ಅಯೋಧ್ಯೆ ರಾಮ ಮಂದಿರದಲ್ಲಿ ಹೊಸ ಆವಿಷ್ಕಾರ – ಮಂದಿರಕ್ಕೆ ಟೈಟಾನಿಯಂ ಬಳಕೆ!

ಶ್ರೀರಾಮ ಜನ್ಮಭೂಮಿ ರಾಮಮಂದಿರ ನಿರ್ಮಾಣವಾಗಿ ಒಂದು ವರ್ಷ ಕಳೆದಿದೆ. ಈಗಾಗಲೇ ಲಕ್ಷಾಂತರ ಮಂದಿ ಭಕ್ತರು ಬಾಲ ರಾಮನನ್ನು ಕಣ್ತುಂಬಿಕೊಂಡಿದ್ದಾರೆ. ಇದೀಗ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಇದು ಆಧ್ಯಾತ್ಮಿಕ ಶಕ್ತಿಯ ಕೇಂದ್ರ ಮಾತ್ರವಲ್ಲದೆ, ಆಧುನಿಕ ತಂತ್ರಜ್ಞಾನ ಮತ್ತು ಸನಾತನ ನಂಬಿಕೆಯ ವಿಶಿಷ್ಟ ಸಂಗಮದ ಸಂಕೇತವೂ ಆಗುತ್ತಿದೆ. ದೀರ್ಘಕಾಲ ಬಾಳಿಕೆ ಬರಲಿ ಎನ್ನುವ ಕಾರಣಕ್ಕೆ ರಾಮ ಮಂದಿರದಲ್ಲಿ ಟೈಟಾನಿಯಂ ಬಳಸಲಾಗಿದೆ.
ಇದನ್ನೂ ಓದಿ: PAK ಎದೆ ಸೀಳೋಕೆ ಅಗ್ನಿ-5 ರೆಡಿ – ಭಾರತಕ್ಕೆ ಬಂಕರ್ ಬಸ್ಟರ್ ಬಲ!
ಅಯಧ್ಯೆ ರಾಮಮಂದಿರದಲ್ಲಿ ನೆಲ, ಮೊದಲ & ಎರಡನೇ ಮಹಡಿಗಳಲ್ಲಿ ಟೈಟಾನಿಯಂ ನಿರ್ಮಿತ ಜಾಲರಿಗಳನ್ನು ಅಳವಡಿಸಲಾಗುತ್ತಿದೆ. ಟೈಟಾನಿಯಂ ಸಾವಿರ ವರ್ಷಗಳಿಗೂ ಹೆಚ್ಚು ಜೀವಿತಾವಧಿಯನ್ನು ಹೊಂದಿದೆ. ಭಾರತ ಸರ್ಕಾರದ ಒಂದು ಸಂಸ್ಥೆಯು ಈ ಜಾಲರಿಗಳನ್ನು ತಯಾರಿಸಿದೆ. ಮೂರು ಮಹಡಿಗಳಲ್ಲಿ 32 ಜಾಲರಿಗಳನ್ನು ಅಳವಡಿಸಲಾಗುವುದು. ಬಲೆಗಳನ್ನು ಅಳವಡಿಸುವ ಕೆಲಸ ಆಗಸ್ಟ್ 15 ರೊಳಗೆ ಪೂರ್ಣಗೊಳ್ಳಲಿದೆ. ಇಡೀ ದೇಶದಲ್ಲಿ ಟೈಟಾನಿಯಂ ಲೋಹವನ್ನು ಬಳಸುತ್ತಿರುವ ಮೊದಲ ದೇವಾಲಯ ಅಯೋಧ್ಯೆ ರಾಮಮಂದಿರ. ಅಯೋಧ್ಯೆಯ ರಾಮ ಮಂದಿರವು 1000 ವರ್ಷಗಳ ಕಾಲ ಸುರಕ್ಷಿತವಾಗಿರಲು ಇಂತಹ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾಹಿತಿ ನೀಡಿದ್ದಾರೆ.
ಪೀಠ ಮತ್ತು ಗೋಡೆ ಮೇಲಿನ ರಾಮ ಕಥೆಯ ಕೆಲಸವು ಜುಲೈ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ನಮಗೆ ವಿಶ್ವಾಸವಿದೆ. ದೇವಾಲಯದ ಕೆಳಗಿನ ಸ್ತಂಭದ ಮೇಲೆ 800 ಅಡಿ ಉದ್ದದಲ್ಲಿ ರಾಮಕಥೆಯನ್ನು ಕೆತ್ತಲಾಗುತ್ತಿದೆ. ಆಗಸ್ಟ್ 15 ರ ವೇಳೆಗೆ, ರಾಮ ದೇವಾಲಯದಲ್ಲಿ 32 ಜಾಲರಿಗಳ ಕೆಲಸವೂ ಪೂರ್ಣಗೊಳ್ಳುತ್ತದೆ. ರಾಮನ ಜನನದಿಂದ ಪಟ್ಟಾಭಿಷೇಕದವರೆಗಿನ ಸಂಪೂರ್ಣ ಕಥೆಯು ಅಲ್ಲಿರಲಿದೆ. ಟೈಟಾನಿಯಂ ಒಂದು ವಿಶೇಷ ರೀತಿಯ ಲೋಹವಾಗಿದ್ದು, ಇದನ್ನು ಜಲಾಂತರ್ಗಾಮಿ ನೌಕೆಗಳಲ್ಲಿ ಬಳಸಲಾಗುತ್ತದೆ. ದೇವಾಲಯದಲ್ಲಿ ಮೊದಲ ಬಾರಿಗೆ ಈ ಲೋಹವನ್ನು ಬಳಸಲಾಗುತ್ತಿದೆ. ಇದು ಎಂದಿಗೂ ತುಕ್ಕು ಹಿಡಿಯುವುದಿಲ್ಲ. ಇದನ್ನು ಸಾಮಾನ್ಯ ಲೋಹಗಳಿಗಿಂತ ಭಿನ್ನವಾದ ಲೋಹವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ನೋಡಿರಿ

