ಜನವರಿ 5 ರಿಂದ 9 ರವರೆಗೆ ‘ಅವರೆ ಬೇಳೆ ಮೇಳ’ – ಸಿಲಿಕಾನ್ ಸಿಟಿಯಲ್ಲಿ ಅವರೆ ಪ್ರಿಯರಿಗೆ ಒಂದೊಳ್ಳೇ ಅವಕಾಶ

ಜನವರಿ 5 ರಿಂದ 9 ರವರೆಗೆ ‘ಅವರೆ ಬೇಳೆ ಮೇಳ’ – ಸಿಲಿಕಾನ್ ಸಿಟಿಯಲ್ಲಿ ಅವರೆ ಪ್ರಿಯರಿಗೆ ಒಂದೊಳ್ಳೇ ಅವಕಾಶ

ಸಿಲಿಕಾನ್ ಸಿಟಿಯಲ್ಲಿ ಅವರೆ ಪ್ರಿಯರಿಗೆ ಒಂದು ಸಿಹಿಸುದ್ದಿ. ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅವರೆ ಮೇಳ ನಡೆಯಲಿದೆ. ಜನವರಿ 5 ರಿಂದ 9 ರವರೆಗೆ ‘ಅವರೆ ಬೇಳೆ ಮೇಳ’ ನಡೆಯಲಿದೆ. ಸಿಲಿಕಾನ್ ಸಿಟಿ ಜನರಿಗೆ ವರ್ಷದ ಆರಂಭದಲ್ಲೇ ಅವರೆ ಬೇಳೆ ವಿವಿಧ ಭಕ್ಷ್ಯಗಳನ್ನು ಸವಿಯುವ ಅವಕಾಶ ದೊರೆಯಲಿದೆ.

ಇದನ್ನೂ ಓದಿ:ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಸಕಲ ಸಿದ್ಧತೆ – 2,500 ಸಂತರಿಗೆ ಆಹ್ವಾನ!

ಪ್ರತಿ ವರ್ಷದಂತೆ ಈ ವರ್ಷವೂ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ 2024 ಜನವರಿ 5 ರಿಂದ 9 ರವರೆಗೆ 24ನೇ ಆವೃತ್ತಿಯ ‘ಅವರೆ ಬೇಳೆ ಮೇಳ’ ನಡೆಯಲಿದೆ. ಶ್ರೀ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಮೇಳವನ್ನು ಆಯೋಜಿಸಲಾಗಿದೆ. ಆ ಮೂಲಕ ಉದ್ಯಾನನಗರಿ ಜನರು ವರ್ಷದ ಆರಂಭದಲ್ಲೇ ಅವರೆ ಬೇಳೆ ವಿವಿಧ ಭಕ್ಷ್ಯಗಳನ್ನು ಸವಿಯುವ ಅವಕಾಶ ದೊರೆಯಲಿದೆ. ಅವರೆ ದೋಸೆ, ಪಾಯಸ, ವಡೆ, ಮಂಚೂರಿಯನ್, ಪಫ್, ಹಲ್ವಾ, ಅವರೆ ಐಸ್ಕ್ರೀಂ ಮತ್ತು ನೂರಕ್ಕೂ ಹೆಚ್ಚು ತಿನಿಸುಗಳು ಲಭ್ಯವಿರುತ್ತವೆ. ವಿವಿ ಪುರಂನಲ್ಲಿರುವ ಫುಡ್ ಸ್ಟ್ರೀಟ್ ಇಷ್ಟು ದಿನ ಬೇರೆ ಬೇರೆ ಮೇಳಗಳನ್ನು ನಡೆಸುವ ಸ್ಥಳವಾಗಿತ್ತು.

ಕಳೆದ ವರ್ಷ, ಫುಡ್ ಸ್ಟ್ರೀಟ್ನಲ್ಲಿ ನವೀಕರಿಸಿದ್ದು ಹೆಚ್ಚಿನ ಜನಸಂದಣಿಯ ಕಾರಣ, ಅದನ್ನು ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ವರ್ಷದ ಅವರೆ ಬೇಳೆ ಮೇಳದಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಇದರಿಂದಾಗಿ ಸರತಿ ಸಾಲಿನಲ್ಲಿ ನಿಂತು ಕೂಡ ತಮಗೆ ಬೇಕಾದ ಆಹಾರವನ್ನು ಸೇವಿಸಲಿಲ್ಲ. ಐದು ಲಕ್ಷಕ್ಕೂ ಹೆಚ್ಚು ಜನರು ಸ್ಥಳದಲ್ಲಿ ನೆರೆದಿದ್ದರು. ಆದರೆ, ಈ ವರ್ಷ ಅಂತಹ ಪರಿಸ್ಥಿತಿ ಮರುಕಳಿಸದಂತೆ ಆಯೋಜಕರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ವರ್ಷ ನ್ಯಾಷನಲ್ ಕಾಲೇಜು ಮೈದಾನದ ಒಂದು ಭಾಗವನ್ನು ಮಾತ್ರ ಮೇಳಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಈ ವರ್ಷ ಅವರು ಸಂಪೂರ್ಣ ಸ್ಥಳವನ್ನು ಬಳಸಿಕೊಳ್ಳುವುದರೊಂದಿಗೆ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇನ್ನು ಕಳೆದ ವರ್ಷ ಸುಮಾರು 40 ಸ್ಟಾಲ್‌ಗಳಿದ್ದರೆ, ಈ ವರ್ಷ ಸುಮಾರು 80 ಸ್ಟಾಲ್‌ಗಳಿವೆ. ಹಿರಿಯ ನಾಗರಿಕರಿಗಾಗಿ ವಿಶೇಷ ಕೌಂಟರ್ ಜೊತೆಗೆ, ಅವರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಟಿಕೆಟ್ ಇದ್ದು, ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಪ್ರತಿ ವ್ಯಕ್ತಿಗೆ ಸುಮಾರು ₹100 ದರದಲ್ಲಿ ಮಾರಾಟ ಮಾಡಲಾಗುತ್ತದೆ.

Sulekha