ಬಾಕ್ಸಾಫೀಸ್ ನಲ್ಲಿ ‘ಅವತಾರ್ 2’ ಅಬ್ಬರ – 16 ಸಾವಿರ ಕೋಟಿ ಕಲೆಕ್ಷನ್!

ಬಾಕ್ಸಾಫೀಸ್ ನಲ್ಲಿ ‘ಅವತಾರ್ 2’ ಅಬ್ಬರ – 16 ಸಾವಿರ ಕೋಟಿ ಕಲೆಕ್ಷನ್!

ಹದಿಮೂರು ವರ್ಷಗಳ ಹಿಂದೆ ಕಮಾಲ್ ಮಾಡಿದ್ದ ಅವತಾರ್ ಚಿತ್ರ ಜಗತ್ತಿನೆಲ್ಲೆಡೆ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಇದೀಗ ‘ಅವತಾರ್ 2’ ಚಿತ್ರ ಕೂಡ ಎರಡು ಬಿಲಿಯನ್ ಅಮೆರಿಕಾ ಡಾಲರ್ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಗೆದ್ದು ಬೀಗಿದೆ.

ಇದನ್ನೂ ಓದಿ: ಶಾಕುಂತಲೆಯಾದ ಸುಂದರಿ ಸಮಂತಾ  – ಟಾಲಿವುಡ್ ಬ್ಯೂಟಿ ಲುಕ್​ಗೆ ಫ್ಯಾನ್ಸ್ ಫಿದಾ..!

ಜೇಮ್ಸ್ ಕ್ಯಾಮೆರಾನ್ ನಿರ್ದೇಶಿಸಿರುವ ಈ ಚಿತ್ರವನ್ನು,  ಟ್ರೈಲರ್ ನೋಡಿಯೇ ಬಹುಪಾಲು ಜನ ಮೆಚ್ಚಿಕೊಂಡಿದ್ದರು. ಅಲ್ಲದೇ ಚಿತ್ರ ಬಿಡುಗಡೆಗೆ ಮುನ್ನವೇ ಟಿಕೆಟ್ ಬುಕ್ ಮಾಡಿದ್ದರು. ಹಾಲಿವುಡ್ ಚಿತ್ರ ‘ಅವತಾರ್ 2’  ಡಿಸೆಂಬರ್ 16ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಇದೀಗ ಈ ಚಿತ್ರ ದೊಡ್ಡ ಮಟ್ಟದಲ್ಲಿಯೇ ಯಶಸ್ಸು ಕಂಡಿದೆ. ಇದುವರೆಗೆ ‘ಅವತಾರ್ 2’ ಚಿತ್ರ 16, 247 ಕೋಟಿ ರೂಪಾಯಿ ಬಾಚಿಕೊಂಡಿದೆ.

‘ಅವತಾರ್​’ ಚಿತ್ರದ ಲೈಫ್​ಟೈಮ್ ಕಲೆಕ್ಷನ್ 23 ಸಾವಿರ ಕೋಟಿ ರೂಪಾಯಿ ಇದೆ. ಈ ಗಳಿಕೆಯನ್ನು ‘ಅವತಾರ್ 2’ ಚಿತ್ರ ಹಿಂದಿಕ್ಕಲಿದೆ ಎಂದು ಊಹಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದೀಗ 2024 ರ ಕೊನೆಯಲ್ಲಿ “ಅವತಾರ್ 3” ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

suddiyaana