ಅಯೋಧ್ಯೆ ರಾಮ ಮಂದಿರದ ಭದ್ರತೆಗೆ ವಾರ್ಷಿಕ ವೆಚ್ಚ 38 ಕೋಟಿ ರೂಪಾಯಿ!

ಅಯೋಧ್ಯೆ ರಾಮ ಮಂದಿರದ ಭದ್ರತೆಗೆ ವಾರ್ಷಿಕ ವೆಚ್ಚ 38 ಕೋಟಿ ರೂಪಾಯಿ!

ನವದೆಹಲಿ: ಉತ್ತರ ಪ್ರದೇಶದಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 2024 ಜನವರಿ ವೇಳೆಗೆ ರಾಮ ಮಂದಿರ ದರ್ಶನಕ್ಕೆ ಮುಕ್ತವಾಗಲಿದೆ. ಇದೀಗ ಶ್ರೀರಾಮ ಮಂದಿರದ ಭದ್ರತೆಗೆ ಬರೋಬ್ಬರಿ 38 ಕೋಟಿ ರೂಪಾಯಿಯನ್ನು ವಾರ್ಷಿಕ ವೆಚ್ಚವಾಗಲಿದೆ ಎಂದು ವರದಿಯಾಗಿದೆ.

ರಾಮ ಮಂದಿರ ಭದ್ರತಾ ಕಾರ್ಯಕ್ಕೆ ಅಗತ್ಯವಿರುವ ಮೊತ್ತವನ್ನು ಈಗಾಗಲೇ ಉತ್ತರ ಪ್ರದೇಶ ಸರ್ಕಾರವು ಅನುಮೋದಿಸಿದೆ. ಇದನ್ನು ಯುಪಿ ನಿರ್ಮಾಣ್ ನಿಗಮ್‌ಗೆ ವಹಿಸಲಾಗಿದೆ. ನಿರ್ಮಾಣ ಹಂತದಲ್ಲಿರುವ ದೇವಸ್ಥಾನದ ಭದ್ರತೆಯ ಎಲ್ಲಾ ಅಂಶಗಳನ್ನು ವಿವರಿಸುವ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸರ್ಕಾರಕ್ಕೆ ಕಳಿಸುವ ನಿಟ್ಟಿನಲ್ಲಿ ಕೆಲಸಗಳು ಪ್ರಗತಿಯಲ್ಲಿದೆ ಎಂದು ಹಿರಿಯ ಅಧಿಕಾರಿ ಗೌರವ್ ದಯಾಳ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಿಮ್ಮಪ್ಪನ ಸನ್ನಿಧಿಯಲ್ಲಿ ಹೆಚ್ಚಾದ ಭಕ್ತರ ಸಂಖ್ಯೆ – ತಿಮ್ಮಪ್ಪನ ದರ್ಶನಕ್ಕೆ 12 ಗಂಟೆ ಕಾಯುವುದು ಅನಿವಾರ್ಯ! 

ಶ್ರೀರಾಮ ಮಂದಿರಕ್ಕೆ ನವೆಂಬರ್‌ನ ಒಳಗಾಗಿ ಯಾವೆಲ್ಲಾ ರೀತಿಯಲ್ಲಿ ಭದ್ರತೆ ನೀಡಬೇಕು. ಆಧುನಿಕ ವ್ಯವಸ್ಥೆಗಳನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎನ್ನುವುದನ್ನು ತಿಳಿಸುವ ಡಿಪಿಆರ್‌ ಸಿದ್ಧವಾಗಬೇಕು. ನವೆಂಬರ್‌ ಒಳಗಾಗಿ ಇದು ಸರ್ಕಾರದ ಮುಂದಿರಬೇಕು ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಮೊದಲ ಹಂತದ ಭದ್ರತಾ  ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರೆಯುವ ನಿರೀಕ್ಷೆ ಇದೆ. ವೈಮಾನಿಕ ಮತ್ತು ಜಲಮೂಲ ದಾಳಿಯಿಂದ ದೇವಸ್ಥಾನವನ್ನು ಸುರಕ್ಷಿತವಾಗಿಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ನಗರದ ಆಡಳಿತವು ದೇವಾಲಯವನ್ನು ಹೊರಗಿನಿಂದ ರಕ್ಷಿಸಿದರೆ, ಆಂತರಿಕ ವ್ಯವಸ್ಥೆಗಳನ್ನು ದೇವಸ್ಥಾನದ ಟ್ರಸ್ಟ್ ನೋಡಿಕೊಳ್ಳಲಿದೆ. ಅಷ್ಟೇ ಅಲ್ಲದೇ ದೇವಾಲಯದ ಹೊರಗೆ ಅರೆಸೇನಾ ಪಡೆಗಳನ್ನು ನಿಯೋಜನೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗುತ್ತಿದೆ ಎಂದರು.

ಇನ್ನು ದೇವಾಲಯದ ಬಳಿ ಹರಿಯುವ ಸರಯು ನದಿಯಿಂದ ಹೊರಹೊಮ್ಮುವ ಸಂಭಾವ್ಯ ಬೆದರಿಕೆಗಳ ಬಗ್ಗೆಯೂ ಗಮನಹರಿಸಲಾಗುತ್ತಿದ್ದುಇದಕ್ಕಾಗಿ ದೇವಾಲಯದ ಬಳಿ ಬೋಟ್‌ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ. ಎಲ್ಲ ಸಿಸಿಟಿವಿ ಕ್ಯಾಮೆರಾಗಳ ಮೇಲೆ ನಿಗಾ ಇಡಲು ನಿಯಂತ್ರಣ ಕೊಠಡಿಯನ್ನೂ ದೇವಸ್ಥಾನದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ರಾಮ ಮಂದಿರ ಭದ್ರತಾ ಯೋಜನೆ ಬಗ್ಗೆ ಹಿರಿಯ ಅಧಿಕಾರಿ ಗೌರವ್ ದಯಾಳ್ ಮಾತನಾಡಿದ್ದಾರೆ. ಸರ್ಕಾರದ ಭದ್ರತಾ ಯೋಜನೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ. ಇದಕ್ಕಾಗಿ 38 ಕೋಟಿ ರೂಪಾಯಿ ಸಂಭಾವ್ಯ ವೆಚ್ಚವಾಗಬಹುದು. ಯುಪಿ ಸರ್ಕಾರವು ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಲುವಾಗಿ  ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ. ಮುಂದಿನ ವರ್ಷ ರಾಮ ಮಂದಿರ ಅನಾವರಣವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

suddiyaana