ಜಗತ್ತಿನ ದುರದೃಷ್ಟಕರ ಆಟಗಾರ ಹಿಟ್‌ಮ್ಯಾನ್ – ರೋ-HIT ಬಗ್ಗೆ ಹೀಗೆಂದಿದ್ಯಾಕೆ ಹೆಡ್?

ಜಗತ್ತಿನ ದುರದೃಷ್ಟಕರ ಆಟಗಾರ ಹಿಟ್‌ಮ್ಯಾನ್ – ರೋ-HIT ಬಗ್ಗೆ ಹೀಗೆಂದಿದ್ಯಾಕೆ ಹೆಡ್?

ರೋಹಿತ್ ಶರ್ಮಾ ಟೀಂ ಇಂಡಿಯಾದ ಯಶಸ್ವೀ ಬ್ಯಾಟ್ಸ್​ಮನ್ ಮತ್ತು ಕ್ಯಾಪ್ಟನ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೀಗ ಅದೇ ರೋಹಿತ್ ರನ್ನ ಜಗತ್ತಿನ ದುರದೃಷ್ಟಕರ ಆಟಗಾರ ಎನ್ನಲಾಗ್ತಿದೆ. ಅಜೇಯವಾಗಿ ಟೀಂ ಇಂಡಿಯಾವನ್ನು ಫೈನಲ್ ತಲುಪಿಸಿದ್ದ ರೋಹಿತ್ ಈಗ ನತದೃಷ್ಟ ಎಂದು ಕರೆಸಿಕೊಳ್ತಿದ್ದಾರೆ.

2023ರ ವಿಶ್ವಕಪ್ ಜರ್ನಿಯಲ್ಲಿ ಟೀಂ ಇಂಡಿಯಾ ಬೆಸ್ಟ್ ಟೀಂ ಆಗಿತ್ತು. ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಏಕೈಕ ತಂಡವಾಗಿತ್ತು. ಟೀಂ ಇಂಡಿಯಾವನ್ನ ಫೈನಲ್​ವರೆಗೂ ಕೊಂಡೊಯ್ಯುವಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾರ ಪಾತ್ರ ಬಹಳ ಮಹತ್ವದ್ದಾಗಿತ್ತು. ಆದ್ರೆ ನವೆಂಬರ್ 19ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಕಾಂಗರೂಗಳ ವಿರುದ್ಧ ಸೋಲೊಪ್ಪಿಕೊಂಡಿತು. ಇದರೊಂದಿಗೆ ರೋಹಿತ್ ಶರ್ಮಾ ವಿಶ್ವಕಪ್ ಇತಿಹಾಸದಲ್ಲಿ ನತದೃಷ್ಟಕರ ಆಟಗಾರ ಎನಿಸಿಕೊಂಡರು. ಪಂದ್ಯದ ಬಳಿಕ ಮಾತನಾಡಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಕೂಡ ರೋಹಿತ್ ಶರ್ಮಾ ದುರದೃಷ್ಟಕರ ಆಟಗಾರ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಇದನ್ನೂ ಓದಿ : HEAD ಗೆ ತಲೆಬಾಗಿದ ಭಾರತ – ಭಾರತದ ಸೋಲಿಗೆ ಏನು ಕಾರಣ? ಆಸ್ಟ್ರೇಲಿಯಾ ಗೆದ್ದು ಬೀಗಲು ಸಾಧ್ಯವಾಗಿದ್ದು ಹೇಗೆ?

2007 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರೋಹಿತ್ ಶರ್ಮಾ 2011 ರ ಏಕದಿನ ವಿಶ್ವಕಪ್ ಆಡಲು ಸಿದ್ಧರಾಗಿದ್ದರು. ಅವರ ಹೆಸರನ್ನ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿಯೂ ಸೇರಿಸಲಾಗಿತ್ತು. ಆದರೆ ಅಂತಿಮವಾಗಿ ರೋಹಿತ್ ಸ್ಥಾನಕ್ಕೆ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾರನ್ನು ಆಯ್ಕೆ ಮಾಡಲಾಗಿತ್ತು. 2015 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ರೋಹಿತ್​ಗೆ ಚೊಚ್ಚಲ ವಿಶ್ವಕಪ್ ಆಡುವ ಅವಕಾಶ ಸಿಕ್ಕಿತ್ತು. ಆದರೆ ಸೆಮಿ-ಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲುವುದರೊಂದಿಗೆ ತಂಡದ ವಿಶ್ವಕಪ್ ಪ್ರಯಾಣ ಅಂತ್ಯಗೊಂಡಿತ್ತು. ಇನ್ನು 2019 ರಲ್ಲಿ ರೋಹಿತ್​ಗೆ ಎರಡನೇ ಬಾರಿಗೆ ವಿಶ್ವಕಪ್ ಆಡುವ ಅವಕಾಶ ಸಿಕ್ಕಿತ್ತು. ಈ ಆವೃತ್ತಿಯಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಒಂದು ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಬಾರಿಸಿದ್ದರು. ಆದ್ರೆ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ ಸೋತಿತು. 2023ರ ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾರೇ ತಂಡದ ನಾಯಕರಾಗಿದ್ದು, ತಂಡವನ್ನ ಯಶಸ್ವಿಯಾಗಿ ಫೈನಲ್ ವರೆಗೂ ಕೊಂಡೊಯ್ದಿದ್ದರು. ಇಡೀ ಟೂರ್ನಿಯಲ್ಲಿ ತಮ್ಮ ಅರ್ಧಶತಕಗಳ ಬಗ್ಗೆಯಾಗಲೀ, ತಮ್ಮ ಶತಕದ ಬಗ್ಗೆಯಾಗಲೀ ಚಿಂತಿಸದೆ ಸ್ಫೋಟಕ ಬ್ಯಾಟಿಂಗ್ ಮಾಡಿದ್ರು. ಆದ್ರೆ ಇಲ್ಲಿಯೂ ವಿಶ್ವಕಪ್ ಗೆ ಮುತ್ತಿಡುವ ಅವಕಾಶ ಕಳೆದುಕೊಂಡರು. ಆಸ್ಟ್ರೇಲಿಯಾ ವಿರುದ್ಧದ ಸೋಲಿನ ಬಳಿಕ ಕ್ರೀಡಾಂಗಣದಲ್ಲೇ ರೋಹಿತ್ ಕಣ್ಣೀರು ಹಾಕಿದ್ರು. ಟೀಂ ಇಂಡಿಯಾ ಪ್ಲೇಯರ್ಸ್ ಮೌನಕ್ಕೆ ಶರಣಾದ್ರು. ಆದ್​ರಿಲ್ಲಿ ಟೀಂ ಇಂಡಿಯಾ ಫೈನಲ್ ನಲ್ಲಿ ಸೋತಿರುವ ಕಾರಣಕ್ಕೆ ರೋಹಿತ್ ರನ್ನ ದುರದೃಷ್ಟಕರ ಆಟಗಾರ ಎನ್ನಲಾಗ್ತಿದೆ. ಆದರೆ ಕ್ಯಾಪ್ಟನ್ ಆಗಿ, ಹಿಟ್ ಮ್ಯಾನ್ ಆಗಿ ರೋಹಿತ್ ಮಾಡಿರುವ ಹಲವು ದಾಖಲೆಗಳನ್ನ ಮರೆಯುವಂತಿಲ್ಲ.

 

Shantha Kumari