ದಾಖಲೆ ಬರೆದ ನಿತೀಶ್ ಕುಮಾರ್ ರೆಡ್ಡಿ!  – ಟೀಮ್‌ ಇಂಡಿಯಾದಲ್ಲಿ ಯುವ ಆಟಗಾರರಿಗೆ ಇನ್ನಾದ್ರೂ ಚಾನ್ಸ್‌ ಸಿಗುತ್ತಾ?

ದಾಖಲೆ ಬರೆದ ನಿತೀಶ್ ಕುಮಾರ್ ರೆಡ್ಡಿ!  – ಟೀಮ್‌ ಇಂಡಿಯಾದಲ್ಲಿ ಯುವ ಆಟಗಾರರಿಗೆ ಇನ್ನಾದ್ರೂ ಚಾನ್ಸ್‌ ಸಿಗುತ್ತಾ?

ಸೆಂಚುರಿ ಮೂಲಕ ನಿತೀಶ್ ಕುಮಾರ್ ರೆಡ್ಡಿ ದಾಖಲೆ ಕೂಡ ಬರೆದಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್​ ಮೈದಾನದಲ್ಲಿ 4 ವರ್ಷಗಳ ಬಳಿಕ ಶತಕ ಸಿಡಿಸಿದ ಭಾರತೀಯ ಬ್ಯಾಟರ್​ ಆಗಿ ನಿತೀಶ್​ ದಾಖಲೆ ಬರೆದಿದ್ದಾರೆ. ಈ ಹಿಂದೆ 2020ರಲ್ಲಿ ಅಜಿಂಕ್ಯಾ ರಹಾನೆ ಮೆಲ್ಬೋರ್ನ್​ನಲ್ಲಿ ಶತಕ ಸಿಡಿಸಿದ್ದರು. ಇದಲ್ಲದೇ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದು ಹೈಸ್ಕೋರ್​ ಗಳಿಸಿದ ಭಾರತದ ಬ್ಯಾಟರ್​ ಆಗಿ ಅನಿಲ್​ ಕುಂಬ್ಳೆ ದಾಖಲೆ ಮುರಿದಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಅನಿಲ್​ ಕುಂಬ್ಳೆ ಅಡಿಲೇಡ್​ ಮೈದಾನದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಿ 87 ರನ್​ ಕಲೆಹಾಕಿದ್ದರು.

ಇದನ್ನೂ ಓದಿ: ಗರ್ಭಿಣಿ ತುಳಸಿಗೆ ಹೊಟ್ಟೆ ಬಂದಿಲ್ವಾ? – ಪ್ರೆಗ್ನೆಂಟ್‌‌ ಡ್ರಾಮಾ ಬೇಕಿತ್ತಾ?

ಆಫ್ ಸೆಂಚುರಿ ಸಿಡಿಸಿ ಆಸರೆಯಾದ ಸುಂದರ್!

ಇನ್ನು ಟೀಂ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ ಕೂಡ ಜವಾಬ್ದಾರಿಯುತ ಆಟವಾಡಿದ್ರು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ರೆಡ್ಡಿಗೆ ಉತ್ತಮ ಸಾಥ್ ನೀಡಿದ್ರು. ತುಂಬಾ ಪೇಷನ್ಸ್ ಇಂದ ಬ್ಯಾಟ್ ಬೀಸಿ ಆಫ್ ಸೆಂಚುರಿ ಕೂಡ ಕಂಪ್ಲೀಟ್ ಮಾಡಿದ್ರು.

ಸದ್ಯ ಮಳೆ ಕಾರಣದಿಂದ ಇಂದಿನ ಪಂದ್ಯವನ್ನ ಕ್ಯಾನ್ಸಲ್ ಮಾಡಲಾಗಿದೆ. 9 ವಿಕೆಟ್ ನಷ್ಟಕ್ಕೆ ಭಾರತ 358 ರನ್ ಕಲೆ ಹಾಕಿದೆ. ನಿತೀಶ್ ರೆಡ್ಡಿ 105 ರನ್ ಗಳಿಸಿದ್ರೆ ಸಿರಾಜ್ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಸೋ ನಾಲ್ಕನೇ ದಿನದಾಟದಲ್ಲಿ ರೆಡ್ಡಿ ಮತ್ತು ಸಿರಾಜ್ ಮತ್ತೆ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಸೋ ಇವತ್ತಿನ ಪಂದ್ಯ ನೋಡಿದ್ಮೇಲೆ ಒಂದಂತೂ ಕ್ಲಿಯರ್ ಆಗಿದೆ. ಟೀಂ ಇಂಡಿಯಾದಲ್ಲಿ ಒಂದಷ್ಟು ಮೇಜರ್ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಇದೆ ಅನ್ಸುತ್ತೆ. ಕಾಲಕ್ಕೆ ತಕ್ಕಂತೆ ಒಂದಷ್ಟು ಚೇಂಜಸ್ ಕೂಡ ಮಾಡಿಕೊಳ್ಳಬೇಕಾಗುತ್ತೆ. ಹಿರಿಯ ಆಟಗಾರರು ಅಂತಾ ಕಳಪೆ ಪ್ರದರ್ಶನ ನೀಡಿದ್ರೂ ಅವಕಾಶ ಕೊಡೋ ಬದ್ಲು ಯುವಆಟಗಾರರ ಆಯ್ಕೆಯತ್ತ ಬಿಸಿಸಿಐ ಚಿಂತಿಸಬೇಕಿದೆ. ಇಲ್ದೇ ಇದ್ರೆ ಸೋಲಿನ ಮುಖಭಂಗ ಮತ್ತೆ ತಪ್ಪಿದ್ದಲ್ಲ.

Shwetha M