ಬಾಂಗ್ಲಾ ಮತ್ತೆ ಧಗಧಗ – ಉರುಳುತ್ತಾ ಯೂನಸ್ ಸರ್ಕಾರ?
ಫೀಲ್ಡಿಗಿಳಿದ ಅವಾಮಿ, ಹಸೀನಾ ಪ್ರಧಾನಿ?
ಬಾಂಗ್ಲಾ ಮತ್ತೆ ಬೆಂಕಿಯಲ್ಲಿ ಬೆಂದು ಹೋಗೋಕೆ ರೆಡಿಯಾಗುತ್ತಿದೆ. ಈ ಹಿಂದೆ ಹೇಗೆ ಶೇಕ್ ಹಸೀನಾರನ್ನ ಪ್ರಧಾನಿ ಕುರ್ಚಿಯಿಂದ ಕೆಳಗಿಳಿಸಿದ್ರೋ ಅದೇ ರೀತಿಯಲ್ಲಿ ಈಗ ಯೂನಸ್ ಸರ್ಕಾರವನ್ನ ಕೆಳಗಿಸೋಕೆ ಸಖತ್ ಪ್ಲ್ಯಾನ್ ಕೂಡ ರೆಡಿಯಾಗಿದೆ. ಶೇಕ್ ಹಸೀನಾ ಬೆಂಬಲಿಗರು ಪ್ರತಿಭಟನೆಯ ಕಿಚ್ಚು ಹತ್ತಿಸಿದ್ದು, ಇದು ಫ್ರೆಬವರಿಯಲ್ಲಿ ಧಗಧಗಿಸಲಿದೆ. ಅಂದಹಾಗೇ ಶೇಕ್ ಹಸೀನಾ ದೇಶ ಬಿಟ್ಟ ಮೇಲೆ ಸೈಲೆಂಟ್ ಆಗಿದ್ದ ಅವಾಮಿ ಲೀಗ್ ಈಗ ಮತ್ತೆ ಬಾಂಗ್ಲಾದ ಅಖಾಡಕ್ಕೆ ರೀ ಎಂಟ್ರಿಕೊಟ್ಟಿದೆ.. ಯೂನಸ್ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿದೆ. ಢಾಕಾ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಶೇಕ್ ಹಸೀನಾ ಬೆಂಬಲಿಗರು ಯೂನಸ್ ವಿರುದ್ಧ ಕಿಚ್ಚು ಹಚ್ಚಿದ್ದಾರೆ. ಈಗ ವಿದ್ಯಾರ್ಥಿಗಳು ಕೂಡ ಶೇಕ್ ಹಸೀನಾ ಪರವಾಗಿ ಹೊರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಬ್ರೇಕ್ ಹಾಕೋಕೆ ಯೂನಸ್ ಸರ್ಕಾರಕ್ಕೆ ಆಗುತ್ತಿಲ್ಲ.. ಯಾಕಂದ್ರೆ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪವನ್ನ ಪಡೆಯುತ್ತಿದೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ನಿಲ್ಲಿಸೋಕೆ ಆರ್ಮಿಯನ್ನ ಬಳಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅವಾಮಿ ಲೀಗ್ ಸಾಥ್ ನೀಡುತ್ತಿದ್ದಾರೆ.
ಹೇಗೆ ಶೇಕ್ ಹಸೀನಾ ವಿರುದ್ಧ ವಿದ್ಯಾರ್ಥಿಗಳನ್ನ ಎತ್ತಿಕಟ್ಟಲಾಗಿತ್ತೋ, ಅದೇ ರೀತಿಯಲ್ಲಿ ಈಗ ವಿದ್ಯಾರ್ಥಿಗಳು ಯೂನಸ್ ಸರ್ಕಾರದ ವಿರುದ್ಧ ಸಿಡಿದು ನಿಂತಿದ್ದಾರೆ.. ವಿದ್ಯಾರ್ಥಿಗಳು ಇಲ್ಲಿ ಎರಡು ಗಂಪುಗಳಾಗಿ ವಿಂಗಡನೆಯಾಗಿದ್ದಾರೆ. ಒಬ್ಬರು ಮಧ್ಯಂತರ ಸರ್ಕಾರವನ್ನ ಬೆೆಂಬಲಿಸಿದ್ರೆ, ಇನ್ನೂ ಕೆಲವರು ಶೇಕ್ ಹಸೀನಾರನ್ನ ಬೆಂಬಲಿಸುತ್ತಿದ್ದಾರೆ. ಬಾಂಗ್ಲಾ ದೇಶದ ಎಲ್ಲಾ ಕಾಲೇಜುಗಳಲ್ಲಿ ಪ್ರತಿಭಟನೆಯ ಕಿಚ್ಚು ಚಿದ್ದಾಗಿ ಹೊತ್ತಿಕೊಳ್ಳುತ್ತಿದ್ದು, ಇದು ದೊಡ್ಡ ಮಟ್ಟದಲ್ಲಿ ಧಗಧಗಸಲಿದೆ. ಈ ಎರಡು ಗಂಪುಗಳು ನಡುವೆ ಕಿಚ್ಚು ಹೊತ್ತಿಕೊಳ್ಳುತ್ತಿದೆ. ಇದು ಒಂದ್ಕಡೆಯಾದ್ರೆ ಬಾಂಗ್ಲಾದಲ್ಲಿರೋ ಅವಾಮಿ ಲೀಗ್ ಈಗ ಪ್ರತಿಭಟನೆಗೆ ಕರೆ ಕೊಟ್ಟಿದೆ. ಯೂನಸ್ ಸರ್ಕಾರದ ವಿರುದ್ಧ ತೊಡೆ ತಟ್ಟಿದೆ.
ಯೂನಸ್ ಸರ್ಕಾರದ ವಿರುದ್ಧ ಅವಾಮಿ ಲೀಗ್ ಅಖಾಡಕ್ಕೆ
ಶೇಕ್ ಹಸೀನಾ ಸರ್ಕಾರ ಮೀಸಲಾತಿ ವಿಚಾರದಲ್ಲಿ ಪ್ರತಿಭಟನೆ ಎದುರಿ ಅಧಿಕಾರದಿಂದ ಕೆಳಗಿಳಿದಿದೆ.. ಈಗ ಅದೇ ಹಾದಿಯಲ್ಲಿ ಅವಾಮಿ ಲೀಗ್ ಕೂಡ ಹೊರಟಿದೆ.. ಅವಾಮಿ ಲೀಗ್ ಶೇಕ್ ಹಸೀನಾ ಬೆಂಬಲದ ಪಕ್ಷ. ಹೀಗಾಗಿ ಹಸೀನಾ ವಿರುದ್ಧ ಹಾಕಿರೋ ಸುಳ್ಳ ಪ್ರಕರಣ, ಅಲ್ಪ ಸಂಖ್ಯಾತರ ಮೇಲೆ ದಾಳಿ ಖಂಡಿಸಿ ಅವಾಮಿ ಲೀಗ್ ಬಾಂಗ್ಲಾದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸೋಕೆ ಸ್ಕೆಚ್ ಹಾಕಿದೆ. ಪ್ರತಿಭಟನೆಯ ವೇಳಾ ಪಟ್ಟಿಯನ್ನ ಅವಾಮಿ ಲೀಗ್ ಬಿಡುಗಡೆ ಮಾಡಿದ್ದು, ಒಂದು ವೇಳೆ ನಮ್ಮ ಹೋರಾಟಕ್ಕೆ ತೊಂದ್ರೆ ಮಾಡಿದ್ರೆ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳಬೇಕಾಗುತ್ತೆ ಅಂತ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಲಾಗಿದೆ. ಹಾಗಿದ್ರೆ ಪ್ರತಿಭಟೆ ಹೇಗೆ ನಡೆಯಲಿದೆ ಅನ್ನೋದನ್ನ ನೋಡೋದಾದ್ರೆ..
ಫೆಬ್ರವರಿ 1 ರಿಂದ 5 ರತನಕ ಕರ ಪತ್ರಗಳನ್ನ ಹಂಚಲಾಗುತ್ತೆ.. ಇನ್ನೂ ಫೆಬ್ರವರಿ 6 ರಂದು ದೇಶಾದ್ಯಂತ ಪ್ರತಿಭಟನೆ ಮೆರವಣಿಗೆ ಮತ್ತು ಱಲಿ ನಡೆಯಲಿದೆ. ಇನ್ನೂ ಫೆಬ್ರವರಿ 10 ರಂದು ಕೂಡ ಱಲಿ ನಡೆಯಲಿದ್ದು, ಫೆಬ್ರವರಿ 18 ರಂದು ರಾಷ್ಟ್ರವ್ಯಾಪಿ ಸಾಮಾನ್ಯ ಮಷ್ಕರ ನಡೆಯಲಿದೆ ಅಂತ ಅವಾಮಿ ಲೀಗ್ ಹೇಳಿದೆ. ದೇಶದ ರಾಜಕೀಯ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನ ಅರಿತುಕೊಳ್ಳಲು ಈ ಕಾರ್ಯಕ್ರಮ ಮಾಡುತ್ತಿದ್ದಾವೆ. ಒಂದು ವೇಳೆ ಇದಕ್ಕೆ ಸರ್ಕಾರದಿಂದ ಅಡ್ಡಿಯಾದ್ರೆ ಇನ್ನಷ್ಟು ಕಠಿಣ ಕಾರ್ಯಕ್ರಮಗಳನ್ನ ಮಾಡುತ್ತೇವೆ ಅಂತ ಅವಾನಿ ಲೀಗ್ ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಿದೆ.
ಅವಾಮಿ ಲೀಗ್ ಶೇಖ್ ಹಸೀನಾ ವಿರುದ್ಧದ ಕೇಸ್ಗಳನ್ನ ಹಿಂದಕ್ಕೆ ಪಡೆಯಬೇಕು ಅಂತ ಒತ್ತಾಯಿಸಿದೆ. ಹಾಗೇ ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹಿಂಸೆ ಮತ್ತು ಕಿರುಕುಳ ನಿಲ್ಲಿಸುವಂತೆ ತನ್ನ ಚಳುವಳಿಯನ್ನು ರೂಪಿಸಿದೆ. ಹಿಂದೂ-ಬೌದ್ಧ-ಕ್ರಿಶ್ಚಿಯನ್ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ದಾಳಿಗಳು ಮತ್ತು ಹತ್ಯಾಕಾಂಡಗಳು ಮತ್ತು ವಿವಿಧ ಧಾರ್ಮಿಕ ದೇವಾಲಯಗಳ ದಾಳಿಗಳ ಬಗ್ಗೆ ಹೇಳಿದೆ. ಸರ್ಕಾರ ಹತ್ಯೆಗಳನ್ನು ನಿಲ್ಲಿಸಬೇಕು ಮತ್ತು ಎಲ್ಲಾ ನಾಗರಿಕರ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದೆ. ಆಗಸ್ಟ್ 5 ರಂದು ಶೇಖ್ ಹಸೀನಾ ಪ್ರಧಾನಿ ಕುರ್ಚಿ ಬಿಟ್ಟು ದೇಶದಿಂದ ಪಾಲಾಯನ ಮಾಡಿದ ಮೇಲೆ ಅವಾಮಿ ಲೀಗ್ ಫುಲ್ ಸೈಲೆಂಟ್ ಆಗಿದ್ದು, ಇದ್ರ ಸಾಕಷ್ಟು ಮುಖಂಡರನ್ನ ಜೈಲಿಗೆ ಹಾಕಲಾಗಿತ್ತು. ಸಾಕಷ್ಟು ಕಾರ್ಯಕರ್ತರು ಮತ್ತು ಮುಖಂಡರು ತಲೆ ಮರೆಸಿಕೊಂಡಿದ್ರು. ಸುಮಾರು 8-9 ತಿಂಗಳ ನಂತ್ರ ಮೊದಲ ಬಾರಿದೆ ಅವಾಮಿ ಲೀಗ್ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಕೈಗೊಂಡಿದೆ. ಯೂನಸ್ ಸರ್ಕಾರದ ಮೇಲೆ ರೊಚ್ಚಿಗೆದ್ದಿದೆ..
ಟ್ರಂಪ್ ಬಂದ ಮೇಲೆ ಹಸೀನಾ ಬೆಂಬಲಿಗರು ಅಲರ್ಟ್
ಹಸೀನಾ ದೇಶ ಬಿಟ್ಟ ಮೇಲೆ ತಲೆಮರೆಸಿಕೊಂಡಿದ್ದ ಅವಾಮಿ ಲೀಗ್ನ ನಾಯಕರು ಈಗ ಕಾಣಿಸಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾಥ್ ನೀಡುತ್ತಿದ್ದಾರೆ. ಶೇಕ್ ಹಸೀನಾ ವಿರುದ್ಧ ಪಕ್ಷಗಳು ಕೂಡ ಈಗ ಯೂನಸ್ ಸರ್ಕಾರಕ್ಕೆ ಕೊಟ್ಟ ಬೆಂಬಲವನ್ನ ವಾಪಸ್ ಪಡೆದುಕೊಂಡಿವೆ.. ಅಷ್ಟೇ ಅಲ್ಲ ರೈಲ್ವೆ ಇಲಾಖೆಯ ಸಿಬ್ಬಂದಿ ಕೂಡ ಬಾಂಗ್ಲಾ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.. ಹೆಚ್ಚುವರಿಯಾಗಿ ನಮ್ಮ ಬಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಖಾಲಿ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳುತ್ತಿಲ್ಲ. ಅಂತ ಕೆಲಸ ಮಾಡದೇ ಪ್ರತಿಭಟನೆ ನಡೆಸಿದ್ರು, ಇದ್ರಿಂದ ರೈಲ್ವೆ ಸಂಚಾರ ಸ್ಥಗಿತಗೊಂಡಿತ್ತು. ಹಾಗೋ ಹೀಗೋ ನೌಕರರ ಮನಸ್ಸು ಒಲಿಸಿರೋ ಯೂನಸ್ ಸರ್ಕಾರ ಪ್ರತಿಭಟನೆಯನ್ನ ವಾಪಸ್ ಪಡೆದಿದೆ. ಅದು ಅಲ್ಲದೇ ಟ್ರಂಪ್ ಕೂಡ ಯೂನಸ್ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಅಮೆರಿಕ ನೀಡುತ್ತಿದ್ದ ನೆರವನ್ನ ಕೂಡ ನಿಲ್ಲಿಸಿದೆ.ಯೂನಸ್ನ ಕಂಡ್ರೆ ಟ್ರಂಪ್ ಆಗಲ್ಲ, ಅವರು ಬಾಂಗ್ಲಾದಲ್ಲಿ ಬೇರೆ ಸರ್ಕಾರವನ್ನ ತರಬೇಕು ಅಂತ ಪಣ ತೊಟ್ಟಿದ್ದಾರೆ. ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಯೂನುಸ್ ಸರ್ಕಾರವನ್ನು ಟೀಕಿಸಿದ್ದರು. ಬಾಂಗ್ಲಾ ಮೇಲೆ ಸಾಕಷ್ಟು ದ್ವೇಷ ಟ್ರಂಪ್ಗಿದೆ. ಹೀಗಾಗಿ USAID ಬಾಂಗ್ಲಾದೇಶಕ್ಕೆ ನೀಡುತ್ತಿದ್ದ ನೆರವನ್ನ ನಿಲ್ಲಿಸಲಾಗಿದೆ. ಭಾರತದ ಮೇಲೆ ಯಾವಗಲೂ ಕೆಂಡ ಕಾರುವ ಯೂನಸ್ ಸರ್ಕಾರಕ್ಕೆ ಕಷ್ಟದ ಮೇಲೆ ಕಷ್ಟ ಸಮಸ್ಯೆಗಳ ಮೇಲೆ ಸಮಸ್ಯೆ ಬರುತ್ತಿವೆ..
ಅವಾಮಿ ಲೀಗ್ ಬಾಂಗ್ಲಾದೇಶದ ಒಂದು ಪ್ರಮುಖ ರಾಜಕೀಯ ಪಕ್ಷವಾಗಿದೆ. 1949 ರಲ್ಲಿ ಈ ಪಕ್ಷವನ್ನ ಸ್ಥಾಪನೆ ಮಾಡಲಾಗಿದೆ. ಪಾಕ್ನಿಂದ ಬಾಂಗ್ಲಾವನ್ನ ವಿಮೋಚನೆ ಮಾಡೋಕೆಗಾಗಿಯೇ ಹುಟ್ಟಿದ ಪಕ್ಷವಿದು. 1981 ರಿಂದ ಶೇಖ್ ಹಸೀನಾ ಈ ಪಕ್ಷದ ಮುಖ್ಯಸ್ಥರಾಗಿದ್ದಾರೆ. ಹಸೀನಾ ಪ್ರಧಾನಿ ಹುದ್ದೆಯಿದ್ದ ಇಳಿಯುತ್ತಿದ್ದಂತೆ, ಅವಾಮಿ ಲೀಗ್ ಭೂಗತವಾಗಿತ್ತು.. ಯಾಕಂದ್ರೆ ಯೂನಸ್ ಸರ್ಕಾರ ಇವರ ಮುಖಂಡರನ್ನ ಟಾರ್ಗೆಟ್ ಮಾಡಿತ್ತು. ಈಗ ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಮತ್ತೆ ಅಲರ್ಟ್ ಆಗಿರೋ ಅವಾನಿ ಲೀಗ್, ಯೂನಸ್ ಸರ್ಕಾರದ ವಿರುದ್ಧ ಸಿಡಿದೆದ್ದಿದೆ.. ಮುಂದಿನ ಬಾಂಗ್ಲಾ ಚುನಾವಣೆಯಲ್ಲಿ ಅವಾಮಿ ಲೀಗ್ ಸ್ಪರ್ಧೆ ಮಾಡೋಕೆ ಅವಕಾಶ ನೀಡಲ್ಲ ಅಂತ ಯೂನಸ್ ಸರ್ಕಾರ ಹೇಳಿತ್ತು. ಆದ್ರೆ ಪ್ರತಿಭಟನೆ ಹೆಸರಲ್ಲಿ ಮತ್ತೆ ಅಖಾಡಕ್ಕೆ ಇಳಿರೋ ಅವಾಮಿ ಲೀಗ್ ಯೂನಸ್ ಸರ್ಕಾರವನ್ನ ಉರುಸೇ ಉರುಳುಸುತ್ತೇವೆ ಎನ್ನುತ್ತಿದೆ. ಒಂದು ವೇಳೆ ಮತ್ತೆ ಬಾಂಗ್ಲಾದಲ್ಲಿ ಅವಾಮಿ ಲೀಗ್ ಹವಾ ಶುರುವಾದ್ರೆ ಶೇಕ್ ಹಸೀನಾ ಮತ್ತೆ ಪ್ರಧಾನಿ ಕೂಡ ಆಗಬಹುದು. ಈಗ ನಮ್ಮ ಜೊತೆ ಕಿರಿಕ್ ಮಾಡ್ತಿರೋ ಯೂನಸ್ ಸರ್ಕಾರ ಉರುಳಿದ್ರೆ, ಭಾರತ ಮತ್ತು ಬಾಂಗ್ಲಾ ಸಂಬಂಧ ಚೆನ್ನಾಗಿ ಆಗಲಿದೆಯ ಯಾಕಂದ್ರೆ ಹಸೀನಾ ಭಾರತದ ಜೊತೆ ಉತ್ತಮ ಸಂಬಂಧ ಹೊಂದಿದ್ದು, ಭಾರತದಲ್ಲೇ ಆಶ್ರಯ ಪಡೆಯುತ್ತಿದ್ದಾರೆ.