ಸಿಲಿಕಾನ್‌ ಸಿಟಿ ಮಂದಿಗೆ ಬಿಗ್‌ ಶಾಕ್!‌ – ಇನ್ಮುಂದೆ ಆಟೋ ಪ್ರಯಾಣ ಫುಲ್‌ ಕಾಸ್ಟ್ಲಿ!

ಸಿಲಿಕಾನ್‌ ಸಿಟಿ ಮಂದಿಗೆ ಬಿಗ್‌ ಶಾಕ್!‌ – ಇನ್ಮುಂದೆ ಆಟೋ ಪ್ರಯಾಣ ಫುಲ್‌ ಕಾಸ್ಟ್ಲಿ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲವೂ ದುಬಾರಿಯಾಗಿದೆ. ಬೆಲೆ ಏರಿಕೆಯಿಂದಾಗಿ ಸಿಲಿಕಾನ್‌ ಸಿಟಿ ಮಂದಿ ಕಂಗಾಲಾಗಿದ್ದಾರೆ. ವಾಣಿಜ್ಯ ಸಿಲಿಂಡರ್‌ ದರ ಏರಿಕೆಯಾದ ಬೆನ್ನಲ್ಲೇ ಊಟ, ತಿಂಡಿ ದರವನ್ನು ಹೋಟೆಲ್‌ ಮಾಲೀಕರು ಹೆಚ್ಚಳ ಮಾಡುತ್ತಿದ್ದಾರೆ. ಇದೀಗ ಆಟೋ ದರವೂ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಳ! – ಕೋಟಾ ಹಾಸ್ಟೆಲ್‌ಗಳ ಸೀಲಿಂಗ್ ಫ್ಯಾನ್‌ಗೆ ಕಬ್ಬಿಣದ ಪಂಜರ ಅಳವಡಿಕೆ!

ಮಧ್ಯಪ್ರಾಚ್ಯ ಯುದ್ದದ ಎಫೆಕ್ಟ್‌ನಿಂದಾಗಿ ಗ್ಯಾಸ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಎಲ್ ಪಿ ಜಿ ಕೊರತೆಯಿಂದ ಅಟೋ ಚಾಲಕರು ಬಂಕ್ ಮುಂದೆ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವಂತಹ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಹಾಗೆಯೇ ಇದರ ಜೊತೆಯಲ್ಲಿಯೇ ಬಂಕ್ ಗಳಲ್ಲಿ ಗ್ಯಾಸ್ ಬೆಲೆ ಏರಿಕೆಯಾಗಿದೆ. ಆಟೋಗಳು ಬಳಸುತ್ತಿರುವ ಎಲ್ ಪಿಜಿ ದರ ಪ್ರತಿ ಲೀಟರ್ ವೊಂದಕ್ಕೆ 5.73 ರೂ. ಏರಿಕೆಯಾಗಿದೆ. ಇದರಿಂದ ಅಟೋ ಪ್ರಯಾಣದ ಕನಿಷ್ಠದರವನ್ನು 50 ರೂಪಾಯಿಗೆ ಹೆಚ್ಚಿಸಲು ಅಟೋ ಚಾಲಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಆಟೋ ಕನಿಷ್ಠ ದರ (2 ಕಿ.ಮೀ ಗೆ) 36 ರೂ. ಹಾಗೂ ನಂತರದ ಪ್ರತಿ ಕಿ.ಮೀ ಗೆ 18 ರೂ. ಇದ್ದು, ಇದನ್ನು ಕ್ರಮವಾಗಿ 50 ರೂ. ಹಾಗೂ 25 ರೂ. ಏರಿಸಬೇಕೆಂದು ಆಟೋ ಸಂಘಟನೆಗಳು ಒತ್ತಾಯಿಸಿವೆ. ಈ ರೀತಿಯಲ್ಲಿ ಏರಿಕೆ ಮಾಡಿದ್ದಲ್ಲಿ ಮಾತ್ರ ಅಟೋ ಚಾಲಕರು ನಿರಾಳ ಭಾವ ಹೊಂದಬಹುದು ಎಂದು ಹೇಳಿದ್ದಾರೆ.

ಗ್ಯಾಸ್ ಬೆಲೆ ಏರಿಕೆಯಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಸಾರಿಗೆ ಸಚಿವರು ಕೂಡಲೇ ಸಭೆ ನಡೆಸಿ ನಮ್ಮ ಕಷ್ಟ ಬೇಡಿಕೆಯನ್ನು ಆಲಿಸಬೇಕು ಮತ್ತು ಇದಕ್ಕೆ ಪರಿಹಾರ ನೀಡಬೇಕು ಎಂದು ಅಟೋ ಚಾಲಕರ ಟ್ರೇಡ್ ಯೂನಿಯನ್ ಆಗ್ರಹಿಸಿದೆ.

ಒಂದು ವೇಳೆ ರಾಜ್ಯ ಸರ್ಕಾರ ಅಟೋ ಚಾಲಕರ ಬೇಡಿಕೆಗೆ ಸಮ್ಮತಿ ನೀಡಿದ್ದಲ್ಲಿ ಅಟೋ ಪ್ರಯಾಣ ಇನ್ನು ಮುಂದೆ ಗಗನ ಕುಸುಮವಾಗಲಿದೆ. ತುರ್ತು ಕೆಲಸಕ್ಕೆ ಒಂದೆಡೆಯಿಂದ ಇನ್ನೊಂದೆಡೆ ತೆರಳಲು ಕಷ್ಟಪಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದ ಮತ್ತೊಂದು ಬೆಲೆ ಏರಿಕೆಯ ಬಿಸಿ ಬೆಂಗಳೂರು ನಾಗರಿಕನ್ನು ಕಾಡುತ್ತಿದೆ.

ಅದೇ ರೀತಿಯಲ್ಲಿ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ. ಒಂದು ವೇಳೆ ಈ ರೀತಿ ಆಗಿದ್ದೇ ಆದ್ದಲ್ಲಿ ಈ ಸಂದರ್ಭದಲ್ಲಿ ಮತ್ತೆ ಉಳಿದ ಅಟೋ ಚಾಲಕರು ಬೆಲೆ ಏರಿಕೆಗೆ ಪಟ್ಟು ಹಿಡಿಯಲಿದ್ದಾರೆ. ಒಟ್ಟಾರೆ ಈ ಬೆಲೆ ಏರಿಕೆ ಮಾತ್ರ ಜನಸಾಮಾನ್ಯರ ಬದುಕನ್ನೇ ಕಸಿದುಕೊಳ್ಳುವ ರೀತಿಯಲ್ಲಿ ಎಲ್ಲಿದೆ ಎಂದು ಜನಸಾಮಾನ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Shwetha M