ಫಸ್ಟ್ ಮ್ಯಾಚ್‌ನಲ್ಲೇ ಆಯುಷ್ ಅಬ್ಬರ ಚೆನ್ನೈ ಭವಿಷ್ಯದ ಪ್ಲ್ಯಾನ್ ಸಕ್ಸಸ್
ಮುಂಬೈ ಮಾಸ್ಟರ್ ಪೀಸ್ ಮ್ಹಾತ್ರೆ

ಫಸ್ಟ್ ಮ್ಯಾಚ್‌ನಲ್ಲೇ ಆಯುಷ್ ಅಬ್ಬರ  ಚೆನ್ನೈ ಭವಿಷ್ಯದ ಪ್ಲ್ಯಾನ್ ಸಕ್ಸಸ್ಮುಂಬೈ ಮಾಸ್ಟರ್ ಪೀಸ್ ಮ್ಹಾತ್ರೆ

ಮುಂಬೈ ಎಂಬ ಮಾಯಾನಗರಿ ಇನ್ನೂ ಅದೆಷ್ಟು ಕ್ರಿಕೆಟ್ ನ ಪ್ರತಿಭೆಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆಯೋ ಗೊತ್ತಿಲ್ಲ. ಹೊಸ ಪ್ರತಿಭೆಗಳು ಫ್ಯಾಕ್ಟರಿಯಾಗಿ   ಮುಂಬೈ ಮಾರ್ಪಟ್ಟಿದೆ.  ಇದೀಗ ಆ ಸಾಲಿಗೆ ಹೊಸ ಸೇರ್ಪಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಬ್ಯಾಟರ್ ಆಯುಷ್ ಮ್ಹಾ  ತ್ರೆ. ಇನ್ನೂ 17ರ ಹರೆಯದ ಈತ ಈ ಬಾರಿಯ ಐಪಿಎಲ್‌ನಲ್ಲಿ ಗ್ಯಾಂಡ್ ಎಂಟ್ರಿಕೊಟ್ಟಿದ್ದಾನೆ. ನಾಯಕ ಋತುರಾಜ್ ಗಾಯಕ್ವಾಡ್ ಅವರು ಗಾಯಾಳುವಾಗಿ ಅಲಭ್ಯರು ಎಂಬುದು ಖಾತ್ರಿಯಾದೊಡನೆ ಚೆನ್ನೈ ಫ್ರಾಂಚೈಸಿಯು ಆಯುಷ್ ಮ್ಹಾತ್ರೆಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ವಿಶೇಷ ನೋಡಿ, 2007ರ ಟಿ20 ವಿಶ್ವಕಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಭಾರತ ತಂಡವನ್ನು ಮುನ್ನಡೆಸುವ ಕೆಲವೇ ದಿನಗಳ ಹಿಂದಷ್ಟೇ ಹುಟ್ಟಿದ್ದ ಆಯುಷ್ ಮ್ಹಾತ್ರೆ ಇದೀಗ ಧೋನಿ ಅವರ ನಾಯಕತ್ವದಲ್ಲೇ ಸಿಎಸ್ ಕೆ ತಂಡ ಸೇರಿಕೊಂಡು ಐಪಿಎಲ್ ಪದಾರ್ಪಣೆ ಪಂದ್ಯವನ್ನೂ ಆಡಿದ್ದಾರೆ.

ಆಯುಷ್ ಮ್ಹಾತ್ರೆ ಛಲದಂಕ ಮಲ್ಲ. ತನ್ನ ಕನಸುಗಳನ್ನು ಬೆನ್ನಟ್ಟಲು, ಅವರು ಪ್ರತಿನಿತ್ಯ ಮುಂಬೈ ಹೊರವಲಯದ ವಿರಾರ್ ನಿಂದ ವಾಂಖೆಡೆ ಕ್ರೀಡಾಂಗಣದ ಸಮೀಪವಿರುವ ಚರ್ಚ್‌ಗೇಟ್‌ಗೆ ಸುಮಾರು 80 ಕಿಲೋ ಮೀಟರ್ ಪ್ರಯಾಣ ಮಾಡುತ್ತಾರೆ. ಮುಂಬೈ ತಂಡದಲ್ಲಿ ಗಮನ ಸೆಳೆದ ಪ್ರತಿಭೆ 2024ರಲ್ಲಿ ಇರಾನಿ ಕಪ್ ಮೂಲಕ ಮುಂಬೈ ತಂಡಕ್ಕೆ ಎಂಟ್ರಿ ಪಡೆದ ಅವರು ತಾವಾಡಿದ ಮೂರನೇ ರಣಜಿ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಗಮನ ಸೆಳೆದರು. ಒಟ್ಟಾರೆ ಈವರೆಗೆ ತಾವಾಡಿದ ಒಂಬತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ 31.50 ಸರಾಸರಿಯಲ್ಲಿ 504 ರನ್ ಗಳಿಸಿದ್ದಾರೆ. ಅದರಲ್ಲಿ 2 ಶತಕಗಳು ಅಡಕವಾಗಿವೆ. ಇನ್ನು ವಿಜಯ್ ಹಜಾರೆ ಟ್ರೋಫಿಯಲ್ಲಿ ಏಳು ಇನ್ನಿಂಗ್ಸ್‌ಗಳಲ್ಲಿ 65.42 ಸರಾಸರಿಯಲ್ಲಿ 458 ರನ್ ಗಳಿಸುವ ಮೂಲಕ ವಿಶ್ವವನ್ನೇ ಅಚ್ಚರಿಗೊಳಿಸಿದರು, ಇದರಲ್ಲಿ ಎರಡು ಶತಕಗಳು ಸೇರಿವೆ. ಅವರು ನಾಗಾಲ್ಯಾಂಡ್ ವಿರುದ್ಧ ಕೇವಲ 117 ಎಸೆತಗಳಲ್ಲಿ 181 ರನ್ ಗಳಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 150+ ಸ್ಕೋರ್ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರರೆಂಬ ವಿಶ್ವದಾಖಲೆ ಬರೆದಿದ್ದಾರೆ.

ಕಳೆದ ವರ್ಷವಷ್ಟೇ ಅಂಡರ್ 19 ಭಾರತ ತಂಡದಲ್ಲಿ ಆಡಿದ್ದ ಅವರು, ಇದೀಗ ಸಿಎಸ್ ಕೆ ಪರ ಐಪಿಎಲ್ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನು ಆಫ್ ಸ್ಪಿನ್ನ್ ಕೂಡ ಮಾಡಬಲ್ಲ ಈ ಈ ಯುವ ಪ್ರತಿಭೆ ಕೇವಲ 4.51 ಎಕಾನಮಿಯಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದರು.ಆದರೆ, ಕಳೆದ ಋತುವಿನ ಸೈಯದ್ ಮುಷಾಕ್ ಅಲಿ ಟ್ರೋಫಿ  ಚಾಂಪಿಯನ್ ಮುಂಬೈ ಪರ ಅವಕಾಶ ಸಿಗಲಿಲ್ಲ. ಹೀಗಾಗಿ ಮ್ಹಾತ್ರೆ ಇನ್ನೂ ಯಾವುದೇ ವೃತ್ತಿಪರ ಟಿ20 ಕ್ರಿಕೆಟ್ ಆಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

 ರೋಹಿತ್ ಶರ್ಮಾ ರೋಲ್ ಮಾಡೆಲ್

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನೇ ತಮ್ಮ ರೋಲ್ ಮಾಡೆಲ್ ಎಂದು ಹೇಳುವ ಈ ಬಾಲಕ ಹಿಟ್ ಮ್ಯಾನ್ ರೀತಿಯಲ್ಲೇ ಚೆಂಡನ್ನು ಮೈದಾನದ ಹೊರಗಟ್ಟಬಲ್ಲರು. ಅದನ್ನು ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಾಧಿಸಿ ತೋರಿಸಿದರು ಸಹ. ಆಡಿದ 15 ಎಸೆತಗಳಿಂದ 4 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 32 ರನ್ ಗಳಿಸಿ ಭವಿಷ್ಯದ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ. ಚೆನ್ನೈ ನಾಯಕರಾಗಿದ್ದ ಋತುರಾಜ್ ಗಾಯಕ್ವಾಡ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಾಗ ಅದರ ಮುಂದು ಮೂರು ಆಯ್ಕೆಗಳಿದ್ದವು. ಮೊದಲನೆಯದ್ದು ಮುಂಬೈನವರೇ ಆಧ ಪೃಥ್ವಿ ಶಾ, ಕರ್ನಾಟಕದ ನಾಯಕ ಮಾಯಾಂಕ್ ಅಗರ್ವಾಲ್ ಮತ್ತು ಆಯುಷ್ ಮ್ಹಾತ್ರೆ. ಭವಿಷ್ಯದ ಮೇಲೆ ಕಣ್ಣಿಟ್ಟ ಚೆನ್ನೈ ಫ್ರಾಂಚೈಸಿ ಅಂತಿಮವಾಗಿ ಮ್ಹಾತ್ರೆ ಅವರ ಮೇಲೆ ನಂಬಿಕೆ ಇಟ್ಟಿದೆ.

ಅಣ್ಣನ ಎಂಟ್ರಿ ನೋಡಿ ಅತ್ತ ತಮ್ಮ

 ಅತ್ತ ಅಣ್ಣ ಆಯುಷ್ ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ಯಾಟಿಂಗ್​ಗೆ ಬರುತ್ತಿದ್ದಂತೆ, ಅಣ್ಣನ ಎಂಟ್ರಿಯನ್ನು ವೀಕ್ಷಿಸಲು ಕಾದು ಕುಳಿತಿದ್ದ ಕಸಿನ್ ತಮ್ಮ ಸ್ಟೇಡಿಯಂನಲ್ಲಿ ಬಿಕ್ಕಳಿಸಿ ಅಳಲಾರಂಭಿಸಿದರು. ಅಣ್ತತಮ್ಮನ ಪ್ರೀತಿಯನ್ನು ಸಾರುವ ಈ ಆನಂದಭಾಷ್ಪದ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ. ಒಟ್ನಲ್ಲಿ ಆಯುಷ್ ಅತೀ ಚಿಕ್ಕ ವಯಸ್ಸಿಗೆ ಕ್ರಿಕೆಟ್‌ ಲೋಕಕ್ಕೆ ಎಂಟ್ರಿ ಆಗಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಅಂತ ಕ್ರಿಕೆಟ್ ಫ್ಯಾನ್ಸ್ ಆಶೀರ್ವಾದ ಮಾಡುತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *