ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಾಂಕ ನಿಗದಿ – ಜನವರಿಯಲ್ಲೇ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಾಂಕ ನಿಗದಿ – ಜನವರಿಯಲ್ಲೇ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ

ನವದೆಹಲಿ: ಅಯೋಧ್ಯಾ ರಾಮಮಂದಿರ  ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ವೈಭವೋಪೇತ ಶ್ರೀರಾಮಮಂದಿರದ ಉದ್ಘಾಟನೆ ಮುಂದಿನ ಜನವರಿಯಲ್ಲೇ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಈ ಮಂದಿರವನ್ನು ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರಕ್ಕಾಗಿ ಸಿದ್ದವಾಯ್ತು ವಿಶೇಷ ಬೀಗ – 400 ಕೆಜಿ ತೂಕ, 10 ಅಡಿ ಎತ್ತರದ ಬೀಗ ತಯಾರಿಸಿದ ದಂಪತಿ!

ರಾಮಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಇದೀಗ ದೇವಾಲಯದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾ ಕಾರ್ಯವನ್ನು ಜನವರಿ 22ರ ಸೋಮವಾರ ನಡೆಸಲು ಅಯೋಧ್ಯೆ ಟ್ರಸ್ಟ್‌ ತೀರ್ಮಾನಿಸಿದೆ. ಶ್ರೀರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆಗೆ ಇತರ ಪ್ರಮುಖ ಖಾತೆಗಳ ಸಚಿವವರು, ಗಣ್ಯರು, ನಾಯಕರು ಮುಂತಾದವರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಮಾರು 2 ವರ್ಷಗಳಿಂದ ಈ ಮಂದಿರದ ನಿರ್ಮಾಣ ನಡೆಯುತ್ತಿದೆ. ಪ್ರಧಾನಿ ಮೋದಿ 2020ರ ಆ. 5ರಂದು ಈ ಮಂದಿರಕ್ಕೆ ಗುದ್ದಲಿ ಪೂಜೆ ನಡೆಸಿದ್ದರು. ನೂತನ ಮಂದಿರದಲ್ಲಿ ಸೂರ್ಯ, ಗಣೇಶ, ಶಿವ, ದುರ್ಗೆ, ಅನ್ನಪೂರ್ಣ, ಹನುಮಾನ್ ದೇವರ ಪ್ರತಿಷ್ಠಾಪನೆಯೂ ಇರಲಿದೆ.

suddiyaana