ಕಾಂಗರೂಗಳ ಎದುರು ಮಂಡಿಯೂರಿದ ಭಾರತ – ಮೂರನೇ ಟೆಸ್ಟ್‌ ನಲ್ಲಿ ಟೀಮ್ ಇಂಡಿಯಾಗೆ ಹೀನಾಯ ಸೋಲು

ಕಾಂಗರೂಗಳ ಎದುರು ಮಂಡಿಯೂರಿದ ಭಾರತ – ಮೂರನೇ ಟೆಸ್ಟ್‌ ನಲ್ಲಿ ಟೀಮ್ ಇಂಡಿಯಾಗೆ ಹೀನಾಯ ಸೋಲು

ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ನಲ್ಲಿ ಟೀಮ್ ಇಂಡಿಯಾ ಕಾಂಗರೂಗಳ ಎದುರು ಹೀನಾಯ ಸೋಲು ಕಂಡಿದೆ. ಈ ಪಂದ್ಯವನ್ನು ಸೋತರೂ ಭಾರತ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ನಾಲ್ಕನೇ ಟೆಸ್ಟ್ ಪಂದ್ಯ ಅಹಮದಾಬಾದ್‌ ನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ ಸರಣಿ 2-2ರಿಂದ ಸಮವಾಗಲಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ನೀಡಿದ 76 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಆಸೀಸ್ ಪಡೆ ಕೇವಲ 1 ವಿಕೆಟ್ ಕಳೆದುಕೊಂಡು ಸುಲಭವಾಗಿಯೇ ಗುರಿ ತಲುಪಿತು.

ಇದನ್ನೂ ಓದಿ:  197 ರನ್‌ಗಳಿಗೆ ಕಾಂಗರೂಗಳನ್ನು ಕಟ್ಟಿಹಾಕಿದ ಭಾರತ – ಕಪಿಲ್ ದೇವ್ ದಾಖಲೆ ಮುರಿದ ಅಶ್ವಿನ್

ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಬಿಸಿಸಿಐ ಸ್ಪಿನ್ನರ್ ಸ್ನೇಹಿ ಪಿಚ್ ಅನ್ನು ತಯಾರಿಸಿತ್ತು. ಆದರೆ, ಈ ಪಿಚ್‌ನಲ್ಲಿ ಟೀಂ ಇಂಡಿಯಾ ಸ್ಪಿನ್ನರ್‌ಗಳು ಮಿಂಚುವುದಕ್ಕಿಂತ ಹೆಚ್ಚಾಗಿ ಆಸ್ಟ್ರೇಲಿಯಾದ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾದ ಸ್ಪಿನ್ನರ್  ನಾಥನ್ ಲಿಯಾನ್ ಭಾರತದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದು, ಎರಡೂ ಇನ್ನಿಂಗ್ಸ್‌ ಗಳಲ್ಲಿ ಒಟ್ಟು 11 ವಿಕೆಟ್ ಪಡೆದರು.

ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 109 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 197 ರನ್ ಗಳಿಸಿ 88 ರನ್ ಗಳ ಮುನ್ನಡೆ ಸಾಧಿಸಿತ್ತು. ಇದಾದ ಬಳಿಕ ಭಾರತ ತನ್ನ ಎರಡನೇ ಇನ್ನಿಂಗ್ಸ್ ಮುಗಿಸಿ ಆಸ್ಟ್ರೇಲಿಯಕ್ಕೆ 76 ರನ್ ಟಾರ್ಗೆಟ್ ನೀಡಿತ್ತು. ಈ ವಿಕೆಟ್ನಲ್ಲಿ ಈ ಗುರಿ ಕೂಡ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಈ ವಿಕೆಟ್ ಸ್ಪಿನ್ನರ್‌ ಗಳಿಗೆ ಸಹಾಯಕವಾಗಿದೆ, ಇದರೊಂದಿಗೆ ಟೀಂ ಇಂಡಿಯಾದಲ್ಲಿ ಮೂವರು ಅತ್ಯುತ್ತಮ ಸ್ಪಿನ್ನರ್ ಕೂಡ ಇದ್ದರು. ಆದರೆ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರಂತಹ ಸ್ಪಿನ್ನರ್ಗಳಿದ್ದರೂ ಆಸ್ಟ್ರೇಲಿಯಾ ಸುಲಭವಾಗಿ ಗುರಿ ತಲುಪಿತು.

suddiyaana