ಅರ್ಮೇನಿಯನ್ ನಿಯಂತ್ರಿತ ಕರಾಬಾಕ್‌ನಲ್ಲಿ ಅಜರ್‌ಬೈಜಾನ್ ಮಿಲಿಟರಿ ದಾಳಿ – 25 ಮಂದಿ ಸಾವು
ಅರ್ಮೇನಿಯನ್ ನಿಯಂತ್ರಿತ ಕರಾಬಾಕ್‌ನಲ್ಲಿ ಅಜರ್‌ಬೈಜಾನ್ ಮಿಲಿಟರಿ ದಾಳಿ ನಡೆಯುತ್ತಿದ್ದು, ಘಟನೆಯಲ್ಲಿ ಸುಮಾರು 25 ಮಂದಿ ದಾರುಣ ಸಾವನ್ನಪ್ಪಿದ್ದು, ಸ್ಥಳೀಯರು ಸೇರಿದಂತೆ 138 ಜನರು ಗಾಯಗೊಂಡಿದ್ದಾರೆ ಎಂದು ಪ್ರತ್ಯೇಕತಾವಾದಿ ಅರ್ಮೇನಿಯನ್ ಮಾನವ ಹಕ್ಕುಗಳ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕರಾಬಾಖ್ ಅಂತಾರಾಷ್ಟ್ರೀಯವಾಗಿ ಅಜರ್‌ಬೈಜಾನ್ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಆದರೆ ಅದರ ಭಾಗವನ್ನು ಪ್ರತ್ಯೇಕತಾವಾದಿ ಅರ್ಮೇನಿಯನ್ ಅಧಿಕಾರಿಗಳು ನಿಯಂತ್ರಿಸುತ್ತಿದ್ದಾರೆ. ಈ ಪ್ರದೇಶ ನಮ್ಮ ಪೂರ್ವಜರ ತಾಯ್ನಾಡು ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆ ನಾಗೋರ್ನೊ-ಕರಾಬಖ್ ಪ್ರದೇಶದಲ್ಲಿ ಸೆಪ್ಟೆಂಬರ್ 19 ರಿಂದ ಯುದ್ಧ ಪ್ರಾರಂಭಿಸಿದೆ. ಅಜರ್‌ಬೈಜಾನ್ ಪಡೆಗಳು ಇದುವರೆಗೆ 60 ಕ್ಕೂ ಹೆಚ್ಚು ಮಿಲಿಟರಿ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿದೆ. ಇತರ ಯಂತ್ರಾಂಶಗಳೊಂದಿಗೆ 20 ಮಿಲಿಟರಿ ವಾಹನಗಳನ್ನು ನಾಶಪಡಿಸಿವೆ ಬಾಕು ರಕ್ಷಣಾ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: 12 ಮಕ್ಕಳನ್ನ ಹೆತ್ತ ತಾಯಿಗೆ ಮೂರನೇ ಮದುವೆಯಾಗುವ ಆಸೆ – ಇಬ್ಬರು ಪತಿಯರನ್ನ ಬಿಟ್ಟವಳನ್ನ ಮದುವೆಯಾಗಲು 10 ಮಕ್ಕಳಿರಬೇಕಂತೆ!
ಯುರೋಪಿಯನ್ ಒಕ್ಕೂಟ, ಫ್ರಾನ್ಸ್ ಮತ್ತು ಜರ್ಮನಿ ರಾಷ್ಟ್ರಗಳು ಅಜರ್‌ಬೈಜಾನ್ ಮಿಲಿಟರಿ ಕ್ರಮವನ್ನು ಖಂಡಿಸಿವೆ. ಕರಾಬಾಖ್‌ನ ಭವಿಷ್ಯದ ದೃಷ್ಟಿಯಿಂದ ಅರ್ಮೇನಿಯಾದೊಂದಿಗೆ ಶಾಂತಿ ಮಾತುಕತೆಗೆ ಕರೆ ನೀಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.