ಅಜರ್‌ಬೈಜಾನ್, ಅರ್ಮೇನಿಯನ್ ಪ್ರತ್ಯೇಕತಾವಾದಿಗಳ ನಡುವಿನ ಯುದ್ಧ ಅಂತ್ಯ

ಅಜರ್‌ಬೈಜಾನ್, ಅರ್ಮೇನಿಯನ್ ಪ್ರತ್ಯೇಕತಾವಾದಿಗಳ ನಡುವಿನ ಯುದ್ಧ ಅಂತ್ಯ

ಕಳೆದ ಕೆಲವು ದಿನಗಳಿಂದ ಅಜರ್‌ಬೈಜಾನ್‌ನಲ್ಲಿ ನಡೆಯುತ್ತಿದ್ದ ಸೇನೆ ಹಾಗೂ ಪ್ರತ್ಯೇಕತಾವಾದಿ ಅರ್ಮೇನಿಯನ್ ಹೋರಾಟಗಾರರ ನಡುವೆ ಭೀರರ ಯುದ್ದ ನಡೆಯುತ್ತಿತ್ತು. ಈ ದಾಳಿಯಲ್ಲಿ ಸುಮಾರು 25 ಮಂದಿ ಸಾವನ್ನಪ್ಪಿದ್ದರು. ಇದೀಗ ಈ ಯುದ್ಧ ಕೊನೆಯಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಅಜರ್‌ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರತ್ಯೇಕವಾದಿ ಹೋರಾಟಗಾರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ. ಈ ಮೂಲಕ ಬೇರ್ಪಟ್ಟಿದ್ದ ನಾಗೋರ್ನೊ-ಕರಾಬಖ್ ಮೇಲೆ ಸರ್ಕಾರ ಮರಳಿ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮತ್ತೆ ಮೂರು ಜಿಂಕೆಗಳು ಸಾವು – ಸಾವಿನ ಸಂಖ್ಯೆ 16ಕ್ಕೆ ಏರಿಕೆ!

ಇನ್ನು ಬೇರ್ಪಟ್ಟ ಪ್ರದೇಶವನ್ನು ಅಜರ್‌ಬೈಜಾನ್‌ನ  ಉಳಿದ ಭಾಗಗಳ ಮರುಜೋಡಣೆ ಕುರಿತು ಇಂದು (ಗುರುವಾರ) ಯೆವ್ಲಾಖ್ ನಗರದಲ್ಲಿ ಮಾತುಕತೆ ನಡೆಯಲಿದೆ. ಈ ವೇಳೆ ಸರ್ಕಾರದ ಪ್ರತಿನಿಧಿಗಳು ಹಾಗೂ ಪ್ರತ್ಯೇಕವಾದಿಗಳ ಮುಖಂಡರು ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ನಡೆದಿದ್ದ ಮಿಲಿಟರಿ ದಾಳಿಯಿಂದಾಗಿ 25 ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ಸ್ಥಳೀಯ ಇಬ್ಬರು ಸೇರಿದಂತೆ 138 ಜನರು ಗಾಯಗೊಂಡಿದ್ದರು. ಈ ಬಗ್ಗೆ ಪ್ರತ್ಯೇಕತಾವಾದಿ ಅರ್ಮೇನಿಯನ್ ಮಾನವ ಹಕ್ಕುಗಳ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಸೋವಿಯತ್ ಒಕ್ಕೂಟವು ಇಲ್ಲಿಂದ ಬೇರ್ಪಟ್ಟ ನಂತರ ಅರ್ಮೇನಿಯನ್ ಪ್ರತ್ಯೇಕತಾವಾದಿಗಳು 1990ರ ದಶಕದ ಆರಂಭದಲ್ಲಿ ಅಜರ್‌ಬೈಜಾನ್ ಪ್ರದೇಶವನ್ನು ವಶಪಡಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೂ ನಡೆದ ಘರ್ಷಣೆಯಲ್ಲಿ ಸುಮಾರು 30,000 ಜನರನ್ನು ಬಲಿ ತೆಗೆದುಕೊಂಡಿದೆ.

Shwetha M