ನಾಡಿನೆಲ್ಲೆಡೆ ಆಯುಧ ಪೂಜೆ, ವಿಜಯ ದಶಮಿ ಸಂಭ್ರಮ- ಗಗನಕ್ಕೇರಿದ ಹೂ, ಹಣ್ಣುಗಳ ದರ

ನಾಡಿನೆಲ್ಲೆಡೆ ಆಯುಧ ಪೂಜೆ, ವಿಜಯ ದಶಮಿ ಸಂಭ್ರಮ- ಗಗನಕ್ಕೇರಿದ ಹೂ, ಹಣ್ಣುಗಳ ದರ

ಬೆಂಗಳೂರು: ನಾಡಿನಾದ್ಯಂತ ದಸರಾ ಆಚರಿಸಲಾಗುತ್ತಿದೆ. ಆಯುಧ ಪೂಜೆ ಹಾಗೂ ವಿಜಯ ದಶಮಿ ಆಚರಿಸಲಾಗುತ್ತಿದೆ. ಸೋಮವಾರ ಆಯುಧ ಪೂಜೆ ಹಿನ್ನೆಲೆ ಹೂವು, ಹಣ್ಣುಗಳನ್ನು ಖರೀದಿಸಲು ಜನರು ಮುಗಿ ಬಿದ್ದಿದ್ದಾರೆ. ಸಿಲಿಕಾನ್‌ ಸಿಟಿ ಬೆಂಗಳೂರಿನ ಮಾರ್ಕೆಟ್‍ಗಳಲ್ಲಿ ಜನಸ್ತೋಮವೇ ತುಂಬಿ ತುಳುಕುತ್ತಿದೆ. ಆದರೆ ಹೂವು, ಹಣ್ಣುಗಳನ್ನು ಕೊಳ್ಳಲು ಬಂದಿರುವ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ನಗರದ ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ, ಬಸವನಗುಡಿ, ಮಡಿವಾಳ ಮಾರ್ಕೆಟ್‍ನಲ್ಲಿ ಹೂ, ಹಣ್ಣು, ತರಕಾರಿ ಖರೀದಿಗೆ ಜನಸಾಗರವೇ ಹರಿದುಬಂದಿದೆ. ಆಯುಧ ಪೂಜೆಗೆ ಬೂದುಕುಂಬಳಕಾಯಿ ಹಾಗೂ ಬಾಳೆ ಕಂಬಕ್ಕೆ ಫುಲ್ ಡಿಮ್ಯಾಂಡ್ ಇದೆ. ಈ ಹಿನ್ನೆಲೆ ಹೂವು ಹಣ್ಣುಗಳ ಬೆಲೆ ಗಗನಕ್ಕೇರಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಹೂ ಹಣ್ಣುಗಳ ದರ ಡಬಲ್ ಏರಿಕೆಯಾಗಿದೆ.

ಇದನ್ನೂ ಓದಿ: ಕಾವೇರಿ ನದಿಗೆ 5 ಬಾರಿ ಬಾಗಿನ ಅರ್ಪಿಸಿ ಬಿ.ಎಸ್ ಯಡಿಯೂರಪ್ಪ ದಾಖಲೆ – ಜೀವನದಿಯ ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ!

ಮಾರುಕಟ್ಟೆಯಲ್ಲಿ ಇಂದು ಮಲ್ಲಿಗೆ ಬೆಲೆ 1,200 ರೂಪಾಯಿ ಇದ್ದರೆ, ಸೇವಂತಿಗೆ ಬೆಲೆ 300 ರೂ. ಆಗಿದೆ. ಇನ್ನು ಗುಲಾಬಿ- 200 ರೂ. ಕನಕಾಂಬರ- 1,300 ರೂ. ಮಳ್ಳೆ ಹೂವು- 1000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ವಿಜಯದಶಮಿ ಹಾಗೂ ಆಯುಧ ಪೂಜೆ ಹಿನ್ನೆಲೆ ಹಣ್ಣುಗಳ ಬೆಲೆಯಲ್ಲಿ ಕೂಡ ಭಾರಿ ಏರಿಕೆ ಕಂಡಿದೆ. ಏಲಕ್ಕಿ ಬಾಳೆಹಣ್ಣು- 100 ರೂ. ಅನಾನಸ್- 70 ರೂ. ದಾಳಿಂಬೆ- 150 ರೂ. ಸೇಬು- 180 ರೂಪಾಯಿಗೆ ಮಾರಿಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಈ ಬಾರಿ ದಸರ ಹಬ್ಬಕ್ಕೆ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದ್ದರೂ ಸಹ ಜನರೆಲ್ಲರೂ ನಾಡಿನ ಹಬ್ಬದ ಆಚರಣೆ ಸಂಭ್ರಮದಲ್ಲಿದ್ದಾರೆ. ಬೆಲೆ ಏರಿಕೆಗೆ ರೈತ ನಗು ಬಿರಿದ್ರೆ ಗ್ರಾಹಕರು ಉಸಿರು ಬಿಟ್ಟಿದ್ದಾರೆ.

Shwetha M