ಬ್ಯಾಟಿಂಗ್ ನಲ್ಲಿ ಭಾರತದ ಟಾಪ್ ಆರ್ಡರ್ ಮತ್ತೆ ಫೇಲ್ಯೂರ್! - ಆಲ್ ರೌಂಡರ್ಸ್‌ನಿಂದಲೂ ನಿರಾಸೆಯ ಆಟ!

4 ರನ್ಗಳ ಮುನ್ನಡೆಯೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ಭಾರತದ ಆಟಗಾರರದ್ದು ಅದೇ ರಾಗ ಅದೇ ಹಾಡು. ಕೆಎಲ್ ರಾಹುಲ್ ಮತ್ತು ಯಶಸ್ವಿ ಓಪನರ್ಸ್ ಆಗಿ ಕಣಕ್ಕಿಳಿದು ಉತ್ತಮ ಜೊತೆಯಾಟದ ನಿರೀಕ್ಷೆ ಮೂಡಿಸಿದ್ರು. ಆದ್ರೆ ರಾಹುಲ್ 13 ರನ್ ಗಳಿಸಿದ್ದಾಗಲೇ ಸ್ಕಾಟ್ ಬೊಲ್ಯಾಂಡ್ ಗೆ ಕ್ಲೀನ್ ಬೌಲ್ಡ್ ಆದ್ರು. ಆನಂತ್ರ ಬಂದ ಶುಭ್ಮನ್ ಕೂಡ ಅದೇ ರಾಗ. 13 ರನ್ ಗಳಿಸುವಷ್ಟ್ರಲ್ಲೇ ಸುಸ್ತಾದ್ರು. ಜೈಸ್ವಾಲ್ದೂ ಅದೇ ಕಥೆ. 22 ರನ್ ಬಾರಿಸಿದ್ದೇ ಹೆಚ್ಚು.
ಇದನ್ನೂ ಓದಿ: ಭಾರತ 141 ರನ್.. 6 ವಿಕೆಟ್! – ಗೆಲ್ಲಿಸೋಕೆ ಬೌಲರ್ ಗಳೇ ಬೇಕಾ?
9 ಇನ್ನಿಂಗ್ಸ್.. 1 ಸಲ ನಾಟ್ ಔಟ್.. 8 ಬಾರಿ ಒಂದೇ ರೀತಿ ಔಟ್!
ಇನ್ನು ವಿರಾಟ್ ಕೊಹ್ಲಿ ಬಗ್ಗೆಯಂತು ಹೇಳೋದೇ ಬೇಡ. ಇಡೀ ಸರಣಿಯಲ್ಲಿ ಒಂದೇ ರೀತಿಯಲ್ಲೇ ಔಟಾಗ್ತಿದ್ರು ಎಚ್ಚೆತ್ತುಕೊಳ್ತಿಲ್ಲ. ಟೀಂ ಇಂಡಿಯಾದ ಈ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನದೊಂದಿಗೆ ತಮ್ಮ ಆಸ್ಟ್ರೇಲಿಯಾ ಪ್ರವಾಸವನ್ನು ಅಂತ್ಯಗೊಳಿಸಿದ್ದಾರೆ. 12 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ವಿಪರ್ಯಾಸ ಅಂದ್ರೆ ಇಂದಿನ ಪಂದ್ಯದಲ್ಲಿ ಮತ್ತೊಮ್ಮೆ ಔಟ್ಸೈಟ್ ಆಫ್ ಸ್ಟಂಪ್ ಎಸೆತಕ್ಕೆ ಕ್ಯಾಚ್ ನೀಡಿ ಔಟ್ ಆದರು. ಈ ಸರಣಿಯಲ್ಲಿ ಕೊಹ್ಲಿ ಒಟ್ಟು 9 ಇನ್ನಿಂಗ್ಸ್ ಆಡಿದ್ದು, 8 ಬಾರಿ ಇದೇ ರೀತಿ ಔಟಾಗಿದ್ದಾರೆ. ಒಂದು ಇನ್ನಿಂಗ್ಸ್ನಲ್ಲಿ ಅಜೇಯ ಶತಕ ಸಿಡಿಸಿದರೆ, ಮತ್ತೊಂದರಲ್ಲಿ ಬ್ಯಾಟಿಂಗ್ ಸಿಕ್ಕಿರಲಿಲ್ಲ. 9 ಇನ್ನಿಂಗ್ಸ್ಗಳಲ್ಲಿ 23ರ ಸರಾಸರಿಯಲ್ಲಿ 190 ರನ್ಗಳಿಸಿದ್ದಾರೆ.
ಅಗ್ರೆಸ್ಸಿವ್ ಆಗಿ ಆಡಿ ವಿಕೆಟ್ ಒಪ್ಪಿಸಿದ ಪಂತ್!
ರಿಷಭ್ ಪಂತ್ ಒಳ್ಳೆಯ ಆಟಗಾರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇವತ್ತಿನ ಪಂದ್ಯದಲ್ಲಂತೂ ಟಿ-20 ಪಂದ್ಯದಂತೆ ಹೊಡಿಬಡಿ ಆಟವಾಡಿದ್ರು. ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸುವ ಮೂಲಕ ರನ್ ಖಾತೆ ತೆರೆದ ಪಂತ್ ಆಸ್ಟ್ರೇಲಿಯಾ ಬೌಲರ್ಗಳ ಬೆಂಡೆತ್ತಲಾರಂಭಿಸಿದರು. ನೋಡೋರಿಗಂತೂ ಫುಲ್ ಮಜಾ. ಬಟ್ 80 ರನ್ ಗಳಿಗೆ ನಾಲ್ಕು ವಿಕೆಟ್ ಬಿದ್ದಿದ್ದಾಗ ತಾಳ್ಮೆಯಿಂದ ಆಡ್ಬೇಕಾಗಿತ್ತು. 33 ಎಸೆತಗಳಲ್ಲೇ 61 ರನ್ ಚಚ್ಚಿದ್ರು. ಸೋ ಅವ್ರ ಕಡೆಯ ಸ್ಕೋರ್ನ ಅವ್ರು ಕೊಟ್ಟಿದ್ದಾರೆ. ಅದು ಇಲ್ಲಾ ಅಂತಾ ಹೇಳ್ತಿಲ್ಲ. ಇನ್ನೂ ಸ್ವಲ್ಪ ನಿಧಾನ ಆಡಿ ಇನ್ನೊಂದಷ್ಟು ಸ್ಕೋರ್ ಮಾಡ್ಬೋದಿತ್ತು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಎರಡು ಬಾರಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ರಿಷಭ್ ಪಂತ್ ಪಾಲಾಗಿದೆ.
ಆಲ್ ರೌಂಡರ್ಸ್ ಕಡೆಯಿಂದಲೂ ನಿರಾಸೆಯ ಆಟ!
ಇನ್ನು ಮಿಡಲ್ ಆರ್ಡರ್ ನಲ್ಲಿ ತಂಡಕ್ಕೆ ಆಸರೆಯಾಗ್ಬೇಕಿದ್ದ ಆಲ್ ರೌಂಡರ್ಸ್ ಕೂಡ ಬೇಗ ಬೇಗ ವಿಕೆಟ್ ಒಪ್ಪಿಸಿ ಹೋದ್ರು. ಮೊನ್ನೆ ಮ್ಯಾಚ್ ನಲ್ಲಿ ಸೆಂಚುರಿ ಹೊಡೆದಯ ಭರವಸೆ ಮೂಡಿಸಿದ್ದ ನಿತೀಶ್ ಕುಮಾರ್ ರೆಡ್ಡಿ ಕಳೆದ ಪಂದ್ಯದಲ್ಲಿ ಡಕ್ ಔಟ್ ಆಗಿದ್ರು. ಇನ್ನು ಇವತ್ತಿನ ಮ್ಯಾಚಲ್ಲಿ 4 ರನ್ ಗಳಿಗೆ ಸುಸ್ತಾದ್ರು. ಸದ್ಯ ರವೀಂದ್ರ ಜಡೇಜಾ ಮತ್ತು ವಾಶಿಂಗ್ಟನ್ ಸುಂದರ್ ಕ್ರೀಸ್ನಲ್ಲಿದ್ದಾರೆ. ಭಾರತ ಸೆಕೆಂಡ್ ಇನ್ನಿಂಗ್ಸ್ ನಲ್ಲಿ 141ಕ್ಕೆ 6 ವಿಕೆಟ್ ನಷ್ಟ ಅನುಭವಿಸಿದೆ. ಸೋ ಎರಡನೇ ದಿನದಾಟ ಮುಕ್ತಾಯಗೊಂಡಿದ್ಡು, ಭಾನುವಾರ ಮೂರನೇ ದಿನದಾಟದ ಪಂದ್ಯ ಆರಂಭವಾಗಲಿದೆ. ಕ್ರೀಸ್ನಲ್ಲಿರುವ ಜಡೇಜಾ ಮತ್ತು ಸುಂದರ್ ಬ್ಯಾಟಿಂಗ್ ಆರಂಭಿಸಲಿದ್ದಾರೆ. ಒಟ್ನಲ್ಲಿ 250+ ರನ್ ಸ್ಕೋರ್ ಮಾಡಿದ್ರೂ ಸಿಡ್ನಿ ಪಿಚ್ನಲ್ಲಿ ಭಾರತಕ್ಕೆ ಗೆಲ್ಲೋ ಅವಕಾಶ ಇದೆ. ಆದ್ರೆ ಟಾಪ್ ಆರ್ಡರ್ ಬ್ಯಾಟರ್ಸ್ ಎಲ್ರೂ ಔಟ್ ಆಗಿದರೋದ್ರಿಂ 180 ಸ್ಕೋರ್ ಮಾಡೋದೂ ಕಷ್ಟ ಇದೆ. ಅಲ್ದೇ ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದು ಬೌಲಿಂಗ್ಗೆ ಮರಳದೇ ಇದ್ರೆ ಗೆಲುವು ಕಷ್ಟಸಾಧ್ಯ.