ಅವರೆ ಬೇಳೆ ಮೇಳದಲ್ಲಿ ಏನೇನು ಸ್ಪೆಷಲ್ ಐಟಂ ಇದೆ ಗೊತ್ತಾ..? – ತಿಂಡಿ ಪ್ರಿಯರಿಗೆ ಫುಲ್ ಹಬ್ಬ

ಅವರೆ ಬೇಳೆ ಮೇಳದಲ್ಲಿ ಏನೇನು ಸ್ಪೆಷಲ್ ಐಟಂ ಇದೆ ಗೊತ್ತಾ..? – ತಿಂಡಿ ಪ್ರಿಯರಿಗೆ ಫುಲ್ ಹಬ್ಬ

ಬೆಂಗಳೂರು: ಈಗ ಏನಿದ್ರೂ ಅವರೆ ಬೇಳೆಯದ್ದೇ ಸೀಸನ್. ಹೆಚ್ಚಿನವರ ಮನೆಯಲ್ಲಿ ಅವರೆಬೇಳೆ ಉಪ್ಪಿಟ್ಟು, ಅವರೆ ಬೇಳೆ ಸಾರು ಹೀಗೆ ಅಡುಗೆ ಮನೆಯಲ್ಲಿ ಅವರೆ ಬೇಳೆಯದ್ದೇ ವೆರೈಟಿ ತಿಂಡಿಗಳು. ಇನ್ನು ಅವರೆ ಪ್ರಿಯರಿಗಾಗಿ ಈ ಬಾರಿ ಅವರೆ ಬೇಳೆ ಮೇಳ ಶುರುವಾಗಲಿದೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 5 ರಿಂದ 9ರವರೆಗೆ ಒಟ್ಟು 5 ದಿನಗಳ ಕಾಲ ಅವರೆ ಬೇಳೆ ಮೇಳ ನಡೆಯಲಿದೆ. ಮೇಳದಲ್ಲಿ ಬಿಳಿ ಹೋಳಿಗೆ, ಅವರೆ ಕಾಳು ಉಪ್ಪಿಟ್ಟು, ಖಾಲಿ ದೋಸೆ, ಹನಿ ಜಿಲೇಬಿ, ಅವರೆ ಬೇಳೆ ರೋಲ್, ಅವರೆಕಾಳು ಚಿತ್ರಾನ್ನ, ಅವರೆ ಬೇಳೆ ಮಂಚೂರಿ, ಅವಲಕ್ಕಿ ಮಿಕ್ಸ್, ಗೋಡಂಬಿ ಮಿಕ್ಸ್, ಅವರೆಬೇಳೆ ಜಾಮೂನು, ನಿಪ್ಪಟ್ಟು, ಅವರೆಕಾಳು ಪಲಾವ್ ಹೀಗೆ ಬಗೆಬಗೆಯ ತಿನಿಸುಗಳು ಲಭ್ಯವಾಗಲಿವೆ.

ಇದನ್ನೂ ಓದಿ:  ಹೊಸ ವರ್ಷಕ್ಕೆ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಒಳ್ಳೇ ಕಲೆಕ್ಷನ್

ಬಸವನಗುಡಿಯ ಕಡಲೆಕಾಯಿ ಪರಿಷೆಯಿಂದ ಪ್ರೇರಿತರಾಗಿ ವಾಸವಿ ಕಾಂಡಿಮೆಂಟ್ಸ್​ ಸಜ್ಜನ್​ರಾವ್ ಸರ್ಕಲ್​ನಲ್ಲಿ ಅವರೆ ಬೇಳೆ ಮೇಳವನ್ನು 2000ರಲ್ಲಿ ಶುರು ಮಾಡಿತ್ತು. 100 ಕ್ಕೂ ಹೆಚ್ಚು ಭಕ್ಷ್ಯಗಳು ಲಭ್ಯವಿರಲಿವೆ, ಅವರೆ ಬೇಳೆ ಚಿಕ್ಕಿ, ಅವರೆ ಬೇಳೆ ಹಲ್ವಾ, ಫ್ರೈಡ್​ ರೈಸ್ ಮುಂತಾದವುಗಳು ಲಭ್ಯವಿರಲಿವೆ. ಈ ವರ್ಷ ಆಯೋಜಕರು ದಿ. ಪುನೀತ್ ರಾಜ್​ಕುಮಾರ್ ಗೌರವಾರ್ಥ ಅಪ್ಪು ಸ್ಪೆಷಲ್ ಎಂಬ ವಿಶೇಷ ಸಿಹಿತಿಂಡಿಯನ್ನು ಪರಿಚಯಿಸಲಿದ್ದಾರೆ. ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ರೈತರು ನೇರವಾಗಿ ಈ ಮೇಳದಲ್ಲಿ ಪಾಲ್ಗೊಂಡು ಮಾರಾಟ ಮಾಡುವ ಅವಕಾಶವನ್ನೂ ನೀಡಲಾಗಿದೆ.

suddiyaana