರಿ ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು, ಕುಸಿದು ಬಿದ್ದು, ಮೃತಪಟ್ಟಿದ್ದಾರೆ. ಕೂಡಲೇ ಹಾಸ್ಟೆಲ್ ವಿದ್ಯಾರ್ಥಿನಿಯರು, ದಿಶಾಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಪ್ರಯೋಜನವಾಗಿಲ್ಲ.
ಇತ್ತೀಚ್ಚಿನ ದಿನಗಳಲ್ಲಿ ಹೃದಯಾಘಾತದಿಂದ ಮೃತಪಡುವರ ಸಂಖ್ಯೆ ಹೆಚ್ಚಾಗಿದ್ದು, ಯುವಕ, ಯುವತಿಯರೇ ಬಲಿಯಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸಾಕಷ್ಟು ದಿನಗಳ ಹಿಂದೆ ಹಾಸನದಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ರು..ಈ ಎಲ್ಲಾ ಘಟನೆಗಳು ಯುವಕರಲ್ಲಿ ಸೈಲೆಂಟ್ ಕಿಲ್ಲರ್ ಹಾರ್ಟ್ ಅಟ್ಯಾಕ್ ಭಯವನ್ನ ಹುಟ್ಟಿಸಿದ್ದಂತು ಸತ್ಯ.

ನೋಡಿರಿ

