ನೀವು ಬೆಳಗ್ಗೆ ಈ ನಾಲ್ಕು ವಸ್ತುಗಳನ್ನ ಯಾವುದೇ ಕಾರಣಕ್ಕೂ ನೋಡಬೇಡಿ – ನೋಡಿದ್ರೆ ಏನಾಗುತ್ತೆ ಗೊತ್ತಾ?

ನೀವು ಬೆಳಗ್ಗೆ ಈ ನಾಲ್ಕು ವಸ್ತುಗಳನ್ನ ಯಾವುದೇ ಕಾರಣಕ್ಕೂ ನೋಡಬೇಡಿ – ನೋಡಿದ್ರೆ ಏನಾಗುತ್ತೆ ಗೊತ್ತಾ?

ನಾವು ದಿನ ಬೆಳಗ್ಗೆ ಹೊಸತನದಿಂದ ಆರಂಭಿಸುತ್ತೇವೆ. ಬೆಳಗ್ಗೆ ಎದ್ದು ದೇವರ ಫೋಟೋಗಳನ್ನ ನೋಡುತ್ತೇವೆ. ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುತ್ತಾ ದೇವರಿಗೆ ನಮಸ್ಕರಿಸುತ್ತೇವೆ. ಹಸು ಸಿಕ್ಕಿದ್ರೆ ಅದ್ದಕ್ಕೂ ನಮಸ್ಕಾರ ಮಾಡಿ ಮುಂದೆ ಸಾಗುತ್ತೇವೆ. ಆದ್ರೆ ನಾವು ಯಾವುದಾದ್ರೂ ಒಳ್ಳೆಯ ಕೆಲಸಕ್ಕೆ ಹೋಗುತ್ತಾ ಈ 4 ನಾಲ್ಕು ವಸ್ತುಗಳನ್ನ ನೋಡಿ ಹೋಗಬಾರದಂತೆ. ಹಾಗಿದ್ರೆ ಆ ವಸ್ತುಗಳು ಯಾವುದು ಅನ್ನೋದ್ದನ್ನ ನೋಡೋಣ.

ಮೃತಪಟ್ಟ ಪ್ರಾಣಿ

ನಾವು ಒಳ್ಳೆಯ ಕೆಲಸಕ್ಕೆ ಹೋಗುತ್ತಾ ಮೃತಪಟ್ಟ ಪ್ರಾಣಿಗಳ ದೇಹವನ್ನ ನೋಡಬಾರದಂತೆ. ನಾವು ಮುಂಜಾನೆ ಹೊರಗಡೆ ಹೋಗುವಂತಹ ಸಮಯದಲ್ಲಿ ಸತ್ತ ಪ್ರಾಣಿಗಳನ್ನು, ಪಕ್ಷಿಗಳನ್ನು ನೋಡುವುದು ಒಳ್ಳೆಯ ಸಂಕೇತವಲ್ಲ. ಬೆಳಗ್ಗೆ ಸತ್ತ ಪ್ರಾಣಿ ಅಥವಾ ಪಕ್ಷಿಯನ್ನು ನೋಡುವುದು ನಿಮ್ಮ ಇಡೀ ದಿನವನ್ನು ಹಾಳುಮಾಡಬಹುದು. ಇದರರ್ಥ ನೀವು ಆ ದಿನ ಸಾಕಷ್ಟು ಸವಾಲುಗಳನ್ನು ಎದುರಿಸುತ್ತೀರಿ ಅಥವಾ ನೀವು ಮಾಡಿದ ಯಾವುದೋ ಕೆಲಸ ಯಶಸ್ವಿಯಾಗಲ್ಲ ಎನ್ನಲಾಗುತ್ತೆ.

ಕತ್ತೆ

ಬೆಳಗ್ಗೆ ಕತ್ತೆಯನ್ನು ನೋಡಿದರೆ ಅದನ್ನು ಶುಭ ಸೂಚನೆ ಅಲ್ಲ ಎನ್ನಲಾಗುತ್ತೆ. ಕತ್ತೆ ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕತ್ತೆ ನೋಡಿ ಹೋದ್ರೆ ನಿಮ್ಮ ಕೆಲಸ ವಿಳಂಬವಾಗಬಹುದು ಅಥವಾ ನೀವು ಅಡೆತಡೆಗಳನ್ನು ಎದುರಿಸಬಹುದು ಎಂಬುದನ್ನು ಇದು ಸೂಚಿಸುತ್ತದೆ.

ಅಳುವ ಮಗು:
ಸಾಂಪ್ರದಾಯಿಕ ಹಿಂದೂ ನಂಬಿಕೆಗಳ ಪ್ರಕಾರ, ಬೆಳಗ್ಗೆ ರಸ್ತೆಯಲ್ಲಿ ನಾವು ಎಲ್ಲಿಗೋ ಹೋಗುವಂತಹ ಸಂದರ್ಭದಲ್ಲಿ ಅಳುವ ಮಗು ಹಾದುಹೋಗುವುದನ್ನು ನೀವು ನೋಡಿದರೆ ಅದು ಅಶುಭ.  ಅಳುವ ಮಗು ನೋಡಿದ್ರೆ  ನೀವು ದಿನವಿಡೀ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.  ಇದರಿಂದಾಗಿ ನೀವು ಕೆಲಸದಲ್ಲಿ ತೊಡಕುಗಳು ಮತ್ತು ಮಾನಸಿಕ ಒತ್ತಡವನ್ನು ಎದುರಿಸಬಹುದು.

ಖಾಲಿ ಬಕೆಟ್, ಖಾಲಿ ಪಾತ್ರೆ

ನೀವು ಮುಂಜಾನೆ ಅಥವಾ ಬೆಳಗ್ಗೆ ಎದ್ದಾಕ್ಷಣ ಖಾಲಿ ಬಕೆಟ್‌ಗಳನ್ನು ಅಥವಾ ಪಾತ್ರೆಯನ್ನು ಸೇರಿದಂತೆ ಇತ್ಯಾದಿ ಖಾಲಿ ಪಾತ್ರೆಗಳನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ನೋಡುವುದು ಎಂದರೆ ಆ ದಿನ ನೀವು ನಿಮ್ಮ ಕೆಲಸದಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತೀರಿ ಎಂಬುದಾಗಿದೆ. ನೀವು ಆ ದಿನ ಮಾಡೋ ಕೆಲಸದಲ್ಲಿ ಒಂದಲ್ಲ ಒಂದು ತಪ್ಪುಗಳಾಗಬಹುದು.  ವಾಸ್ತು ಶಾಸ್ತ್ರದ ಪ್ರಕಾರ ಹೀಗೆಲ್ಲಾ ಆಗುತ್ತೆ ಎಂದು ನಂಬಲಾಗುತ್ತೆ. ಇದು ಅವರವರ ನಂಬಿಕೆಗೆ ಬಿಟ್ಟ ವಿಚಾರವಾಗಿರುತ್ತೆ.

Kishor KV