ಅವತಾರ್ 3 ಟ್ರೈಲರ್ ರಿಲೀಸ್ – ಡಿಸೆಂಬರ್ 19ಕ್ಕೆ ತೆರೆಗೆ ಅಪ್ಪಳಿಸಲಿದೆ ಫೈರ್ ಆಂಡ್ ಆಶ್

ಅವತಾರ್ ಸಿನಿಮಾ ಸರಣಿಯ ಮೂರನೇ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ. ‘ಅವತಾರ್: ಫೈರ್ ಆಂಡ್ ಆಶ್’ ಎಂಬ ಟೈಟಲ್‌ನೊಂದಿಗೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರಲಿದ್ದು, ಸಿನಿಮಾದ ಟ್ರೈಲರ್ ಧೂಳೆಬ್ಬಿಸಿದೆ.
ಇದನ್ನೂ ಓದಿ:D ಬಾಸ್ ಫ್ಯಾನ್ಸ್‌ಗೆ ರಮ್ಯಾ ‘ಚಾಲೆಂಜ್’ – ಕಮೆಂಟ್ ಮಾಡಿದವರಿಗೆ ಜೈಲೂಟ ಫಿಕ್ಸ್
2009 ರಲ್ಲಿ ಬಿಡುಗಡೆ ಆಗಿದ್ದ ‘ಅವತಾರ್’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿತ್ತು. ಬಾಕ್ಸ್ ಆಫೀಸ್ನಲ್ಲಿ ಸಾರ್ವಕಾಲಿಕ ದಾಖಲೆಯನ್ನೇ ನಿರ್ಮಿಸಿತ್ತು. ಅದಾದ 13 ವರ್ಷಗಳ ಬಳಿಕ 2022 ರಲ್ಲಿ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾ ಸಹ ಹಿಟ್ ಎನಿಸಿಕೊಂಡಿತು. ಇದೀಗ ಅದೇ ಸಿನಿಮಾ ಸರಣಿಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಅವತಾರ್: ಫೈರ್ ಆಂಡ್ ಆಶ್’ ಸಿನಿಮಾನಲ್ಲಿ ನಾವಿ ಜನಾಂಗ ಬುಕಟ್ಟುಗಳ ನಡುವಿನ ಸಂಘರ್ಷದ ಕತೆಯನ್ನು ಒಳಗೊಂಡಿರುವ ಸುಳಿವನ್ನು ಸಿನಿಮಾದ ಟ್ರೈಲರ್ ನೀಡುತ್ತಿದೆ.
ಪಾಂಡೋರಾ ಎಂಬ ಕಲ್ಪಿತ ಪ್ರದೇಶದಲ್ಲಿ ನಡೆಯುವ ಮಾನವ ಮತ್ತು ನಾವಿ ಜನಾಂಗದ ನಡುವಿನ ಸಂಘರ್ಷದ ಕತೆಯನ್ನು ಮೊದಲ ಎರಡು ‘ಅವತಾರ್’ ಸಿನಿಮಾಗಳು ಹೊಂದಿದ್ದವು. 2022 ರ ‘ವೇ ಆಫ್ ವಾಟರ್’ ಸಿನಿಮಾ ಮಾನವ ಹಾಗೂ ನಾವಿಗಳ ನಡುವೆ ನೀರಿನ ಮೇಲೆ ನಡೆಯುವ ಸಂಘರ್ಷದ ಕತೆಯನ್ನು ಒಳಗೊಂಡಿತ್ತು. ಚಿತ್ರ ವಿಚಿತ್ರ ಜಲಚರಗಳನ್ನು ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮರನ್ ಸೃಷ್ಟಿಸಿದ್ದರು. ಆದರೆ ಆ ಸಿನಿಮಾದ ಬಗ್ಗೆ ತುಸು ಟೀಕೆ ವ್ಯಕ್ತವಾಗಿತ್ತು. 2009 ರ ‘ಅವತಾರ್’ ಸಿನಿಮಾ 2022 ರ ‘ಅವತಾರ್’ ಸಿನಿಮಾದ ಕತೆ ನಡೆಯುವ ಸ್ಥಳ, ಫೈಟ್ ಕೊರಿಯೋಗ್ರಫಿ ಬಿಟ್ಟರೆ ಬೇರೇನೂ ವ್ಯತ್ಯಾಸವಿಲ್ಲ ಎಂದು ಟೀಕಿಸಲಾಗಿತ್ತು. ಆ ಟೀಕೆಗಳಿಗೆ ಉತ್ತರ ನೀಡುವಂತಿದೆ ‘ಅವತಾರ್: ಫೈರ್ ಆಂಡ್ ಆಶ್’ ಟ್ರೇಲರ್. ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಡಿಸೆಂಬರ್ 19 ರಂದು ಬಿಡುಗಡೆ ಆಗಲಿದೆ.
ಪ್ರಕೃತಿಯನ್ನು ಆರಾಧಿಸುವ ನಾವಿಗಳು ಹಾಗೂ ಬೆಂಕಿಯನ್ನು ಆರಾಧಿಸುವ ಜನಾಂಗದ ನಡುವೆ ನಡೆಯುವ ಸಂಘರ್ಷದ ಕತೆಯನ್ನು ‘ಫೈರ್ ಆಂಡ್ ಆಶ್’ ಸಿನಿಮಾ ಒಳಗೊಂಡಿರುವಂತಿದೆ. ಮಾನವರು ಆಯುಧಗಳ ಮೂಲಕ ನಾವಿಗಳನ್ನು ಗೆಲ್ಲಲಾಗದು ಎಂದು ತೀರ್ಮಾನಿಸಿ, ಅವರ ನಡುವೆಯೇ ಸಂಘರ್ಷ ಉಂಟುಮಾಡಿರುವಂತಿದೆ. ಸಂಘರ್ಷದ ಕತೆಯ ಜೊತೆಗೆ ‘ಅವತಾರ್’ ಸಿನಿಮಾ ಸರಣಿಯ ನಾಯಕ ಜೇಕ್ ಸೂಲಿ ಹಾಗೂ ಅವನ ಕುಟುಂಬದ ಕತೆ, ಸೆಂಟಿಮೆಂಟ್ ಇನ್ನಿತರೆಗಳನ್ನು ಸಹ ಸಿನಿಮಾ ಒಳಗೊಂಡಿರುವಂತಿದೆ.

ನೋಡಿರಿ

