ಸುಡು ಬಿಸಿಲಿನಿಂದ ಪಾರಾಗಲು ಆಟೋ ಚಾಲಕನ ಕ್ರೇಜಿ ಪ್ಲಾನ್‌! – ಮಸ್ತ್‌ ಐಡಿಯಾ ಗೆ ಸೂರ್ಯನೇ ಶಾಕ್!

ಸುಡು ಬಿಸಿಲಿನಿಂದ ಪಾರಾಗಲು ಆಟೋ ಚಾಲಕನ ಕ್ರೇಜಿ ಪ್ಲಾನ್‌! – ಮಸ್ತ್‌ ಐಡಿಯಾ ಗೆ ಸೂರ್ಯನೇ ಶಾಕ್!

ದೇಶದ ಹಲವು ಕಡೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಸುಡು ಸುಡು ಬಿಸಿಲು ಜನರ ಆರೋಗ್ಯಕ್ಕೆ ಗಂಭೀರ ಪರಿಣಾಮ ಬೀಳುತ್ತಿದೆ. ಬೆಳಗ್ಗೆಯೇ ಮೈ ಸುಡುವಷ್ಟು ಬಿಸಿಲು ಇದ್ದು, ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇನ್ನು ಆಟೋ ಚಾಲಕರಂತೂ ಅನಿವಾರ್ಯವಾಗಿ ರಸ್ತೆಯಲ್ಲಿ ಓಡಾಡಬೇಕು. ಬಿಸಿಲು ಅಂತಾ ಮನೆಯಲ್ಲಿ ಕುಳಿತ್ರೆ ಜೀವನ ಸಾಗಿಸುವುದು ತುಂಬಾನೆ ಕಷ್ಟ. ಹೀಗಾಗಿಯೇ ಇಲ್ಲೊಬ್ಬ ಆಟೋ ಚಾಲಕ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಹೊಸ ಪ್ಲಾನ್‌ ಮಾಡಿದ್ದಾರೆ. ಆಟೋ ಮೇಲೆಯೇ ಹುಲ್ಲುಗಳನ್ನು ಬೆಳೆಸಿದ್ದಾರೆ. ಸದ್ಯ ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ರಾಜಸ್ತಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ಸೆಣಸಾಟ – ಗೆದ್ದರೆ ಆರ್‌ಆರ್‌ ಅಧಿಕೃತವಾಗಿ ಪ್ಲೇಆಫ್ ಪ್ರವೇಶ

ದೇಶದಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದೆ.  ಉರಿ ಬಿಸಿಲಿನ ಬೇಗೆಯಿಂದ ಪಾರಾಗುವುದೇ ಒಂದು ಸವಾಲಾಗಿಬಿಟ್ಟಿದೆ. ಈಗಾಗಲೇ ಅತ್ಯಂತ ಅಪಾಯದ ಮಟ್ಟ ತಲುಪಿರುವ ಉಷ್ಣತೆ ಇನ್ನೆಷ್ಟರ ಮಟ್ಟಿಗೆ ಏರಿಕೆಯಾಗಬಹುದು ಎಂಬ ಆತಂಕವೂ ಶುರುವಾಗಿದೆ. ಈ ಬಿಸಿಲ ಝಳಕ್ಕೆ ಬೇಸತ್ತು ಜನರು ದಿನದ 24 ಗಂಟೆಯೂ ಫ್ಯಾನ್, ಎಸಿಯ ಮೊರೆ ಹೋಗಿದ್ದಾರೆ. ಅಂತಹದರಲ್ಲಿ ಇಲ್ಲೊಬ್ಬ ಆಟೋ ಚಾಲಕ ಬಿರು ಬಿಸಿಲ ಶಾಖದಿಂದ ತಪ್ಪಿಸಿಕೊಳ್ಳಲು ಒಂದೊಳ್ಳೆ ಉಪಾಯ ಮಾಡಿದ್ದಾರೆ. ತನ್ನ ಆಟೋವನ್ನು ಸಂಪೂರ್ಣವಾಗಿ ಗೋಣಿ ಚೀಲದಿಂದ ಕವರ್ ಮಾಡಿ ಅದರಲ್ಲಿ ಸಣ್ಣ ಸಣ್ಣ ಹುಲ್ಲುಗಳನ್ನು ಬೆಳೆಸಿದ್ದಾರೆ.  ಈ ಮೂಲಕ ರಿಕ್ಷಾದಲ್ಲಿ ಬರುವ ಪ್ರಯಾಣಿಕರನ್ನು ತಂಪಾಗಿರಿಸಲು ಮುಂದಾಗಿದ್ದಾರೆ.

ವಿನೋದ್ ಕುಮಾರ್ (@vinodkumar205) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ.  “ಏನ್ ಕ್ರೇಜಿ ಐಡಿಯಾ ಗುರು, ಸೂರ್ಯನೇ ಒಮ್ಮೆ ಶಾಕ್ ಆಗ್ಬೇಕು” ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದು, ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ವೈರಲ್‌ ಆದ ವಿಡಿಯೋದಲ್ಲಿ ಆಟೋ ಚಾಲಕರೊಬ್ಬರು ಬಿಸಿಲಿನಿನ ಶಾಖದಿಂದ ತಪ್ಪಿಸಿಕೊಳ್ಳಲು  ತನ್ನ ಆಟೋಗೆ ರಕ್ಷಾ ಕವಚವನ್ನು ಅಳವಡಿಸಿಕೊಂಡಿರುವುದನ್ನು ಕಾಣಬಹುದು.  ಆಟೋ ಚಾಲಕ ತನ್ನ ರಿಕ್ಷಾವನ್ನು ಸಂಪೂರ್ಣವಾಗಿ ಸೆಣಬಿನ ಗೋಣಿ ಚೀಲದಿಂದ ಕವರ್ ಮಾಡಿ ಅದರ ಮೇಲೆ ಸಣ್ಣ ಸಣ್ಣ ಹುಲ್ಲುಗಳನ್ನು ಬೆಳೆಸಿದ್ದಾರೆ. ಇದರಿಂದ ಸೂರ್ಯನ ಶಾಖ ಆಟೋದ ಒಳಗೆ ತಟ್ಟೋದೆ ಇಲ್ಲ, ಪ್ರಯಾಣಿಕರು  ಈ ಆಟೋದ ಮೂಲಕ ತಣ್ಣಗಿ ವಾತಾವರಣದಲ್ಲಿ ಪ್ರಯಾಣಿಸಬಹುದಾಗಿದೆ.

Shwetha M

Leave a Reply

Your email address will not be published. Required fields are marked *