ಜಪಾನ್‌ನಲ್ಲಿ ಕಾಣಿಸಿಕೊಂಡ ಏವಿಯನ್​ ಫ್ಲೂ – 14 ಸಾವಿರ ಪಕ್ಷಿಗಳನ್ನು ಕೊಂದ ಸರ್ಕಾರ!

ಜಪಾನ್‌ನಲ್ಲಿ ಕಾಣಿಸಿಕೊಂಡ ಏವಿಯನ್​ ಫ್ಲೂ – 14 ಸಾವಿರ ಪಕ್ಷಿಗಳನ್ನು ಕೊಂದ ಸರ್ಕಾರ!

ಕೊರೊನಾ ಬಳಿಕ ಈಗ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಹೊಸ ಹೊಸ ಸಾಂಕ್ರಾಮಿಕಗಳು ಪತ್ತೆಯಾಗುತ್ತಲೇ ಇದೆ. ಇದೀಗ ಜಪಾನ್‌ನಲ್ಲಿ ಏವಿಯನ್​ ಫ್ಲೂ (ಹಕ್ಕಿ ಜ್ವರ) ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಜಪಾನ್​ ಕಾಗೋಶಿಮಾದ ಮಿನಾಮಿಸಾತ್ಸುಮಾ ನಗರದ ಕೋಳಿ ಫಾರ್ಮ್​ನಲ್ಲಿ ಏವಿಯನ್​ ಇನ್​ಫ್ಲುಯೆಂಜಾ ಕಾಣಿಸಿಕೊಂಡಿದೆ. ಏವಿಯನ್​ ಫ್ಲೂ ಕಾಣಿಸಿಕೊಂಡ ಬೆನ್ನಲ್ಲೇ ಅಲ್ಲಿನ ಸರ್ಕಾರ ಹೈ ಅಲರ್ಟ್‌ ಆಗಿದೆ. ಇದೇ ಕಾರಣಕ್ಕೆ ಜಪಾನ್​ನಲ್ಲಿ ಸುಮಾರು 14 ಸಾವಿರ ಪಕ್ಷಿಗಳನ್ನು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕ್ರೀಡಾಂಗಣವನ್ನು ಜೈಲಾಗಿ ಪರಿವರ್ತಿಸುವಂತೆ ಪ್ರಸ್ತಾವನೆ – ಕೇಂದ್ರದ ಮನವಿಯನ್ನು ತಿರಸ್ಕರಿಸಿದ ದೆಹಲಿ ಸರ್ಕಾರ

ಸೋಂಕು ಹರಡದಂತೆ ಅಲ್ಲಿನ ಸರ್ಕಾರ ಕಟ್ಟೆಚ್ಚರ ವಹಿಸಿದೆ. 3 ಕಿ.ಮೀನಿಂದ 10 ಕಿ.ಮೀ ವ್ಯಾಪ್ತಿಯಲ್ಲಿರುವ 15 ಫಾರ್ಮ್​ಗಳಲ್ಲಿ ಸುಮಾರು 3,63,00 ಕೋಳಿಗಳನ್ನು ಸಾಕಲು ನಿರ್ಬಂಧ ವಿಧಿಸಲಾಗಿದೆ. ಹತ್ತಿರದ ಫಾರ್ಮ್​ನಲ್ಲಿರುವ ಕೋಳಿಗಳನ್ನು ಸಹ ಕೊಲ್ಲಲಾಗಿದೆ. ಇದರ ಜೊತೆಗೆ ಈ ರೋಗ ಹರಡದಂತೆ ಪಕ್ಷಿಗಳನ್ನು ಸಹ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.

ಜಪಾನ್​​ನಲ್ಲಿ ಪ್ರತಿ ವರ್ಷ ಅಕ್ಟೋಬರ್​ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತದೆ. ಕಳೆದ ವರ್ಷ26 ಫಾರ್ಮ್​ಗಳಲ್ಲಿ ಈ ಪ್ಲೂ ಕಾಣಿಸಿಕೊಂಡಿತ್ತು. ಇದರಿಂದಾಗಿ 17.71 ಮಿಲಿಯನ್​​ ಪಕ್ಷಿಗಳನ್ನು ಕೊಲ್ಲಲಾಯಿತು. ಇದರಿಂದಾಗಿ ಜಪಾನ್​ನಲ್ಲಿ ಮೊಟ್ಟೆಯ ಕೊರತೆ ಮತ್ತು ಬೆಲೆ ಹೆಚ್ಚಳಕ್ಕೆ ಕಾರಣವಾಯಿತು.

Shwetha M