ಅಯೋಧ್ಯೆಯಲ್ಲಿ ಹರಿದು ಬಂತು ಭಕ್ತಸಾಗರ – 15 ದಿನಗಳಲ್ಲಿ ದಾಖಲೆ ಮಟ್ಟದಲ್ಲಿ ಕಾಣಿಕೆ ಸಂಗ್ರಹ!

ಅಯೋಧ್ಯೆಯಲ್ಲಿ ಹರಿದು ಬಂತು ಭಕ್ತಸಾಗರ – 15 ದಿನಗಳಲ್ಲಿ ದಾಖಲೆ ಮಟ್ಟದಲ್ಲಿ ಕಾಣಿಕೆ ಸಂಗ್ರಹ!

ಅಯೋಧ್ಯೆ ರಾಮಮಂದಿರ ಜನವರಿ 22 ರಂದು ಲೋಕಾರ್ಪಣೆಗೊಂಡಿದೆ. ರಾಮಮಂದಿರ ಲೋಕಾರ್ಪಣೆ ಬಳಿಕ ರಾಮನೂರಿಗೆ ಭಕ್ತ ಸಾಗರವೇ ಅಯೋಧ್ಯೆಯತ್ತ ಹರಿದು ಬರುತ್ತಿದೆ. ಲಕ್ಷಾಂತರ ಮಂದಿ ಮರ್ಯಾದ ಪುರುಶೋತ್ತಮನ ದರ್ಶನ ಪಡೆಯುತ್ತಿದ್ದಾರೆ. ಇದೀಗ 15 ದಿನಗಳ ಹುಂಡಿ ಎಣಿಕೆ ಆಗಿದ್ದು, ಕೋಟ್ಯಾಂತರ ರೂಪಾಯಿ ಕಾಣಿಕೆ ಬಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಫಾ ನಿರಾಶ್ರಿತರ ಮೇಲೆ ಮತ್ತೆ ದಾಳಿ ಮಾಡಿದ ಇಸ್ರೇಲ್‌ – 37 ಮಂದಿ ಸಾವು

ರಾಮಮಂದಿರ ಲೋಕರ್ಪಾಣೆ ಆಗಿದ್ದೇ ಆಗಿದ್ದು ನಿತ್ಯ 2 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿ ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ. ಅಯೋಧ್ಯೆಯ ರಾಮಮಂದಿರ ಕಾಣಿಕೆ ಕೂಡ ದಾಖಲೆಯ ಶಿಖರವೇರುತ್ತಿದೆ. ಕಳೆದ ಜನವರಿ 22 ರಂದು ರಾಮಲಲ್ಲಾ ಪ್ರತಿಷ್ಠಾಪನೆ ಬಳಿಕ ಅಯೋಧ್ಯೆಗೆ ಭಕ್ತರ ಸಂಖ್ಯೆ ಸಾಗರದಂತೆ ಹರಿದು ಬರುತ್ತಲೇ ಇದೆ. ಕಳೆದ 15 ದಿನಗಳಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಪ್ರತಿನಿತ್ಯ 2 ಲಕ್ಷಕ್ಕೂ ಹೆಚ್ಚು ಭಕ್ತರು ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ಕೇವಲ 15 ದಿನಗಳಲ್ಲಿ ಕಾಣಿಕೆ ರೂಪದಲ್ಲಿ ಶ್ರೀರಾಮಮಂದಿರಕ್ಕೆ 12.8 ಕೋಟಿ ಹರಿದು ಬಂದಿರೋದು ಹೊಸ ದಾಖಲೆ ಸೃಷ್ಟಿದೆ ಎಂದು ಹೇಳಲಾಗ್ತಿದೆ.

ಅಯೋಧ್ಯೆನಗರಿ ಅಕ್ಷರಶಃ ತ್ರೇತಾಯುಗದ ರಾಮರಾಜ್ಯವಾಗಿ ಮಾರ್ಪಟ್ಟಿದೆ. ಬಾಲರಾಮನನ್ನು ಕಾಣಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಲಗ್ಗೆ ಇಡುತ್ತಿದ್ದಾರೆ. ಪ್ರತಿಷ್ಠಾಪನೆ ಆದ ಮೇಲೆ ದೇಶ, ವಿದೇಶಗಳಿಂದ ಜನರು ಅಯೋಧ್ಯೆ ಕಡೆಗೆ ಹೊರಟಿದ್ದಾರೆ.

Shwetha M