ಈ ವ್ಯಕ್ತಿಗಳು ಕುಡಿಯದೇ ಇದ್ರೂ ತೂರಾಡುತ್ತಾರೆ! – ಮದ್ಯ ಸೇವಿಸದಿದ್ರೂ ಅಮಲೇರುವುದು ಯಾಕೆ?

ಈ ವ್ಯಕ್ತಿಗಳು ಕುಡಿಯದೇ ಇದ್ರೂ ತೂರಾಡುತ್ತಾರೆ! – ಮದ್ಯ ಸೇವಿಸದಿದ್ರೂ ಅಮಲೇರುವುದು ಯಾಕೆ?

ಕೆಲವು ಖಾಯಿಲೆಗಳೆ ವಿಚಿತ್ರ.. ನಮ್ಮ ಊಹೆಗೂ ನಿಲುಕದ ಕಾಯಿಲೆಗಳಿವೆ.. ಅದಲ್ಲೊಂದು ಕಾಯಿಲೆಯೇ ಎಣ್ಣೆ ಕುಡೀದೇ ಇದ್ರೂ ಫುಲ್‌ಟೈಟ್ ಆದಂತೆ ತೂರಾಡೋದು. ಈ ಕಾಯಿಲೆಗೆ ಒಳಗಾದವರು ಕೇವಲ ಊಟ ಮಾಡಿ‌ ಎದ್ದು ಬಂದ್ರೂ ಎಣ್ಣೆ ಕುಡಿದವರಂತೆ ತೂರಾಡ್ತಾರೆ. ಯಾಕೆ ಹೀಗಾಗುತ್ತೆ ಅನ್ನೋ ಮಾಹಿತಿ ಈ ಲೇಖನದಲ್ಲಿದೆ.

ಇದನ್ನೂ ಓದಿ: ನಿಮ್ಮ ಕಣ್ಣುಗಳು ತುಂಬಾ‌ ಡ್ರೈ ಆಗ್ತಿದ್ಯಾ? – ಯಾಕೆ ಹೀಗಾಗುತ್ತೆ ಗೊತ್ತಾ?

ಕೆಲವರು ಕೇವಲ ನೀರು, ಜ್ಯೂಸ್‌ ಕುಡಿದ್ರೂ ಕುಡಿದವರಂತೆ ವರ್ತಿಸುತ್ತಾರೆ. ಇಡೀ ದಿನ ಅಮಲೇರಿದವರಂತೆ ಇರುತ್ತಾರೆ. ತಮ್ಮ ಮೈಮೇಲೆ ಪರಿಜ್ಞಾನ ಇಲ್ಲದವರಂತೆ ವರ್ತಿಸುತ್ತಾರೆ. ಈ ವ್ಯಕ್ತಿಗಳು ಹೀಗೆ ತೂರಾಡಿಕೊಂಡು ಇರಲು ಕಾರಣ ಅವರ ಆರೋಗ್ಯ ಸಮಸ್ಯೆ. ಹೀಗೆ ಕುಡಿದವರಂತೆ ವರ್ತಿಸುವುದಕ್ಕೆ ಆಟೋ ಬ್ರೇವರಿ ಸಿಂಡ್ರೋಮ್ ಅಂತ ಕರೀತಾರೆ..‌ ಹೀಗಂದ್ರೇನು‌ ಮತ್ತು ಇದಕ್ಕೆ ಕಾರಣಗಳೇನು ಅನ್ನೋದನ್ನು ವಿವರಿಸುತ್ತೇವೆ.

ಕೆಲವರಿಗೆ ಸಾಮಾನ್ಯ ಕಾರ್ಬೋಹೈಡ್ರೇಟ್ ಇರುವ ಊಟ ಮಾಡಿದ್ರೂ ಅಮಲೇರೋದಿಕ್ಕೆ ಶುರುವಾಗುತ್ತೆ. ಇದಕ್ಕೆ‌ ಕಾರಣ ಜಠರ ಅಥವಾ ಸಣ್ಣ ಕರುಳಿನಲ್ಲಿರುವ ಶಿಲೀಂದ್ರ. ಈ ಶಿಲೀಂದ್ರಗಳಿಂದಾಗಿ ಊಟ ಹೊಟ್ಟೆಸೇರುತ್ತಿದ್ದಂತೆ ಜೀರ್ಣ ಕ್ರಿಯೆಯ ವೇಳೆ ಎಥನಾಲ್ ಉತ್ಪಾದನೆಯಾಗುತ್ತದೆ‌‌. ಅಂದರೆ ನೀವು ತಿನ್ನುವ ಆಹಾರದಿಂದಲೇ ನಿಮ್ಮ ಹೊಟ್ಟೆಯೊಳಗೆ ಫರ್ಮುಟೇಶನ್ ಆರಂಭವಾಗಿ,‌ಅಲ್ಲೇ ಆಲ್ಕೊಹಾಲ್ ‌ಉತ್ಪಾದನೆಯಂತಹ ಸ್ಥಿತಿ‌ ನಿರ್ಮಾಣವಾಗುತ್ತದೆ. ಇದರಿಂದ ಊಟ‌ ಮಾಡಿದ್ರೂ ಅಮಲೇರುವಂತಾಗುತ್ತದೆ ಎಂದು ಪ್ರತಿಷ್ಠಿತ ಮೆಡಿಕಲ್‌ ನ್ಯೂಸ್ ಟುಡೇ ವರದಿಯಲ್ಲಿ ಉಲ್ಲೇಖವಾಗಿದೆ, ಈ‌ ಖಾಯಿಲೆ‌ ಹೊಂದಿರುವವರ ರಕ್ತದಲ್ಲಿ ಅಧಿಕ ಆಲ್ಕೊಹಾಲ್ ಅಂಶವಿರುತ್ತದೆ‌ಯಂತೆ. ಇದಕ್ಕೆಲ್ಲಾ ಜಠರ‌ ಮತ್ತು ಸಣ್ಣ ಕರುಳಿನಲ್ಲಿರುವ ಶಿಲೀಂದ್ರಗಳೇ ಕಾರಣ ಅಂತಾ ಅಧ್ಯಯನ ವರದಿಯಿಂದ ಗೊತ್ತಾಗಿದೆ.

Shwetha M