ಆಸ್ಟ್ರೇಲಿಯಾ VS ಸೌತ್ ಆಫ್ರಿಕಾ – ಸೆಕೆಂಡ್ ಸೆಮಿಫೈನಲ್‌ನಲ್ಲಿ ಕಾಂಗರೂ ಮತ್ತು ಹರಿಣಗಳ ಕದನ

ಆಸ್ಟ್ರೇಲಿಯಾ VS ಸೌತ್ ಆಫ್ರಿಕಾ – ಸೆಕೆಂಡ್ ಸೆಮಿಫೈನಲ್‌ನಲ್ಲಿ ಕಾಂಗರೂ ಮತ್ತು ಹರಿಣಗಳ ಕದನ

ಸೆಕೆಂಡ್ ಸೆಮಿಫೈನಲ್.. ಆಸ್ಟ್ರೇಲಿಯಾ VS ಸೌತ್ ಆಫ್ರಿಕಾ.. ಕೊಲ್ಕತ್ತಾದ ಈಡನ್​​​ ಗಾರ್ಡನ್ಸ್​​ನಲ್ಲಿ ಎರಡೂ ಘಟಾನುಘಟಿ ಟೀಂಗಳು ಮುಖಾಮುಖಿಯಾಗುತ್ತಿವೆ. ಇದು ನಿಜಕ್ಕೂ ರಣರೋಚಕ ಪಂದ್ಯವಾಗೋದ್ರಲ್ಲಿ ಯಾವುದೇ ಡೌಟ್ ಇಲ್ಲ. ದಕ್ಷಿಣ ಆಫ್ರಿಕಾವಂತೂ ಪಾಯಿಂಟ್ಸ್​ ಟೇಬಲ್​ನಲ್ಲಿ ನಂಬರ್​-2 ಪೊಸೀಶನ್​​ನಲ್ಲಿದೆ. ಇತ್ತ ಆಸ್ಟ್ರೇಲಿಯಾ ಕಳೆದ ಕೆಲ ಮ್ಯಾಚ್​ಗಳಲ್ಲಿ ಆಡಿದ್ದನ್ನ ನೋಡಿದ್ರೆ, ಈ ಬಾರಿಯ ವರ್ಲ್ಡ್​ಕಪ್ ಗೆಲ್ಲೋ ಮತ್ತೊಂದು ಫೇವರೇಟ್ ಟೀಂ ಎನ್ನಿಸಿಕೊಂಡಿದೆ. ಹೀಗಾಗಿ ಕಾಂಗರೂ ಮತ್ತು ಹರಿಣಗಳ ನಡುವಿನ ಕದನದಲ್ಲಿ ಯಾರು ಗೆಲ್ತಾರೆ ಅನ್ನೋದೆ ಈಗಿನ ಕುತೂಹಲ.

ಇದನ್ನೂ ಓದಿ: ಆ ಚಿಕ್ಕ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಕ್ಕೆ ತುಂಬಾ ಖುಷಿಯಾಗಿದೆ- ತನ್ನ ದಾಖಲೆ ಮುರಿದ ಕೊಹ್ಲಿಗೆ ಕ್ರಿಕೆಟ್ ದೇವರ ಭಾವುಕ ಪೋಸ್ಟ್

ವರ್ಲ್ಡ್​​ಕಪ್ ಲೀಗ್ ಸ್ಟೇಜ್​​ನಲ್ಲಿ ದಕ್ಷಿಣ ಆಫ್ರಿಕಾ ಆಡಿದ 9 ಮ್ಯಾಚ್​ಗಳಲ್ಲಿ 7 ಪಂದ್ಯಗಳನ್ನ ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ಕೂಡ 7 ಮ್ಯಾಚ್​ಗಳನ್ನ ಗೆದ್ದಿದೆ. ಆದ್ರೆ ಎರಡೂ ಟೀಂಗಳ ಬಗ್ಗೆ ಕಂಪೇರ್ ಮಾಡಿದ್ರೆ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾಕ್ಕಿಂತಲೂ ಹೆಚ್ಚು ಫೇವರ್ ಆಗಿದೆ ಅಂತಾನೆ ಹೇಳಬಹುದು. ಯಾಕಂದ್ರೆ ಲೀಗ್​ ಸ್ಟೇಜ್​​ನ ಮೊದಲ ಎರಡು ಮ್ಯಾಚ್​ಗಳನ್ನ ಕೂಡ ಆಸ್ಟ್ರೇಲಿಯಾ ಸೋತಿತ್ತು. ಆದ್ರೆ ಅಲ್ಲಿಂದ ಬಳಿಕ ಫೀನಿಕ್ಸ್​ನಂತೆ ಮೇಲಕ್ಕೆದ್ದ ಆಸ್ಟ್ರೇಲಿಯಾ ಮತ್ತೆ ಹಿಂದೆ ತಿರುಗಿ ನೋಡಿಯೇ ಇಲ್ಲ. ಆಡಿರುವ ಎಲ್ಲಾ ಮ್ಯಾಚ್​​ಗಳನ್ನ ಕೂಡ ಗೆಲ್ಲುತ್ತಲೇ ಬಂದಿತ್ತು. ಆದ್ರಲ್ಲೂ ಅಫ್ಘಾನಿಸ್ತಾನ ವಿರುದ್ಧದ ಗೆಲುವಂತೂ ಆಸ್ಟ್ರೇಲಿಯಾ ತಂಡದ ಕಾನ್ಫಿಡೆನ್ಸ್​ನ್ನ ಮತ್ತೊಂದು ಲೆವೆಲ್​ಗೆ ತೆಗೆದುಕೊಂಡು ಹೋಗಿದೆ. ನಾಕ್​ಔಟ್ ಸ್ಟೇಜ್​ ಆಸ್ಟ್ರೇಲಿಯಾ ಬಂತು ಅಂದ್ರೆ ಮತ್ತೆ ಅವರನ್ನ ಮಣಿಸೋದು ಅಷ್ಟೊಂದು ಸುಲಭ ಅಲ್ಲ. ಆಸ್ಟ್ರೇಲಿಯಾ ಆಟೋಮೆಟಿಕಲಿ ವರ್ಲ್ಡ್​​ಕಪ್​ ಗೆಲ್ಲೋಕೆ ಫೇವರೇಟ್ ಟೀಂ ಎನ್ನಿಸಿಕೊಂಡು ಬಿಡುತ್ತೆ.

ಇನ್ನು ವರ್ಲ್ಡ್​​ಕಪ್​ ಇತಿಹಾಸದ ಪುಟ ತೆಗೆದು ನೋಡಿದ್ರೂ ಸೆಮಿಫೈನಲ್​​ನಲ್ಲಿ ಮುಖಾಮುಖಿಯಾದಾಗಲೆಲ್ಲಾ ಪ್ರತಿ ಬಾರಿಯೂ ದಕ್ಷಿಣ ಆಫ್ರಿಕಾವನ್ನ ಆಸ್ಟ್ರೇಲಿಯಾ ಸೋಲಿಸಿದೆ. ಸೌತ್​​ ಆಫ್ರಿಕಾವನ್ನ ಚೋಕರ್ಸ್​​ಗಳನ್ನಾಗಿ ಮಾಡಿರೋದ್ರಲ್ಲಿ ಆಸ್ಟ್ರೇಲಿಯಾದ ರೋಲ್​ ದೊಡ್ಡಿದಿದೆ. 1999ರ ವರ್ಲ್ಡ್​​ಕಪ್​​​ನಲ್ಲಿ ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನ ಆಸ್ಟ್ರೇಲಿಯಾ ಸೋಲಿಸಿತ್ತು. ಬಳಿಕ 2007ರ ವರ್ಲ್ಡ್​​ಕಪ್​​ನಲ್ಲಿ ಮ್ಯಾಚ್ ಟೈ ಆಗಿತ್ತು. ಆದ್ರೆ ರನ್​ರೇಟ್ ಆಧಾರದಲ್ಲಿ ಆಸ್ಟ್ರೇಲಿಯಾ ಫೈನಲ್​ಗೆ ಎಂಟ್ರಿಯಾಗಿತ್ತು. ಈಗ 3ನೇ ಬಾರಿಗೆ ವರ್ಲ್ಡ್​​ಕಪ್​​ ಸೆಮಿಫೈನಲ್​ನಲ್ಲಿ ಮದಗಜಗಳು ಮುಖಾಮುಖಿಯಾಗ್ತಿವೆ. ಹೀಗಾಗಿ ಮತ್ತೊಮ್ಮೆ ಆಸ್ಟ್ರೇಲಿಯಾವೇ ಗೆಲ್ಲುವ ಟ್ರೆಂಡ್ ಕಂಟಿನ್ಯೂ ಆಗುತ್ತಾ? ಇಲ್ಲಾ ಸೆಮಿಫೈನಲ್​​ ಸೋಲಿನ ಸರಪಳಿಯನ್ನ ಸೌತ್​ ಆಫ್ರಿಕನ್ಸ್ ಕಳಚಿಕೊಳ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಈ ಹಿಂದಿನ ವರ್ಲ್ಡ್​​ಕಪ್​ಗಳಲ್ಲಿ ಏನೇ ನಡೆದಿರಬಹುದು. ಆದ್ರೆ ಈ ವಿಶ್ವಕಪ್​​ನಲ್ಲಿ ಲೀಗ್ ಸ್ಟೇಜ್​​ನಲ್ಲಿ ಇದೇ ಆಸ್ಟ್ರೇಲಿಯಾವನ್ನ ದಕ್ಷಿಣ ಆಫ್ರಿಕಾ ಸೋಲಿಸಿತ್ತು. 134 ರನ್​ಗಳ ಅಂತರದಿಂದ ಆಸ್ಟ್ರೇಲಿಯಾ ವಿರುದ್ಧ ಸೌತ್​ ಆಫ್ರಿಕಾ ಗೆಲುವು ದಾಖಲಿಸಿತ್ತು. ಹೀಗಾಗಿ ಕೊಲ್ಕತ್ತಾದಲ್ಲಿ ನಡೆಯೋ ಬ್ಲಾಕ್​ಬಾಸ್ಟರ್​ ಸೆಮಿಫೈನಲ್​ ಮ್ಯಾಚ್​ನಲ್ಲಿ ಏನು ಬೇಕಾದ್ರೂ ಆಗಬಹುದು. ಇನ್ನು ಎರಡೂ ಟೀಂಗಳು ಪರಸ್ಪರ ಎದುರಾದಾಗ ವಂಡೇನಲ್ಲಿ ಒಟ್ಟು ಎಷ್ಟು ಮ್ಯಾಚ್​ಗಳನ್ನ ಗೆದ್ದಿವೆ? ವರ್ಲ್ಡ್​​ಕಪ್​​ನಲ್ಲಿ ಹೆಚ್ಚು ಪಂದ್ಯಗಳನ್ನ ಗೆದ್ದಿರೋದು ಯಾರು? ಇವೆಲ್ಲದರ ಬಗ್ಗೆ ಒಂದಷ್ಟು ಡೇಟಾಗಳನ್ನ ನಿಮ್ ಮುಂದೆ ಇಡ್ತೀನಿ.

  • ODIನಲ್ಲಿ ದ.ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ 50 ಪಂದ್ಯಗಳನ್ನ ಗೆದ್ದಿದೆ
  • ​ODIನಲ್ಲಿ ಆಸ್ಟ್ರೇಲಿಯಾ ವಿರುದ್ಧ ದ.ಆಫ್ರಿಕಾ 55 ಪಂದ್ಯಗಳನ್ನ ಗೆದ್ದಿದೆ
  • ಕಳೆದ 10 ವರ್ಷಗಳಲ್ಲಿ ಆಸ್ಟ್ರೇಲಿಯಾ 9 ಬಾರಿ, ದ.ಆಫ್ರಿಕಾ 19 ಬಾರಿ ಗೆದ್ದಿದೆ
  • ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ 3, ದ.ಆಫ್ರಿಕಾ 3 ಗೆಲುವು, 1 ಮ್ಯಾಚ್ ಟೈ
  • ಕಳೆದ 11 ವಂಡೇ ಮ್ಯಾಚ್​​ಗಳಲ್ಲಿ 9 ಪಂದ್ಯಗಳಲ್ಲಿ ದ.ಆಫ್ರಿಕಾ ಗೆಲುವು
  • ಕಳೆದ 4 ಮ್ಯಾಚ್​ಗಳಲ್ಲಿ ನಿರಂತರವಾಗಿ ಆಸ್ಟ್ರೇಲಿಯಾವನ್ನ ಸೋಲಿಸಿದೆ

ಈ ಎಲ್ಲಾ ಡೇಟಾಗಳನ್ನ ನೋಡಿದ್ರೆ ಈಗಿನ ಸೌತ್​ ಆಫ್ರಿಕಾ ಟೀಂ ಆಸ್ಟ್ರೇಲಿಯಾ ವಿರುದ್ಧ ಟಾಪ್​​ ಕ್ಲಾಸ್ ಪರ್ಫಾಮೆನ್ಸ್ ನೀಡಿದೆ. ಇತ್ತೀಚಿನ ಪರ್ಫಾಮೆನ್ಸ್​ ಪ್ರಕಾರ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಫೇವರೇಟ್ ಅಂತಾನೂ ಹೇಳಬಹುದು. ಆದ್ರೆ, ಆಸ್ಟ್ರೇಲಿಯಾ ಟೀಂನದ್ದು ಒಂದು ಸಂಗತಿ ಇದೆ. ಬೇರೆಲ್ಲಾ ಸೀರಿಸ್​ಗಳಲ್ಲಿ ಸೋತ್ರೂ ವರ್ಲ್ಡ್​ಕಪ್ ಅಂತಾ ಬಂದಾಗ ಆಸ್ಟ್ರೇಲಿಯನ್ಸ್ ಬಿಟ್ಟು ಕೊಡೋದೆ ಇದೆ. ಲಾಸ್ಟ್ ಬಾಲ್​ವರೆಗೂ ಫೈಟ್ ಮಾಡ್ತಾರೆ. ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಯಾವಾಗಲೂ ಕಂಪ್ಲೀಟ್ ಡಿಫರೆಂಟ್ ಟೀಂ ಆಗಿ ಕಾಣಿಸಿಕೊಳ್ಳುತ್ತೆ.

ಹಾಗಿದ್ರೆ ಆಸ್ಟ್ರೇಲಿಯಾ ಮತ್ತು ಸೌತ್​ ಆಫ್ರಿಕಾ ನಡುವೆ ಸೆಮಿಫೈನಲ್ ಮ್ಯಾಚ್​ ನಡೆಯೋ ಕೊಲ್ಕತ್ತಾದ ಈಡನ್​ ಗಾರ್ಡನ್ಸ್​ ಪಿಚ್ ಹೇಗಿದೆ ಅನ್ನೋದು ಕೂಡ ಇಲ್ಲಿ ಇಂಪಾರ್ಟೆಂಟ್. ಇಲ್ಲಿ ಟಾಸ್​ ಮ್ಯಾಟರ್​ ಆಗುತ್ತೆ. ಟಾಸ್ ಗೆದ್ದವರು ಫಸ್ಟ್​ ಬ್ಯಾಟಿಂಗ್​ ಮಾಡೋದು ಆಲ್​ಮೋಸ್ಟ್ ಗ್ಯಾರಂಟಿ. ಯಾಕಂದ್ರೆ ಈ ಗ್ರೌಂಡ್​​ನಲ್ಲಾಗಿರುವ ಕಳೆದ 13 ಮ್ಯಾಚ್​​ಗಳಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ 10 ಬಾರಿ ಪಂದ್ಯವನ್ನ ಗೆದ್ದಿದೆ. ಇನ್ನು ಇದು ಬ್ಯಾಟ್ಸ್​ಮನ್​ಗಳಿಗೆ ಫೇವರ್ ಆಗಿರುವ ಪಿಚ್ ಆಗಿದ್ದು, ಹೈಸ್ಕೋರ್​ ಮಾಡಬಹುದು. ಸ್ಪಿನ್ನರ್ಸ್​ಗಳಿಗೂ ಒಂದಷ್ಟು ಹೆಲ್ಪ್ ಆಗುವ ಸಾಧ್ಯತೆ ಇದೆ.

ಆದ್ರೆ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಮಧ್ಯೆ ಸೇಫ್ ಆಗಿ ಸೆಮಿಫೈನಲ್ ಮ್ಯಾಚ್​​ ನಡೆಯುತ್ತೆ ಅನ್ನೋದೆ ಗ್ಯಾರಂಟಿ ಇಲ್ಲ. ಯಾಕಂದ್ರೆ ಕಳೆದ ಕೆಲ ದಿನಗಳಿಂದ ಕೊಲ್ಕತ್ತಾದಲ್ಲಿ ಯಾವಾಗಲೂ ಮಳೆಯಾಗ್ತಿದೆ. ಸೌತ್​ ಆಫ್ರಿಕಾ-ಆಸ್ಟ್ರೇಲಿಯಾ ಸೆಮಿಫೈನಲ್ ದಿನದಂದು ಕೂಡ ಮಳೆಯಾಗಬಹುದು ಅಂತಾ ಹವಾಮಾನ ವರದಿ ಬಂದಿದೆ. ಒಂದು ವೇಳೆ ಮಳೆ ಬಂದ್ರೆ ರಿಸರ್ವ್ ಡೇನಂದು ಅಂದ್ರೆ ನವೆಂಬರ್ 17ಕ್ಕೆ ಮ್ಯಾಚ್​ ನಡೆಯುತ್ತೆ. ಆ ದಿನವೂ ಬಳೆ ಬಂದು ಮ್ಯಾಚ್ ಕ್ಯಾನ್ಸಲ್ ಆದ್ರೆ ದಕ್ಷಿಣ ಆಫ್ರಿಕಾ ಫೈನಲ್​ಗೆ ಎಂಟ್ರಿಯಾಗುತ್ತೆ. ಯಾಕಂದ್ರೆ ಪಾಯಿಂಟ್ಸ್​​ ಟೇಬಲ್​​​ನಲ್ಲಿ ಸೌತ್​ ಆಫ್ರಿಕಾ 2ನೇ ಸ್ಥಾನದಲ್ಲಿದೆ. ರನ್​​ರೇಟ್​​ನಲ್ಲೂ ಆಸ್ಟ್ರೇಲಿಯಾಕ್ಕಿಂತ ಮುಂದಿದೆ. ವರ್ಲ್ಡ್​​ಕಪ್​ನಲ್ಲಿ ಯಾವತ್ತೂ ಲಕ್​ ಅನ್ನೋದು ದಕ್ಷಿಣ ಆಫ್ರಿಕಾ ಟೀಂಗೆ ಸಾಥ್ ಕೊಟ್ಟೇ ಇಲ್ಲ. ಈ ಬಾರಿ ಏನಾಗುತ್ತೋ ನೋಡಬೇಕು.

ಅಂತೂ ಆಸ್ಟ್ರೇಲಿಯಾ VS ಸೌತ್ ಆಫ್ರಿಕಾ ನಡುವಿನ ಸೆಕೆಂಡ್ ಸೆಮಿಫೈನಲ್​​ ಅತ್ಯಂತ ಹೈವೋಲ್ಟೇಜ್​ ಮ್ಯಾಚ್​ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಗೆದ್ದವರು ನವೆಂಬರ್​ 19ರಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ವರ್ಲ್ಡ್​​ಕಪ್​​ಗಾಗಿ ಹೋರಾಡಲಿದ್ದಾರೆ.

Sulekha