ಇನ್ನುಮುಂದೆ ಬಾಲರಾಮನಿಗೆ ಪ್ರತಿದಿನ 1 ಗಂಟೆ ವಿಶ್ರಾಂತಿ!

ಇನ್ನುಮುಂದೆ ಬಾಲರಾಮನಿಗೆ ಪ್ರತಿದಿನ 1 ಗಂಟೆ ವಿಶ್ರಾಂತಿ!

ಅಯೋಧ್ಯೆ ರಾಮಮಂದಿರ ಜನವರಿ 22 ರಂದು ಲೋಕಾರ್ಪಣೆಗೊಂಡಿದೆ. ರಾಮನನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದುಬರುತ್ತಿದೆ. ನಿತ್ಯ ಲಕ್ಷಾಂತರ ಮಂದಿ ಭಕ್ತರು ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಅಯೋಧ್ಯೆಯ ರಾಮಮಂದಿರದ ಬಾಗಿಲು ಇನ್ನುಮುಂದೆ ಪ್ರತಿದಿನ 1 ಗಂಟೆ ಮುಚ್ಚಿರಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಇನ್ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ ಮ್ಯಾರೇಜ್ ಸರ್ಟಿಫಿಕೇಟ್!

ಈ ಬಗ್ಗೆ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾಹಿತಿ ನೀಡಿದ್ದಾರೆ. ಅಯೋಧ್ಯೆಯ ರಾಮಮಂದಿರದ ಬಾಗಿಲು ಇನ್ನು ಮುಂದೆ ಪ್ರತಿದಿನ 1 ಗಂಟೆ ಮುಚ್ಚಿರಲಿದೆ. ಈ ವೇಳೆ ಭಕ್ತರಿಗೆ ಬಾಲರಾಮನ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು  ತಿಳಿಸಿದ್ದಾರೆ.

‘ಬಾಲರಾಮ ಇನ್ನೂ ಐದು ವರ್ಷದವನು. ದೀರ್ಘ ಸಮಯದವರೆಗೆ ಎಚ್ಚರವಿರಲು ಸಾಧ್ಯವಿಲ್ಲ. ಬಾಲರಾಮನಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಹೀಗಾಗಿ ಪ್ರತಿದಿನ ಮಧ್ಯಾಹ್ನ 12.30 ರಿಂದ 1.30ರವರೆಗೆ ದೇವಾಲಯದ ಬಾಗಿಲನ್ನು ಮುಚ್ಚಲು ಟ್ರಸ್ಟ್‌ ನಿರ್ಧರಿಸಿದೆ’ ಎಂದು ತಿಳಿಸಿದ್ದಾರೆ.

ರಾಮ ಮಂದಿರ ಉದ್ಘಾಟನೆಯಾದ ದಿನದಿಂದಲೇ (ಜ.22) ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅಪಾರ ಪ್ರಮಾಣದಲ್ಲಿ ಭಕ್ತರು ಬರುತ್ತಿದ್ದ ಕಾರಣ ದರ್ಶನದ ಅವಧಿಯನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ವಿಸ್ತರಿಸಲಾಗಿತ್ತು. ಈ ವೇಳೆ ಲಕ್ಷಾಂತರ ಭಕ್ತರಿಗೆ ಬಾಲರಾಮನ ದರ್ಶನ ಸಿಗುತ್ತಿತ್ತು.

Shwetha M