CSKಗೆ ಹೋಗ್ತಾರಾ RCB ಆಟಗಾರ? – ಬೆಂಗಳೂರು ಹತ್ತಿರ ಚೆನ್ನೈ ಸಾಲ
ಏನಿದು ಪ್ಲೇಯರ್ ಲೋನ್ ರೂಲ್ಸ್

CSKಗೆ ಹೋಗ್ತಾರಾ RCB ಆಟಗಾರ?  – ಬೆಂಗಳೂರು ಹತ್ತಿರ ಚೆನ್ನೈ ಸಾಲಏನಿದು ಪ್ಲೇಯರ್ ಲೋನ್ ರೂಲ್ಸ್

 

ಐಪಿಎಲ್ ಸಾಕಷ್ಟು ರೂಲ್ಸ್‌ಗಳಿವೆ, ಆದ್ರೆ ಎಲ್ಲಾವೂ ಕೂಡ ಜಾರಿಗೆ ಬರಲ್ಲ. ಅದರಲ್ಲಿ ಒಂದು ಸಾಲದ ರೂಲ್ಸ್‌..  ಈ ಸಾಲದ ರೂಲ್ಸ್‌ನ ಸರಿಯಾಗಿ ಫಾಲೋ ಮಾಡಿದ್ರೆ ಒಂದು ತಂಡದ ಆಟಗಾರ ಇನ್ನೊಂದು ತಂಡಕ್ಕೆ ಸಾಲದ ರೂಪದಲ್ಲಿ ಹೋಗಬಹುದು. ಈಗ ಚೆನ್ನೈ ಕೂಡ ಆರ್‌ಸಿಬಿ ಆಟಗಾರರನನ್ನ ಸಾಲದ ರೂಪದಲ್ಲಿ ಪಡೆಯೋಕೆ ಪ್ಲ್ಯಾನ್ ಮಾಡ್ತಿದೆ. ಹಾಗಿದ್ರೆ ಏನಿದು ಐಪಿಎಲ್ ಸಾಲದ ರೂಲ್ಸ್‌? ಅನ್ನೋದ್ದನ್ನ ನೋಡೋಣ.

ಐಪಿಎಲ್ 2026 ರ ಸೀಸನ್ ಪ್ರಾರಂಭವಾಗುವ ಮೊದಲೇ, ಹಲವಾರು ಆಟಗಾರರು ಗಾಯದ ಕಾರಣದಿಂದಾಗಿ ಹೊರಗುಳಿದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹೆಚ್ಚು ಪರಿಣಾಮ ಬೀರುವ ತಂಡಗಳಲ್ಲಿ ಒಂದಾಗಿದೆ. ಇದರಲ್ಲಿ ಮೂವರು ಆಟಗಾರರು ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಆದರೆ ಎಂಎಸ್ ಧೋನಿ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಚೆನ್ನೈ ಜೊತೆಗೆ, ಹಲವಾರು ಇತರ ಫ್ರಾಂಚೈಸಿಗಳು ಸಹ ಈ ಸಮಸ್ಯೆಯೊಂದಿಗೆ ಹೋರಾಡುತ್ತಿವೆ. ಬದಲಿ ಆಟಗಾರರನ್ನು ಹುಡುಕುತ್ತಿವೆ. ಆದರೆ ಇದೆಲ್ಲದರ ನಡುವೆ, ಅಶ್ವಿನ್ ಬದಲಿ ಆಟಗಾರರ ಬಗ್ಗೆ ವಿಶೇಷ ಸಲಹೆಯನ್ನು ನೀಡಿದ್ದಾರೆ. ಈ ಸಲಹೆ ಹಲವು ಚರ್ಚೆಯನ್ನ ಹುಟ್ಟು ಹಾಕಿದೆ.

ಇದನ್ನೂ ಓದಿ: SSLC ಫಲಿತಾಂಶ ಪ್ರಕಟ! – ದಕ್ಷಿಣ ಕನ್ನಡ ಪ್ರಥಮ.. ಉಡುಪಿ ದ್ವಿತೀಯ, ಕಲಬುರಗಿಗೆ ಕೊನೆ ಸ್ಥಾನ!

ಐಪಿಎಲ್ 2026 ರಿಂದ ಆಯುಷ್ ಮ್ಹಾತ್ರೆ ಹೊರಗುಳಿದ ಸುದ್ದಿ ಹೊರಬಿದ್ದ ನಂತರ, ಅಶ್ವಿನ್   ಐಪಿಎಲ್ ಆವೃತ್ತಿಯಲ್ಲಿ ಸಾಲ ನಿಯಮ’ವನ್ನು ನೆನಪಿಸಿದ್ದಾರೆ. ಅವರು ಇಬ್ಬರು ಯುವ ಆಟಗಾರರನ್ನು ಉಲ್ಲೇಖಿಸಿದ್ದು, ಅವರಲ್ಲಿ ಒಬ್ಬರು ಆರ್‌ಸಿಬಿಯ ವಿಹಾನ್ ಮಲ್ಹೋತ್ರಾ. ಅಶ್ವಿನ್ ತಮ್ಮ ಪೋಸ್ಟ್‌ನಲ್ಲಿ, “ತುಂಬಾ ಜನರು ಗಾಯಗೊಳ್ಳುತ್ತಿದ್ದಾರೆ. 7ನೇ ಪಂದ್ಯದ ನಂತರ ಸಾಲದ ಅವಧಿ ಮುಚ್ಚುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆರ್‌ಸಿಬಿಯ ಈ ಅದ್ಭುತ ಪ್ರತಿಭೆಯನ್ನು ಸಾಲದ ಮೇಲೆ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ. ವಿಹಾನ್ ಮಲ್ಹೋತ್ರಾ ಅವರು ಇನ್ನೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಆದ್ದರಿಂದ ಅವರು ಸಂಭಾವ್ಯ ಆಯ್ಕೆಯಾಗಿದ್ದಾರೆ. ವಿಹಾನ್ ಅಲ್ಲದಿದ್ದರೆ, ಅಭಿಗ್ಯಾನ್ ಕುಂಡು ಕೂಡ ಉತ್ತಮ ಎಡಗೈ ಬ್ಯಾಟರ್ ಆಯ್ಕೆಯಾಗಿದ್ದು, ಅವರನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸಬಹುದು” ಎಂದು ಅಶ್ವಿನ್ ತಮ್ಮ ಪೋಸ್ಟ್ ಮೂಲಕ ಅದ್ಭುತ ಸಲಹೆ ನೀಡಿದ್ದಾರೆ.

ಐಪಿಎಲ್‌ನಲ್ಲಿ  ಒಂದು ತಂಡವು ಮತ್ತೊಂದು ತಂಡದ ಆಟಗಾರನನ್ನು ತಾತ್ಕಾಲಿಕವಾಗಿ ಪಡೆದುಕೊಳ್ಳುವ ವ್ಯವಸ್ಥೆಯನ್ನು ‘ಪ್ಲೇಯರ್ ಲೋನ್ ಸಿಸ್ಟಮ್’   ಅಥವಾ ‘ಮಿಡ್-ಸೀಸನ್ ಟ್ರಾನ್ಸ್‌ಫರ್’ ಎಂದು ಕರೆಯಲಾಗುತ್ತದೆ.ಇದರ ನಿಯಮಗಳು ಏನು ಅನ್ನೋದ್ದನ್ನ ನೋಡೋಣ ಬನ್ನಿ.

  ಐಪಿಎಲ್‌ನ ‘ಲೋನ್‌’ ನಿಯಮವೇನು?

  1. ಪ್ರಸ್ತುತ ಸೀಸನ್‌ನಲ್ಲಿ ಗರಿಷ್ಠ 2 ಪಂದ್ಯಗಳನ್ನು ಮಾತ್ರ ಆಡಿರುವ ಆಟಗಾರರನ್ನು ಮಾತ್ರ ಲೋನ್ ಮೇಲೆ ಪಡೆಯಬಹುದು.
  2. ಈ ಪ್ರಕ್ರಿಯೆಯು ಸೀಸನ್‌ನ 7ನೇ ಪಂದ್ಯದ ನಂತರ ಪ್ರಾರಂಭವಾಗಿ 34ನೇ ಪಂದ್ಯದವರೆಗೆ ತೆರೆದಿರುತ್ತೆ.
  3. ಒಬ್ಬ ಆಟಗಾರನನ್ನು ಒಂದು ಸೀಸನ್‌ನಲ್ಲಿ ಕೇವಲ ಒಂದು ಬಾರಿ ಮಾತ್ರ ಲೋನ್ ಮೇಲೆ ನೀಡಬಹುದು.
  4. ಆಟಗಾರನ ಒಪ್ಪಿಗೆಯಿಲ್ಲದೆ ಅವರನ್ನು ಲೋನ್ ಮೇಲೆ ಕಳುಹಿಸಲು ಆಗಲ್ಲ
  5. ಆಟಗಾರನನ್ನು ಮೂಲ ತಂಡವು ಹರಾಜಿನಲ್ಲಿ ಖರೀದಿಸಿದ ಬೆಲೆಯನ್ನು ಮೂಲ ಫ್ರಾಂಚೈಸಿ ಪಾವತಿಸುತ್ತದೆ.
  6. ಲೋನ್ ಮೇಲೆ ಪಡೆದ ತಂಡವು ಆಟಗಾರನಿಗೆ ಪಂದ್ಯದ ಶುಲ್ಕವನ್ನು  ಪಾವತಿಸುತ್ತದೆ.
  7. ಲೋನ್ ಮೇಲೆ ಹೋದ ಆಟಗಾರನು, ತಾನು ಮೂಲತಃ ಹೊಂದಿದ್ದ ತಂಡದ  ವಿರುದ್ಧ ಆಡುವಂತಿಲ್ಲ.

8 .  ಒಂದು ತಂಡವು ಒಂದು ಸೀಸನ್‌ನಲ್ಲಿ ಗರಿಷ್ಠ 2 ಆಟಗಾರರನ್ನು ಲೋನ್ ಮೇಲೆ ಪಡೆಯಬಹುದು ಅಥವಾ ನೀಡಬಹುದು.

ಐಪಿಎಲ್‌ನಲ್ಲಿ ಸಾಕಷ್ಟು ನಿಯಮಗಳಿದ್ದು, ಫಾಂಚೈಸಿಗಳು ಅದ್ದನ್ನ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಸಿಎಸ್‌ಕೆ ಬಳಿ ಈ ಆಫರ್ ಇದ್ದು, ಅದ್ದನ್ನ ಹೇಗೆ ಬಳಸಿಕೊಳ್ಳುತ್ತೆ ಅನ್ನೋದ್ದನ್ನ ಕಾದು ನೋಡಬೇಕಿದೆ.

Kishor KV