ಅಯೋಧ್ಯಾ ಮಂದಿರ ಸಂಪೂರ್ಣ ಸಿದ್ಧ! – ನ.25 ಕ್ಕೆ ಮೋದಿ ಧ್ವಜಾರೋಹಣ

ಅಯೋಧ್ಯಾ ಮಂದಿರ ಸಂಪೂರ್ಣ ಸಿದ್ಧ! – ನ.25 ಕ್ಕೆ ಮೋದಿ ಧ್ವಜಾರೋಹಣ

ಅಯೋಧ್ಯೆಯ ರಾಮ ಮಂದಿರ ಭಕ್ತ ನೆಲೆಬೀಡು ಮಾತ್ರವಲ್ಲದೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವೂ ಹೌದು. ರಾಮಮಂದಿರ ನೋಡಲು ನಿತ್ಯ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇದೀಗ ಅಯೋಧ್ಯೆ ರಾಮಮಂದಿರವನ್ನು ಈಗ ಸಂಪೂರ್ಣವಾಗಿ ನಿರ್ಮಿಸಲಾಗಿದೆ.

ಇದನ್ನೂ ಓದಿ:ಚಿಂತೆಯಲ್ಲೇ ಸೊರಗಿ ಸಣ್ಣ ಆದ ದರ್ಶನ್! – ಎರಡು ತಿಂಗಳಲ್ಲಿ ಬರೋಬ್ಬರಿ 10 ಕೆಜಿ ಇಳಿಕೆ!

ಭಗವಾನ್ ರಾಮನಿಗೆ ಸಮರ್ಪಿತವಾದ ಭವ್ಯ ದೇವಾಲಯವು ಪವಿತ್ರ ಸಂಕೀರ್ಣದ ಒಳಗೆ ಆರು ಸಹಾಯಕ ದೇವಾಲಯಗಳೊಂದಿಗೆ ಪೂರ್ಣಗೊಂಡಿದೆ. ಶಿವ, ಗಣೇಶ, ಹನುಮಾನ್, ಸೂರ್ಯ, ಭಗವತಿ ಮತ್ತು ಅನ್ನಪೂರ್ಣ ದೇವಿಗೆ ಮೀಸಲಾಗಿರುವ ದೇವಾಲಯಗಳ ನಿರ್ಮಾಣವೂ ಪೂರ್ಣಗೊಂಡಿದೆ. ದೇವಾಲಯ ನಿರ್ಮಾಣ ಪೂರ್ಣಗೊಂಡಿದೆ ಎಂಬುದನ್ನು ಸಂಕೇತಿಸಲು ಪ್ರತಿ ದೇವಾಲಯದ ಮೇಲೆ ಧ್ವಜಗಳು ಮತ್ತು ಕಲಶಗಳನ್ನು ಸ್ಥಾಪಿಸಲಾಗಿದೆ. ರಾಮಮಂದಿರಕ್ಕೆ 3,000 ಕೋಟಿ ರೂ. ಹರಿದುಬಂದಿದ್ದು, ಅದರಲ್ಲಿ ದೇಗುಲ ಸಂಪೂರ್ಣ ನಿರ್ಮಾಣಕ್ಕೆ 1,500 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡ ಔಪಚಾರಿಕ ಆಚರಣೆಗಾಗಿ ನ.25 ರಂದು ಅದ್ಧೂರಿ ಧ್ವಜಾರೋಹಣ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದ್ದು, ಭಾರತ ಮತ್ತು ವಿದೇಶಗಳಿಂದ ಸಾವಿರಾರು ಭಕ್ತರು, ಸಂತರು, ಗಣ್ಯರು ಆಗಮಿಸುವ ನಿರೀಕ್ಷೆಯಿದೆ.

ರಾಮಮಂದಿರ ಟ್ರಸ್ಟ್‌ಗೆ ಪ್ರಪಂಚದಾದ್ಯಂತ ಭಕ್ತರಿಂದ ಅಗಾಧ ಬೆಂಬಲ ವ್ಯಕ್ತವಾಗಿದೆ. ಟ್ರಸ್ಟ್ 3,000 ಕೋಟಿ ರೂ.ಗಳಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿದೆ. ಇದರಲ್ಲಿ 1,500 ಕೋಟಿ ರೂ.ಗಳನ್ನು ಈಗಾಗಲೇ ದೇವಾಲಯ ನಿರ್ಮಾಣ, ಮೂಲಸೌಕರ್ಯ ಮತ್ತು ಆವರಣದ ಸುತ್ತಮುತ್ತಲಿನ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ. ಉಳಿದ 1,800 ಕೋಟಿ ರೂ.ಗಳನ್ನು ದೇವಾಲಯ ಮತ್ತು ಪಕ್ಕದ ಸೌಲಭ್ಯಗಳ ಅಂತಿಮ ಸ್ಪರ್ಶ, ಸೌಂದರ್ಯೀಕರಣ ಮತ್ತು ನಿರ್ವಹಣೆಗೆ ಬಳಸಲಾಗುವುದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

Shwetha M