ಶ್ರೀರಾಮನ ಭಕ್ತರಿಗೆ ಗುಡ್‌ನ್ಯೂಸ್! – ಇನ್ಮುಂದೆ ಅಯೋಧ್ಯೆಯಲ್ಲಿ ರಾಮಲಲ್ಲಾ ಜೊತೆ ಈ ದೇವರುಗಳ ದರ್ಶನ ಭಾಗ್ಯ!

ರಾಮ ಭಕ್ತರಿಗೆ ಮತ್ತೊಂದು ಶುಭ ಸುದ್ದಿ. ರಾಮ ಮಂದಿರ ನಿರ್ಮಾಣದ ಎಲ್ಲ ಕಾರ್ಯಗಳು ಪೂರ್ಣಗೊಂಡಿವೆ. ಮಂದಿರದಲ್ಲಿ ಸಂಕೀರ್ಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಇತರ ದೇವರುಗಳ ದೇವಸ್ಥಾನಗಳೂ ಪೂರ್ಣಗೊಂಡಿದ್ದು, ಇನ್ಮುಂದೆ ಬಾಲ ರಾಮನ ಜೊತೆ ಆರು ದೇವರುಗಳ ದರ್ಶನ ಪಡೆಯಬಹುದು.
ಇದನ್ನೂ ಓದಿ: ಅಯೋಧ್ಯಾ ಮಂದಿರ ಸಂಪೂರ್ಣ ಸಿದ್ಧ! – ನ.25 ಕ್ಕೆ ಮೋದಿ ಧ್ವಜಾರೋಹಣ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಆಗಿರುವ ರಾಮಲಲ್ಲಾ ರಾಮಮಂದಿರ ನಿರ್ಮಾಣದ ಕಾರ್ಯ ಎಲ್ಲ ಪೂರ್ಣಗೊಂಡಿದೆ. ಮುಖ್ಯ ದೇವಾಲಯ, ಸಂಕೀರ್ಣದಲ್ಲಿನ ಶಿವ, ಗಣೇಶ, ಹನುಮಾನ್, ಸೂರ್ಯದೇವ, ಭಗವತಿ, ಅನ್ನಪೂರ್ಣ ದೇವತೆ ಮತ್ತು ಶೇಷಾವತಾರ ದೇವಾಲಯಗಳೂ ಪೂರ್ತಿಯಾಗಿವೆ. ಈ ದೇವಾಲಯಗಳ ಮೇಲೆ ಧ್ವಜಸ್ತಂಭಗಳು ಮತ್ತು ಕಲಶವನ್ನು ಸ್ಥಾಪಿಸಲಾಗಿದೆ. ಸಪ್ತ ಮಂಟಪ ಅಂದರೆ ಮಹರ್ಷಿ ವಾಲ್ಮೀಕಿ, ವಸಿಷ್ಠ, ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಷಾದರಾಜ, ಶಬರಿ ಮತ್ತು ಅಹಲ್ಯೆಯ ಮಂಟಪಗಳೂ ಪೂರ್ಣಗೊಂಡಿದೆ. ಸಂತ ತುಳಸಿದಾಸ ದೇವಾಲಯ, ಜಟಾಯು ಮತ್ತು ಅಳಿಲಿನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಇದೀಗ ರಾಮಲಲ್ಲಾನ ದರ್ಶನ ಮಾಡೋಕೆ ಹೋಗುವವರಿಗೆ ಬೇರೆ ಬೇರೆ ದೇವರುಗಳ ದರ್ಶನ ಇನ್ಮುಂದೆ ಆಗಲಿದೆ. ಈ ಸಂಬಂಧ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥರು ಮಾಹಿತಿ ಕೊಟ್ಟಿದ್ದಾರೆ.
ರಾಮಮಂದಿರ ಸಂಕೀರ್ಣದ ಹೊರಭಾಗದಲ್ಲಿ ರಸ್ತೆಗಳು ಮತ್ತು ನೆಲಹಾಸು ಕೆಲಸ ಕೊನೆಯ ಹಂತದಲ್ಲಿದೆ. 10 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಪಂಚವಟಿ ತ್ವರಿತ ವೇಗದಲ್ಲಿ ನಡೆಯುತ್ತಿದೆ. 3.5 ಕಿಲೋಮೀಟರ್ ಉದ್ದದ ಗಡಿ ಗೋಡೆ, ಟ್ರಸ್ಟ್ ಕಚೇರಿ, ಅತಿಥಿ ಗೃಹ ಮತ್ತು ಸಭಾಂಗಣದಂತಹ ಜನರಿಗೆ ಬೇಕಾದ ಕೆಲಸಗಳು ಪ್ರಸ್ತುತ ನಡೆಯುತ್ತಿವೆ ಎಂದು ಮಾಹಿತಿ ನೀಡಿದೆ.
ಇದೇ ಮೊದಲ ಬಾರಿಗೆ ಭಕ್ತರು ಅಯೋಧ್ಯಾ ರಾಮನ ಮಂದಿರದ ಸುತ್ತ ಪ್ರದಕ್ಷಿಣೆ ಹಾಕಲಿದ್ದಾರೆ. ಅಕ್ಷಯ ನವಮಿಯಂದು, ಲಕ್ಷಾಂತರ ಭಕ್ತರು ಸರಯು ನದಿಯಲ್ಲಿ ಪುಣ್ಯ ಸ್ನಾನದ ಬಳಿಕ ತಮ್ಮ ಪ್ರದಕ್ಷಿಣೆಯನ್ನು ಪ್ರಾರಂಭಿಸುತ್ತಾರೆ. ಕಾರ್ತಿಕ ಅಕ್ಷಯ ನವಮಿಯಂದು ಭಗವಾನ್ ಶ್ರೀರಾಮನ ನಗರವನ್ನು ಪ್ರದಕ್ಷಿಣೆ ಹಾಕುವುದರಿಂದ ಎಲ್ಲ ಪಾಪಗಳು ತೊಳೆಯಲ್ಪಡುತ್ತವೆ ಎಂದು ನಂಬಲಾಗಿದೆ.

ನೋಡಿರಿ

