ಜಪಾನ್‌ನಲ್ಲಿ ಕಾಣಿಸಿಕೊಂಡ ಏವಿಯನ್ ಫ್ಲೂ – 14 ಸಾವಿರ ಪಕ್ಷಿಗಳನ್ನು ಕೊಂದ ಸರ್ಕಾರ!
ಕೊರೊನಾ ಬಳಿಕ ಈಗ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಹೊಸ ಹೊಸ ಸಾಂಕ್ರಾಮಿಕಗಳು ಪತ್ತೆಯಾಗುತ್ತಲೇ ಇದೆ. ಇದೀಗ ಜಪಾನ್‌ನಲ್ಲಿ ಏವಿಯನ್ ಫ್ಲೂ (ಹಕ್ಕಿ ಜ್ವರ) ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಜಪಾನ್ ಕಾಗೋಶಿಮಾದ ಮಿನಾಮಿಸಾತ್ಸುಮಾ ನಗರದ ಕೋಳಿ ಫಾರ್ಮ್ನಲ್ಲಿ ಏವಿಯನ್ ಇನ್ಫ್ಲುಯೆಂಜಾ ಕಾಣಿಸಿಕೊಂಡಿದೆ. ಏವಿಯನ್ ಫ್ಲೂ ಕಾಣಿಸಿಕೊಂಡ ಬೆನ್ನಲ್ಲೇ ಅಲ್ಲಿನ ಸರ್ಕಾರ ಹೈ ಅಲರ್ಟ್ ಆಗಿದೆ. ಇದೇ ಕಾರಣಕ್ಕೆ ಜಪಾನ್‌ನಲ್ಲಿ ಸುಮಾರು 14 ಸಾವಿರ ಪಕ್ಷಿಗಳನ್ನು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕ್ರೀಡಾಂಗಣವನ್ನು ಜೈಲಾಗಿ ಪರಿವರ್ತಿಸುವಂತೆ ಪ್ರಸ್ತಾವನೆ – ಕೇಂದ್ರದ ಮನವಿಯನ್ನು ತಿರಸ್ಕರಿಸಿದ ದೆಹಲಿ ಸರ್ಕಾರ
ಸೋಂಕು ಹರಡದಂತೆ ಅಲ್ಲಿನ ಸರ್ಕಾರ ಕಟ್ಟೆಚ್ಚರ ವಹಿಸಿದೆ. 3 ಕಿ.ಮೀನಿಂದ 10 ಕಿ.ಮೀ ವ್ಯಾಪ್ತಿಯಲ್ಲಿರುವ 15 ಫಾರ್ಮ್ಗಳಲ್ಲಿ ಸುಮಾರು 3,63,00 ಕೋಳಿಗಳನ್ನು ಸಾಕಲು ನಿರ್ಬಂಧ ವಿಧಿಸಲಾಗಿದೆ. ಹತ್ತಿರದ ಫಾರ್ಮ್ನಲ್ಲಿರುವ ಕೋಳಿಗಳನ್ನು ಸಹ ಕೊಲ್ಲಲಾಗಿದೆ. ಇದರ ಜೊತೆಗೆ ಈ ರೋಗ ಹರಡದಂತೆ ಪಕ್ಷಿಗಳನ್ನು ಸಹ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.
ಜಪಾನ್‌ನಲ್ಲಿ ಪ್ರತಿ ವರ್ಷ ಅಕ್ಟೋಬರ್ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತದೆ. ಕಳೆದ ವರ್ಷ26 ಫಾರ್ಮ್ಗಳಲ್ಲಿ ಈ ಪ್ಲೂ ಕಾಣಿಸಿಕೊಂಡಿತ್ತು. ಇದರಿಂದಾಗಿ 17.71 ಮಿಲಿಯನ್ ಪಕ್ಷಿಗಳನ್ನು ಕೊಲ್ಲಲಾಯಿತು. ಇದರಿಂದಾಗಿ ಜಪಾನ್‌ನಲ್ಲಿ ಮೊಟ್ಟೆಯ ಕೊರತೆ ಮತ್ತು ಬೆಲೆ ಹೆಚ್ಚಳಕ್ಕೆ ಕಾರಣವಾಯಿತು.