ಡೆಲ್ಲಿ ತಂಡಕ್ಕೆ ಅಕ್ಷರ್ ಪಟೇಲ್ ಕ್ಯಾಪ್ಟನ್ – ಕಪ್ ಗೆಲ್ಲಿಸಿಕೊಡ್ತಾರಾ ಆಲ್ ರೌಂಡರ್?

ಡೆಲ್ಲಿ ತಂಡಕ್ಕೆ ಅಕ್ಷರ್ ಪಟೇಲ್ ಕ್ಯಾಪ್ಟನ್ – ಕಪ್ ಗೆಲ್ಲಿಸಿಕೊಡ್ತಾರಾ ಆಲ್ ರೌಂಡರ್?

18ನೇ ಸೀಸನ್.. 10 ಟೀಂ.. 74 ಮ್ಯಾಚ್.. ಮಾರ್ಚ್ 22ರಿಂದ ಮೇ 25ರವರೆಗೆ ನಡೆಯಲಿರೋ ಐಪಿಎಲ್​ನ ಬಿಗ್ ಬ್ಯಾಟಲ್​ಗೆ ಭಾರತದ 13 ನಗರಗಳು ಸಾಕ್ಷಿಯಾಗಲಿವೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್​​ನಲ್ಲಿ ಓಪನಿಂಗ್ ಮ್ಯಾಚ್​ನಿಂದ ಹಿಡ್ದು ಅದೇ ಮೈದಾನದಲ್ಲೇ ನಡೆಯಲಿರೋ ಫೈನಲ್ ಕದನದವರೆಗೂ ಕ್ರಿಕೆಟ್ ಪ್ರೇಮಿಗಳಿಗೆ ಪ್ರತಿದಿನವೂ ಹಬ್ಬವೇ. ಡೆಲ್ಲಿ ಕ್ಯಾಪಿಟಲ್ಸ್ ಕೊನೇ ತಂಡವಾಗಿ ಕ್ಯಾಪ್ಟನ್ ಅನೌನ್ಸ್ ಮಾಡಿದೆ. ಆಲ್ ರೌಂಡರ್ ಅಕ್ಷರ್ ಪಟೇಲ್​ಗೆ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ :ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ –  MI- ಡೆಲ್ಲಿ ನಡುವೆ ಡಬ್ಲ್ಯುಪಿಎಲ್ ಫೈನಲ್

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯಾರು ಕ್ಯಾಪ್ಟನ್ ಆಗ್ಬೋದು ಅನ್ನೋ ಸಸ್ಪೆನ್ಸ್​​ಗೆ ಕೊನೆಗೂ ತೆರೆ ಬಿದ್ದಿದೆ. ಕೆಎಲ್ ರಾಹುಲ್, ಅಕ್ಷರ್ ಪಟೇಲ್ ಹಾಗೇ ಫಾಫ್ ಡುಪ್ಲೆಸಿಸ್​​ ರೇಸ್​ನಲ್ಲಿ ಅಕ್ಷರ್ ಪಟೇಲ್​ಗೆ ಸಾರಥ್ಯ ಸಿಕ್ಕಿದೆ. ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ನಾಯಕತ್ವವನ್ನು ತಿರಸ್ಕರಿಸಿದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಕ್ಷರ್ ಪಟೇಲ್ ಅವರನ್ನು ಅಧಿಕೃತವಾಗಿ ನಾಯಕನನ್ನಾಗಿ ಘೋಷಿಸಿದೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಿಷಭ್ ಪಂತ್ ಅವರನ್ನು ತಂಡದಿಂದ ಕೈಬಿಟ್ಟಿದ್ದ ಡಿಸಿ ಬಳಿಕ 14 ಕೋಟಿ ರೂಪಾಯಿ ನೀಡಿ ಕೆಎಲ್ ರಾಹುಲ್ ಅವರನ್ನು ಖರೀದಿಸಿತ್ತು. ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ನಾಯಕತ್ವ ವಹಿಸಿಕೊಂಡಿದ್ದ ರಾಹುಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ನಾಯಕನ ಜವಾಬ್ದಾರಿಯನ್ನು ನಿರಾಕರಿಸಿದ್ದರು. ಈ ಬೆನ್ನಲ್ಲೇ ಡೆಲ್ಲಿ ತಂಡದೊಂದಿಗೆ ಹಲವು ವರ್ಷಗಳಿಂದ ಇರುವ ಭಾರತದ ಆಟಗಾರ ಅಕ್ಷರ್ ಪಟೇಲ್ ಅವರಿಗೆ ಈಗ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನ ನೀಡಲಾಗಿದೆ. ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ತಂಡದ ನಾಯಕನನ್ನಾಗಿ ಮಾಡುವ ಉದ್ದೇಶದಿಂದಲೇ ಖರೀದಿಸಲಾಗಿತ್ತು. ಆದರೆ, ರಾಹುಲ್ ಮತ್ತು ಆಥಿಯಾ ಶೆಟ್ಟಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಏಪ್ರಿಲ್ ವೇಳೆಗೆ ಮಗು ಜನಿಸಲಿದೆ. ಹೀಗಾಗಿ ಅವರು ನಾಯಕನ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಗೆ ರಿಷಭ್ ಪಂತ್ ಅವರ ಸ್ಥಾನಕ್ಕೆ ನಾಯಕನನ್ನಾಗಿ ಅಕ್ಷರ್ ಪಟೇಲ್ ಅವರನ್ನು ನಾಯಕನನ್ನಾಗಿ ಮಾಡಿದೆ.

ಅಕ್ಷರ್ ಪಟೇಲ್ ಡೆಲ್ಲಿ ತಂಡದ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. 2019ರಿಂದ ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿದ್ದಾರೆ. ಐಪಿಎಲ್ 2025 ಮೆಗಾ ಹರಾಜಿಗೂ ಮುನ್ನ ಅವರನ್ನು 18 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. 150 ಪಂದ್ಯಗಳ ಐಪಿಎಲ್ ವೃತ್ತಿಜೀವನದಲ್ಲಿ, 130.88 ಸ್ಟ್ರೈಕ್ ರೇಟ್‌ನಲ್ಲಿ 1653 ರನ್ ಗಳಿಸಿದ್ದಾರೆ ಮತ್ತು 123 ವಿಕೆಟ್‌ಗಳನ್ನು ಪಡೆದಿದ್ದಾರೆ. ನಾಯಕತ್ವದ ಅನುಭವವಿಲ್ಲದಿದ್ದರೂ, 2025ರ ಜನವರಿಯಲ್ಲಿ ಅವರು ಭಾರತದ T20I ಉಪನಾಯಕರಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿಗಳು ಸೇರಿದಂತೆ 23 ಪಂದ್ಯಗಳಲ್ಲಿ ಗುಜರಾತ್ ಅನ್ನು ಮುನ್ನಡೆಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಅಕ್ಷರ್ ಪಟೇಲ್ ಸುಮಾರು 30ರ ಸರಾಸರಿಯಲ್ಲಿ 235 ರನ್ ಗಳಿಸಿದ್ದರು ಮತ್ತು 7.65ರ ಎಕಾನಮಿಯಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದರು. ಸದ್ಯ ಕ್ಯಾಪ್ಟನ್ಸಿ ಸಿಕ್ಕಿರೋದ್ರ ಬಗ್ಗೆ ಮಾತ್ನಾಡಿರೋ ಅಕ್ಷರ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವುದು ನನಗೆ ಅತ್ಯಂತ ಗೌರವದ ಸಂಗತಿ. ನಾನು ಒಬ್ಬ ಕ್ರಿಕೆಟಿಗನಾಗಿ ಬೆಳೆದಿದ್ದೇನೆ. ಈ ತಂಡವನ್ನು ಮುನ್ನಡೆಸಲು ನಾನು ಸಿದ್ಧ ಎಂದಿದ್ದಾರೆ.

Shantha Kumari

Leave a Reply

Your email address will not be published. Required fields are marked *