ಕೋತಿ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ಆಟೋ ಚಾಲಕ!  – ರಸ್ತೆಯಲ್ಲಿ ಆಗಿದ್ದೇನು?

ಕೋತಿ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ಆಟೋ ಚಾಲಕ!  – ರಸ್ತೆಯಲ್ಲಿ ಆಗಿದ್ದೇನು?

ಸಾವು ಯಾವ ರೂಪದಲ್ಲಿ ಬೇಕಾದ್ರೂ ಬರಬಹುದು. ಇಂದು ಇದ್ದವರು ನಾಳೆ ಇರ್ತಾರೆ ಅನ್ನೋ ಗ್ಯಾರೆಂಟಿ ಇಲ್ಲ. ಇದೀಗ ಇಲ್ಲೊಂದು ಕಡೆ ಹೃದಯ ವಿದ್ರಾವಕ ಘಟನೆ ನಡೆದಿದೆ. ಕೋತಿ ಜೀವ ಉಳಿಸಲು ಹೋಗಿ ಆಟೋ ಚಾಲಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಇಂದು ಭಾರತ VS ಜಿಂಬಾಬ್ವೆ ಹೈವೋಲ್ಟೇಜ್‌ ಪಂದ್ಯ!‌ –  ಮ್ಯಾಚ್ ಟಿಕೆಟ್‌ ಇದ್ರೆ ಮೆಟ್ರೋ ಪ್ರಯಾಣ ಫ್ರೀ!

ಈ ಘಟನೆ ತುಮಕೂರು ಕೊರಟಗೆರೆಯ ಜಂಪೇನಹಳ್ಳಿ ಬಳಿ ನಡೆದಿದೆ. ಸೋಂಪುರ‌ ನಿವಾಸಿ‌ ಮಹೇಂದ್ರಕುಮಾರ್ ಸಾವನಪ್ಪಿದ ಚಾಲಕ. ಕೊರಟಗೆರೆಯಿಂದ ತುಮಕೂರು ಕಡೆಗೆ ಆಟೋ‌‌ ಹೋಗುತ್ತಿದ್ದಾಗ ಜಂಪೇನಹಳ್ಳಿ‌ ಬಳಿ ಈ ದುರಂತ ಸಂಭವಿಸಿದೆ.

ಅಷ್ಟಕ್ಕೂ ಆಗಿದ್ದೇನು?

ತುಮಕೂರು ಕಡೆಗೆ ಆಟೋ‌‌ ಹೋಗುತ್ತಿದ್ದಾಗ ಜಂಪೇನಹಳ್ಳಿ‌ ಬಳಿ ಕೋತಿಯೊಂದು ರಸ್ತೆ ದಾಟುತ್ತಿತ್ತು. ಈ ವೇಳೆ ಆಟೋ ಚಾಲಕ ಕೋತಿಯನ್ನು ಬಚಾವ್‌ ಮಾಡಲು ಹೋಗಿ ಸಡನ್‌ ಆಗಿ ಬ್ರೇಕ್‌ ಹಾಕಿದ್ದಾರೆ. ಇದ್ರಿಂದಾಗಿ ಆಟೋ ಪಲ್ಟಿಯಾಗಿದೆ. ಪಲ್ಟಿಯಾದ ಆಟೋಗೆ ತುಮಕೂರು ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಡಿಕ್ಕಿ ‌ಹೊಡೆದಿದೆ. ಕಾರು ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಮಹೇಂದ್ರ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.

Shwetha M