ಎರಡನೇ ಬಾರಿ ಲೇಬರ್ ಪಕ್ಷ ಅಧಿಕಾರಕ್ಕೆ – ಪ್ರಧಾನಿ ಆಂಥೋನಿ ಪ್ರಮಾಣ ವಚನ

ಕಳೆದ ಮೇ 3 ರಂದು ಮಧ್ಯ-ಎಡ ಲೇಬರ್ ಪಕ್ಷವು ಭರ್ಜರಿ ಗೆಲುವಿನೊಂದಿಗೆ ಮರು ಆಯ್ಕೆಯಾದ ನಂತರ ಆಸ್ಟ್ರೇಲಿಯಾದ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ರು.
ಮತ ಎಣಿಕೆ ಇನ್ನೂ ಮುಂದುವರೆದಿದ್ದು, 150 ಸ್ಥಾನಗಳ ಸದನದಲ್ಲಿ ಲೇಬರ್ ಪಕ್ಷವು 92 ರಿಂದ 95 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಹಿಂದಿನ ಸಂಸತ್ತಿನಲ್ಲಿ ಪಕ್ಷವು 78 ಸ್ಥಾನಗಳನ್ನು ಹೊಂದಿತ್ತು.
ವಿರೋಧ ಪಕ್ಷಗಳ ಮೈತ್ರಿಕೂಟವು 41 ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸಂಪುಟವು ತನ್ನ ಮೊದಲ ಸಭೆಯನ್ನು ನಡೆಸಿತು.
ಪ್ರಧಾನಿ ಆಂಥೋನಿ ಅಲ್ಬನೀಸ್ ನಾಳೆ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಭೇಟಿ ಮಾಡಲು ಜಕಾರ್ತಾಗೆ ಹೋಗುವ ನಿರೀಕ್ಷೆಯಿದೆ. ನಂತರ ಅವರು ಭಾನುವಾರ ಪೋಪ್ ಲಿಯೋ XIV ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಇಂಡೋನೇಷ್ಯಾದಿಂದ ರೋಮ್‌ಗೆ ತೆರಳಲಿದ್ದಾರೆ.