ಮಾನ ಉಳಿಸಿದ ರೆಡ್ಡಿ-ಸುಂದರ್! – ಬಾಲಂಗೋಚಿಗಳೇ ಭಾರತದ ಶಕ್ತಿ!
RO-KO ಚಪ್ಪಾಳೆ ತಟ್ಟೋಕಷ್ಟೇನಾ?

ಮಾನ ಉಳಿಸಿದ ರೆಡ್ಡಿ-ಸುಂದರ್! – ಬಾಲಂಗೋಚಿಗಳೇ ಭಾರತದ ಶಕ್ತಿ!RO-KO ಚಪ್ಪಾಳೆ ತಟ್ಟೋಕಷ್ಟೇನಾ?

99 ರನ್ ಸಿಡಿಸಿದ್ದ ನಿತೀಶ್ ಕುಮಾರ್ ರೆಡ್ಡಿ.. ಒಂದ್ಕಡೆ ಜಸ್ಪ್ರೀತ್ ಬುಮ್ರಾ ವಿಕೆಟ್.. 10ನೇ ವಿಕೆಟ್​ಗೆ ಮೊಹಮ್ಮದ್ ಸಿರಾಜ್ ಎಂಟ್ರಿ. ಕೋಟಿ ಕೋಟಿ ಭಾರತೀಯರ ಪ್ರಾರ್ಥನೆ ಒಂದೇ ಆಗಿತ್ತು. ಸಿರಾಜ್ ಔಟ್ ಆಗ್ಬಾರ್ದು ನಿತೀಶ್ ಕುಮಾರ್ ರೆಡ್ಡಿ ಸೆಂಚುರಿ ಕಂಪ್ಲೀಟ್ ಮಾಡ್ಲಿ ಅನ್ನೋದು. ಕೊನೆಗೂ ಆ ಪ್ರಾರ್ಥನೆ ಫಲಿಸಿದೆ. ರೆಡ್ಡಿ ಫೋರ್ ಬಾರಿಸೋ ಮೂಲಕ ಸೆಂಚುರಿ ಸಿಡಿಸಿದ್ರು. ಕೋಟಿ ಕೋಟಿ ಭಾರತೀಯರು ನಿಟ್ಟುಸಿರು ಬಿಟ್ಟಿದ್ರು. ಫಾಲೋ ಆನ್ ಭೀತಿ ತಪ್ಪಿಸಿಕೊಂಡ ಭಾರತಕ್ಕೆ ಬೌಲರ್​ಗಳೇ ಆಸರೆಯಾಗ್ಬೇಕಾ? ಟಾಪ್ ಆರ್ಡರ್ ಬ್ಯಾಟರ್ಸ್ ಆಟಕ್ಕುಂಟು ಲೆಕ್ಕಕ್ಕಿಲ್ವಾ? ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಇಲ್ದಿದ್ರೆ ಏನಾಗ್ತಿತ್ತು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗರ್ಭಿಣಿ ತುಳಸಿಗೆ ಹೊಟ್ಟೆ ಬಂದಿಲ್ವಾ? – ಪ್ರೆಗ್ನೆಂಟ್‌‌ ಡ್ರಾಮಾ ಬೇಕಿತ್ತಾ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯ ಮೆಲ್ಬೊರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 474 ರನ್​ಗಳನ್ನ ಬಾರಿಸಿತ್ತು. ಇನ್ನಿಂಗ್ಸ್ ಆರಂಭಿಸಿದ್ದ ಭಾರತದ ಪರ ಯಶಸ್ವಿ ಜೈಸ್ವಾಲ್ ಒಬ್ರನ್ನ ಬಿಟ್ರೆ ಉಳಿದ ಯಾವ ಟಾಪ್ ಆರ್ಡರ್ ಬ್ಯಾಟರ್ ಕೂಡ ಕೈ ಹಿಡೀಲಿಲ್ಲ. ಅದ್ರಲ್ಲೂ ಸ್ಟಾರ್ ಬ್ಯಾಟರ್ಸ್ ಅಂತಾ ಕರೆಸಿಕೊಳ್ಳೋ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತದೇ ರಾಗ ಎನ್ನುವಂತೆ ಕಳಪೆ ಪ್ರದರ್ಶನ ನೀಡಿದ್ರು. ಬಟ್ ಈಗ ಭಾರತಕ್ಕೆ ಬಾಲಂಗೋಚಿಗಳೇ ನೆರವಾಗಿದ್ದಾರೆ. ಯಂಗ್ ಸ್ಟರ್ಸ್ ಗೆ ಯಾಕೆ ಚಾನ್ಸ್ ಕೊಡ್ಬೇಕು? ಸೀನಿಯರ್ಸ್ ಯಾಕೆ ನಿವೃತ್ತಿ ತಗೊಬೇಕು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಫಾಲೋ ಆನ್ ಭೀತಿ ತಪ್ಪಿಸಿದ ಸುಂದರ್ & ರೆಡ್ಡಿ!

ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಐದು ವಿಕೆಟ್ ಗಳನ್ನ ಕಳ್ಕೊಂಡು ಟಾಪ್ ಆರ್ಡರ್ ಬ್ಯಾಟರ್ ಗಳೆಲ್ಲಾ ಪೆವಿಲಿಯನ್ ಸೇರಿದ್ರು. ಭಾರತ 5 ವಿಕೆಟ್​ 164 ರನ್ ನೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾಗೆ ಆಘಾತ ಕಾದಿತ್ತು. ಮೂರನೇ ದಿನದಾಟದ ಆರಂಭದಲ್ಲಿ ಕ್ರೀಸ್​ ಕಾಯ್ದುಕೊಂಡಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್ ಆರಂಭಿಸಿದ್ರು. ಬಟ್ ಇವ್ರ ಆಟ ಹೆಚ್ಚು ಹೊತ್ತು ನಡೆಯಲೇ ಇಲ್ಲ. 28 ರನ್ ಗಳಿಸಿ ರಿಷಭ್ ಪಂತ್ ಔಟಾದ್ರೆ ಜಡೇಜಾ 17 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಪರಿಣಾಮ 221 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬ್ಯಾಟಿಂಗ್​ಗೆ ಬಂದ ನಿತೀಶ್​​ ರೆಡ್ಡಿ ಮತ್ತು ವಾಷಿಂಗ್ಟ್​ನ ಜೊತೆಗೂಡಿ ಆಸ್ಟ್ರೇಲಿಯನ್ನರ ವಿರುದ್ಧ ಕೆಚ್ಚೆದೆಯ ಪ್ರದರ್ಶನ ತೋರಿದರು. ತಂಡವನ್ನು ಫಾಲೋ ಆನ್​ ಭೀತಿಯಿಂದ ಪಾರುಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆಫ್ ಸೆಂಚುರಿ ಸಿಡಿಸಿ ಫುಷ್ಪ ಸ್ಟೈಲಲ್ಲಿ ಸಂಭ್ರಮಿಸಿದ ರೆಡ್ಡಿ! 

ಟೀಂ ಇಂಡಿಯಾದ ಯುವ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಆಫ್ ಸೆಂಚುರಿಯನ್ನ ಸ್ಪೆಷಲ್ಲಾಗಿ ಸೆಲೆಬ್ರೇಟ್ ಮಾಡಿದ್ರು. ಈ ಹಿಂದೆ 4 ಬಾರಿ ತಂಡಕ್ಕೆ ನೆರವಾಗಿದ್ದ ನಿತೀಶ್ ಅರ್ಧಶತಕ ಗಡಿಯಲ್ಲಿ ವಿಕೆಟ್​ ಒಪ್ಪಿಸಿದ್ದರು. ಇಂದೂ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಇಳಿದ ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾದ ವೇಗಿಗಳನ್ನ ಸಮರ್ಥವಾಗಿ ಎದುರಿಸಿದರು. ಕಳೆದ ಮೂರು ಟೆಸ್ಟ್‌ಗಳಲ್ಲಿ ನೀತೀಶ್​ 41, 38 ನಾಟೌಟ್, 42, 42 ಮತ್ತು 16 ರನ್‌ ಗಳಿಸಿದ್ದರು. ನಾಲ್ಕು ಬಾರಿ ಅರ್ಧ ಶತಕ ಗಳಿಸುವ ಅವಕಾಶ ಇದ್ದರೂ, ಸರಿಯಾದ ಜೊತೆಗಾರನಿಲ್ಲದ ಕಾರಣ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈಚೆಲ್ಲಿದ್ದರು. ಆದರೆ ಮೆಲ್ಬೋರ್ನ್​ನಲ್ಲಿ ಬೊಂಬಾಟ್ ಬ್ಯಾಟಿಂಗ್‌ನೊಂದಿಗೆ ಅಬ್ಬರಿಸಿದ್ರು. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ನಿತೀಶ್ ಕುಮಾರ್​ ಸ್ಫೋಟಿಕ ಬ್ಯಾಟಿಂಗ್ ಮಾಡಿ 81 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕ ಪೂರೈಸಿದ ಕೂಡಲೇ ನಿತೀಶ್ ಕುಮಾರ್ ರೆಡ್ಡಿ ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಟ್ರೇಡ್ ಮಾರ್ಕ್ ತಗ್ಗೋದೇ ಇಲ್ಲ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿ ಗಮನ ಸೆಳೆದರು.

8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದು ರೆಡ್ಡಿ ಸೆಂಚುರಿ!

ಮೆಲ್ಬೋರ್ನ್​ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ 171 ಎಸೆತಗಳಲ್ಲಿ ಚೊಚ್ಚಲ ಶತಕ ಪೂರೈಸಿದರು. 1 ಸಿಕ್ಸ್ ಹಾಗೂ 10 ಫೋರ್​​ಗಳೊಂದಿಗೆ ಸೆಂಚುರಿ ಬಾರಿಸಿದ್ರು. ನಿತೀಶ್ ಕುಮಾರ್ ರೆಡ್ಡಿ ಅವರ ಆಕರ್ಷಕ ಶತಕದ ನೆರವಿನಿಂದ ಟೀಮ್ ಇಂಡಿಯಾ 350+ ರನ್ ಗಳನ್ನ ಸ್ಕೋರ್ ಮಾಡಿತು.

Shwetha M

Leave a Reply

Your email address will not be published. Required fields are marked *