ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣ ಪೂರ್ಣ – ನವೆಂಬರ್‌ 25ಕ್ಕೆ ಭವ್ಯ ಧ್ವಜಾರೋಹಣ ಸಮಾರಂಭ

ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣ ಪೂರ್ಣ – ನವೆಂಬರ್‌  25ಕ್ಕೆ  ಭವ್ಯ ಧ್ವಜಾರೋಹಣ ಸಮಾರಂಭ

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯ ಬಾಲ ರಾಮನನ್ನು ದರ್ಶಿಸಲು ಪ್ಲಾನ್ ಮಾಡುತ್ತಿದ್ದರೆ, ತಪ್ಪದೇ ಈ ವಿಷಯ ತಿಳಿಯಿರಿ. ಅದೇನೆಂದರೆ, ಶ್ರೀ ರಾಮ ಜನ್ಮಭೂಮಿ ಮಂದಿರದ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಅಂದಹಾಗೆ, ಶ್ರೀ ರಾಮನ ಭವ್ಯ ಉದ್ಘಾಟನೆಯು ಮುಂದಿನ ತಿಂಗಳು (ನವೆಂಬರ್‌) 25 ರಂದು ಮಾಡಲು ಎಲ್ಲಾ ಸಜ್ಜಾಗಿದೆ. ಮೂಲಗಳ ಪ್ರಕಾರ, ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ರಾಮ ಮಂದಿರದ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದೆ. ನವೆಂಬರ್ 25, 2025 ಭವ್ಯ ಧ್ವಜಾರೋಹಣ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಬಾಕಿ ಇದ್ದ ಎಲ್ಲಾ ಕೆಲಸಗಳು ಈಗ ಸಂಪೂರ್ಣವಾಗಿ ಪೂರ್ಣಗೊಂಡಿವೆ.

ಭಕ್ತರಲ್ಲಿ ಭಕ್ತಿಯನ್ನು ಜಾಗೃತಗೊಳಿಸಲು ದೇವಾಲಯದ ಸೌಂದರ್ಯವನ್ನು ತಿಳಿಯಿರಿ. ಆಲಯದ ಪ್ರಾಂಗಣದಲ್ಲಿ 5 ವಿಶೇಷ ಸಭಾಂಗಣಗಳನ್ನು ನೋಡಬಹುದು. ಅವುಗಳೆಂದರೆ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನಾ ಮಂಟಪಗಳಾಗಿವೆ. ಮಧ್ಯ ಭಾಗದಲ್ಲಿ ಶ್ರೀ ರಾಮ ದರ್ಬಾರ್ ಇದೆ, ಅಲ್ಲಿ ರಾಮ, ಸೀತೆ, ಹನುಮಾನ್ ಮತ್ತು ಭರತ, ಲಕ್ಷ್ಮಣ ಮತ್ತು ಶತ್ರುಘ್ನರ ಅಮೃತಶಿಲೆಯ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ರಾಮ ಮತ್ತು ಸೀತೆಯು ಚಿನ್ನದ ಲೇಪಿತ ಸಿಂಹಾಸನದ ಮೇಲೆ ಕುಳಿತಿರುವುದನ್ನು ನೀವು ನೋಡುತ್ತೀರಿ. ಹನುಮಂತ ಮತ್ತು ಭರತ ಅವರ ಪಾದಗಳ ಸಮೀಪ ಇದ್ದರೆ, ಲಕ್ಷ್ಮಣ ಮತ್ತು ಶತ್ರುಘ್ನರು ಹಿಂದೆ ನಿಂತಿದ್ದಾರೆ.

ದೇವಸ್ಥಾನದ ಒಳಭಾಗದಲ್ಲಿ ನೀವು ಅಸಾಧರಣವಾದ ವಾಸ್ತುಶಿಲ್ಪ, ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತೀರಿ. ರಾಮಾಯಣದ ಕಥೆಗಳನ್ನು ಚಿತ್ರಿಸುವ ವಿನ್ಯಾಸಗಳನ್ನು ನೀವು ನೋಡುತ್ತೀರಿ. ಇಂತಹ 140 ಸುಂದರವಾಗಿ ಕೆತ್ತಿದ ಕಂಬಗಳಿವೆ. ಪ್ರತಿಯೊಂದು ಸ್ತಂಭವು ಹಿಂದೂ ಧರ್ಮದ ಸಾರವನ್ನು ಪ್ರತಿಬಿಂಬಿಸುತ್ತದೆ. ಆಲಯದೊಳಗೆ ಒಟ್ಟು 392 ಸ್ತಂಭಗಳಿವೆ. ಇದು ನಮ್ಮ ಭಾರತದ ಕುಶಲಕರ್ಮಿಗಳ ಚಮತ್ಕಾರದ ಕನ್ನಡಿಯಾಗಿದೆ

 

Kishor KV