ಕನ್ನಡಿಗರ ಒತ್ತಾಯಕ್ಕೆ ಮನ್ನಣೆ: ಕನ್ನಡದಲ್ಲೂ ತೆರೆಗೆ ಬರುತ್ತಿದೆ ಅವತಾರ್-2

ಕನ್ನಡಿಗರ ಒತ್ತಾಯಕ್ಕೆ ಮನ್ನಣೆ: ಕನ್ನಡದಲ್ಲೂ ತೆರೆಗೆ ಬರುತ್ತಿದೆ ಅವತಾರ್-2

ಹಾಲಿವುಡ್ ನಿರ್ದೇಶಕ ಜೇಮ್ಸ್ ಕೆಮರೂನ್ ಅವರ “ಅವತಾರ್” ನ ಮುಂದುವರೆದ ಭಾಗ “ಅವತಾರ್ ದಿ ವೇ ಆಫ್ ವಾಟರ್” ಈಗಾಗಲೇ ತೆರೆಗೆ ಅಪ್ಪಳಿಸಲು ಸಿದ್ದವಾಗಿದ್ದು, ಕಳೆದ ವಾರ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿತ್ತು. ಅಲ್ಲದೇ ಡಿ. 16ರಂದು ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಘೋಷಣೆ ಮಾಡಿತ್ತು. ಆದರೆ ಕರ್ನಾಟಕದಲ್ಲಿ ಅವತಾರ್ ಅನ್ನು ಕನ್ನಡದಲ್ಲೇ ಬಿಡುಗಡೆ ಮಾಡಬೇಕು ಎಂಬ ಕೂಗು ಕೂಡ ಕೇಳಿಬಂದಿತ್ತು. ಇದೀಗ ಕನ್ನಡಿಗರ ಒತ್ತಾಯಕ್ಕೆ ಮಣಿದಿರು ಚಿತ್ರದ ಭಾರತದಲ್ಲಿನ ಹಂಚಿಕೆದಾರರಾದ “20th ಸೆಂಚುರಿ ಸ್ಟುಡಿಯೋಸ್ ಇಂಡಿಯಾ” ಕಂಪನಿ ಸಿನಿ ಪ್ರಿಯರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ.

ಇದನ್ನೂ ಓದಿ: ಬಾಲಿವುಡ್‌ನಲ್ಲಿ ಮುಂದುವರೆದಿದೆ ಕನ್ನಡದ ಕಾಂತಾರ ಅಬ್ಬರ 

ಹೌದು, “ಅವತಾರ್ ದಿ ವೇ ಆಫ್ ವಾಟರ್” ಚಿತ್ರ ಕನ್ನಡದಲ್ಲಿ ಬಿಡುಗಡೆ ಮಾಡಬೇಕು ಎಂಬ ಕೂಗು ಕೇಳಿಬಂದ ಬೆನ್ನಲೇ, ಕನ್ನಡದಲ್ಲೇ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿದೆ. ಅಲ್ಲದೇ ಅದಕ್ಕೆ ಪೂರ್ವಭಾವಿಯಾಗಿ, ಚಿತ್ರದ ಕನ್ನಡ ಟ್ರೇಲರ್ ಅನ್ನು ಗುರುವಾರ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು, ಚಿತ್ರತಂಡದ ಈ ನಿರ್ಧಾರವನ್ನು ಕನ್ನಡಿಗರು ಸ್ವಾಗತಿಸಿದ್ದಾರೆ.

ಈ ಕುರಿತು ಹಾಲಿವುಡ್ ನ ನಿರ್ಮಾಪಕ ಜಾನ್ ಲ್ಯಾಂಡೌ ಟ್ವೀಟ್ ಮಾಡಿದ್ದು, ನಮಸ್ತೆ ಇಂಡಿಯಾ, ನಾನು ಭಾರತದ ಬಹುಭಾಷಾ ಸಂಸ್ಕೃತಿಯನ್ನು ಗೌರವಿಸುತ್ತೇನೆ. ಆರು ಭಾಷೆಗಳಲ್ಲಿ ಅವತಾರ್ 2 ಬಿಡುಗಡೆಯಾಗುತ್ತಿದೆ. ಡಿ. 16 ರಂದು “ಅವತಾರ್ ದಿ ವೇ ಆಫ್ ವಾಟರ್”  ಬಿಡುಗಡೆಯಾಗುತ್ತಿದೆ ಎಂದಿದ್ದಾರೆ.

suddiyaana