ಕಪ್ ಮೇಲೆ ಕಾಲಿಟ್ಟು ಕೆಟ್ಟ ಕಾಂಗರೂ – ಬಾಂಗ್ಲಾ ಎದುರೇ AUS ಧೂಳೀಪಟ
ಗರ್ವಭಂಗ.. ರೊಚ್ಚಿಗೆದ್ದ ದಿಗ್ಗಜರು!

ಕಪ್ ಮೇಲೆ ಕಾಲಿಟ್ಟು ಕೆಟ್ಟ ಕಾಂಗರೂ – ಬಾಂಗ್ಲಾ ಎದುರೇ AUS ಧೂಳೀಪಟಗರ್ವಭಂಗ.. ರೊಚ್ಚಿಗೆದ್ದ ದಿಗ್ಗಜರು!

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೈಯೆಸ್ಟ್ ವಿನ್ನಿಂಗ್ ಪರ್ಸೆಂಟೇಜ್.. ತವರಿನಲ್ಲಿ ಎಕ್ಸ್​​ಟ್ರಾರ್ಡಿನರಿ ರೆಕಾರ್ಡ್ಸ್.. ಡಬ್ಲ್ಯೂಟಿಸಿ ಪಟ್ಟಿಯಲ್ಲಿ ಅಟ್​ಪ್ರಸೆಂಟ್ ನಂಬರ್ 1 ಪ್ಲೇಸ್.. ಸೂಪರ್ ಸ್ಟಾರ್ ಪ್ಲೇಯರ್​ಗಳೇ ತುಂಬಿರೋ ಬೆಸ್ಟ್ ಟೀಂ.. ಹೀಗಿರೋ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶದ ವಿರುದ್ಧ ಹೀನಾಯ ಸೋಲು ಕಂಡಿದೆ. ಅದೂ ಕೂಡ ಹೋಂ ಗ್ರೌಂಡ್​ನಲ್ಲೇ ಅವಮಾನ ಅನುಭವಿಸಿದೆ. ಈ ಸೋಲಿನ ಸಿಟ್ಟು ಆಸೀಸ್​​ನಲ್ಲಿ ಸ್ಫೋಟಗೊಂಡಿದೆ.

ಇದನ್ನೂ ಓದಿ : 10 ಟೀಂ ಫೈನಲ್.. 4 ಸ್ಥಾನಕ್ಕೆ ರೇಸ್ – ಅರ್ಹತಾ ಟೂರ್ನಿಯಲ್ಲೇ ICC ಮೋಸ

ಕ್ರಿಕೆಟ್ ಲೋಕದಲ್ಲಿ ಸದ್ಯ ಆಸ್ಟ್ರೇಲಿಯಾದ ಸೋಲು ಹಲ್​ಚಲ್ ಎಬ್ಬಿಸಿದೆ. ಬಾಂಗ್ಲಾದೇಶದ ವಿರುದ್ಧ ತವರಿನಲ್ಲೇ ಹೀನಾಯವಾಗಿ ಶರಣಾಗಿರೋ ಕಾಂಗರೂಪಡೆ ಅವಮಾನಕ್ಕೊಳಗಾಗಿದೆ. ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾ ಒಂಬತ್ತು ವಿಕೆಟ್‌ಗಳಿಂದ ಗೆದ್ದಿದೆ. ಆಸ್ಟ್ರೇಲಿಯಾದ ಸೋಲು ತಂಡಕ್ಕಷ್ಟೇ ಅಲ್ಲ ನಾಯಕ ಪ್ಯಾಟ್ ಕಮ್ಮಿನ್ಸ್‌ಗೂ ತಮ್ಮ ಕೆರಿಯರ್​ನಲ್ಲೇ ಅತ್ಯಂತ ಹೀನಾಯ ಸೋಲಾಗಿದೆ. ಬೇಡದೇ ಇರೋ ದಾಖಲೆಯೂ ಅವ್ರ ಹೆಸ್ರಲ್ಲಿ ಕ್ರಿಯೇಟ್ ಆಗಿದೆ

ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಳ್ತಾರೆ. ಆದ್ರೆ ಬ್ಯಾಟಿಂಗ್​ನಲ್ಲಿ ಸ್ಟೀವ್ ಸ್ಮಿತ್ 71 ರನ್ಸ್ ಕಲೆಹಾಕಿದ್ದು ಬಿಟ್ರೆ ಬೇರೆ ಯಾವುದೇ ಬ್ಯಾಟರ್ 25ಕ್ಕಿಂತ ಹೆಚ್ಚಿನ ರನ್ಸ್ ಕಲೆ ಹಾಕಲಿಲ್ಲ. ಹೀಗಾಗಿ ಕೇವಲ 198 ರನ್‌ಗಳಿಗೆ ಆಲೌಟ್ ಆಗ್ಬೇಕಾಯ್ತು. ಆದ್ರೆ ಫಸ್ಟ್ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ ಬ್ಯಾಟಿಂಗ್​ನಲ್ಲಿ ಅಕ್ಷರಶಃ ಅಬ್ಬರಿಸಿ 426 ರನ್​ಗಳಿಸಿತು. ಈ ಮೂಲಕ 228 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದ್ರು. ಎರಡನೇ ಇನ್ನಿಂಗ್ಸ್​ನಲ್ಲೂ ಆಸ್ಟ್ರೇಲಿಯಾ 284 ರನ್​ಗಳಿಗೆ ಆಲೌಟ್ ಆಯ್ತು. ಬಾಂಗ್ಲಾಗೆ ಕೇವಲ 57 ರನ್‌ಗಳ ಗುರಿಯನ್ನು ನೀಡಿದ್ರು. 14.2 ಓವರ್‌ಗಳಲ್ಲೇ ಕೇವಲ ಒಂದು ವಿಕೆಟ್ ನಷ್ಟಕ್ಕೆ ರೀಚ್ ಆಗಿ ಬಾಂಗ್ಲಾ ಪಡೆ ಪಂದ್ಯ ಗೆಲ್ಲೋ ಮೂಲಕ ಕಾಂಗರೂಗಳ ಕಾಲು ಮುರಿದ್ರು. ಬಾಂಗ್ಲಾ ಪಾಲಿಗೆ ಇದು ಬರೀ ಗೆಲುವಲ್ಲ. ಐತಿಹಾಸಿಕ ಸಾಧನೆ. ಮತ್ತೊಂದ್ಕಡೆ ಆಸ್ಟ್ರೇಲಿಯಾಗೆ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸೋಲಾಗಿದೆ.

ಆಸ್ಟ್ರೇಲಿಯಾ ಧೂಳೀಪಟ!

ಆಸ್ಟ್ರೇಲಿಯಾದಲ್ಲಿ ವೇಗವಾಗಿ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ತಂಡ ಬಾಂಗ್ಲಾ

ಟೆಸ್ಟ್ ಕ್ರಿಕೆಟ್ ನಲ್ಲಿ ವಿಕೆಟ್ ಗಳ ಲೆಕ್ಕದಲ್ಲಿ ಬಾಂಗ್ಲಾಗೆ ಎರಡನೇ ಅತೀದೊಡ್ಡ ಗೆಲುವು

ಆಸ್ಟ್ರೇಲಿಯಾ ವಿರುದ್ಧ 7 ಟೆಸ್ಟ್ ಪಂದ್ಯ ಆಡಿದ್ದು ಇದು ಇತಿಹಾಸದಲ್ಲೇ 2ನೇ ಗೆಲುವು

ಡಾರ್ವಿನ್‌ ನಲ್ಲಿ ಟೆಸ್ಟ್ ಪಂದ್ಯ ಗೆದ್ದ ವಿಶ್ವದ ಮೊಟ್ಟಮೊದಲ ವಿದೇಶಿ ತಂಡ ಬಾಂಗ್ಲಾ

ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ ಬಾರಿಸಿದ ಬಾಂಗ್ಲಾದೇಶದ ತಂಝೀದ್ ಹಸನ್ ತಮೀಮ್

31 ವರ್ಷಗಳಿಂದ ಭಾರತ ಹೊರತುಪಡಿಸಿ ಏಷ್ಯಾದ ತಂಡಗಳ ಎದುರು ಸೋತಿರಲಿಲ್ಲ

198ಕ್ಕೆ ಆಲೌಟ್, ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾದ ಸಾರ್ವಕಾಲಿಕ ಕನಿಷ್ಠ ಸ್ಕೋರ್

2009ರ ಬಳಿಕ ತವರಿನಲ್ಲಿ ವಿಕೆಟ್ ಗಳ ಲೆಕ್ಕದಲ್ಲಿ ಆಸ್ಟ್ರೇಲಿಯಾಗೆ ಅತ್ಯಂತ ಕೆಟ್ಟ ಸೋಲು

ಹೀಗೆ ಬಾಂಗ್ಲಾ ವಿರುದ್ಧದ ಸೋಲು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ದಶಕಗಳಿಂದ ಕಟ್ಟಿದ್ದ ಭದ್ರಕೋಟೆಯ ಬುಡವೇ ಅಲುಗಾಡ್ತಿದೆ. ಇದು ಬರೀ ಸೋಲಲ್ಲ ಅವಮಾನ ಅಂತಾ ಆಸೀಸ್ ಮಾಜಿ ಕ್ರಿಕೆಟರ್ಸ್ ಕೂಡ ರೊಚ್ಚಿಗೆದ್ದಿದ್ದಾರೆ.

ಬಾಂಗ್ಲಾ ವಿರುದ್ಧದ ಸೋಲನ್ನು ಅವಮಾನ ಎಂದ ಮಾಜಿ ಕ್ರಿಕೆಟರ್ಸ್!

ಬಾಂಗ್ಲಾ ವಿರುದ್ಧದ ಹೀನಾಯ ಸೋಲನ್ನ ಅರಗಿಸಿಕೊಳ್ಳಲಾಗದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ಸ್ ತಮ್ಮ ತಂಡದ ವಿರುದ್ಧವೇ ಸಿಡಿದೆದ್ದಿದ್ದಾರೆ. ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್ ಸೇರಿದಂತೆ ದಿಗ್ಗಜರೇ ತಮ್ಮ ತಂಡದ ಪ್ರದರ್ಶನವನ್ನ ಟೀಕಿಸಿದ್ದಾರೆ. ಹಾಗೇ ಇಡೀ ಟೆಸ್ಟ್ ಟೀಮ್​ನೇ ಬದಲಾವಣೆ ಮಾಡಿ ಅಂತಾ ಆಗ್ರಹಿಸಿದ್ದಾರೆ. ಅಷ್ಟಕ್ಕೂ ಇಲ್ಲಿ ಮಾಜಿ ಪ್ಲೇಯರ್​ಗಳ ಸಿಟ್ಟಿಗೆ ಕಾರಣ ಆಸ್ಟ್ರೇಲಿಯಾ ಸೋತಿದ್ದಲ್ಲ. ಅದೂ ಕೂಡ ಬಾಂಗ್ಲಾ ವಿರುದ್ಧ ಸೋತ್ರಲ್ಲ ಅನ್ನೋದು. ತವರಿನಲ್ಲಿ ಈ ಹಿಂದೆ ತಾವು ಕಟ್ಟಿದ್ದಂತ ಅಜೇಯ ವಿಜಯ ಸಾಮ್ರಾಜ್ಯ ಪತನ ಆಯ್ತಲ್ಲ ಅನ್ನೋ ಸಿಟ್ಟಿನಿಂದ ಆಕ್ರೋಶ ಹೊರಹಾಕಿದ್ದಾರೆ. ಇದ್ರ ನಡುವೆ ಆಸ್ಟ್ರೇಲಿಯಾ ಆಟಗಾರರ ಅಹಂಕಾರವೇ ಇವತ್ತಿನ ದುಸ್ಥಿತಿಗೆ ಕಾರಣ ಅನ್ನೋ ಮಾತುಗಳೂ ಕೇಳಿ ಬರ್ತಿವೆ. 2023ರಲ್ಲಿ ನಡೆದಿದ್ದ ಆಸೀಸ್ ಆಟಗಾರರ ಉದ್ಧಟತನ ಮತ್ತೊಮ್ಮೆ ಸದ್ದು ಮಾಡಿದೆ.

2023ರ ವಿಶ್ವಕಪ್ ಗೆದ್ದು ಟ್ರೋಫಿ ಮೇಲೆ ಕಾಲಿಟ್ಟಿದ್ದೇ ಕೇಡು!

ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾದ ಪ್ರತೀ ಡೌನ್​ಫಾಲ್​ನಲ್ಲೂ ಸದ್ದು ಮಾಡೋದೇ 2023ರ ಏಕದಿನ ವಿಶ್ವಕಪ್ ಗೆದ್ದು ತೋರಿದ್ದ ದರ್ಪ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಚಾಂಪಿಯನ್ ಆದ ಬಳಿಕ, ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಫೋಟೋಗೆ ಪೋಸ್ ಕೊಟ್ಟಿದ್ರು. ಕ್ರಿಕೆಟ್ ಲೋಕದಲ್ಲಿ ಇದು ದೊಟ್ಟ ವಿವಾದವಾಗಿತ್ತು. ಬ್ಯಾಡ್​ಲಕ್ ಅಂದ್ರೆ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೂಡ ಇದನ್ನ ಸಮರ್ಥನೆ ಮಾಡ್ಕೊಂಡಿದ್ರು. ಮಾರ್ಷ್ ಮಾಡಿದ್ರಲ್ಲಿ ತಪ್ಪೇನು ಅಂತಾ ಉದ್ಧಟತನ ತೋರಿದ್ರು. ಆದ್ರೆ ಅಂದಿನಿಂದ ಈಚೆಗೆ ಆಸ್ಟ್ರೇಲಿಯಾ ಪಡ್ಕೊಂಡಿದ್ದಕ್ಕಿಂತ ಕಳ್ಕೊಂಡಿದ್ದೇ ಜಾಸ್ತಿ. 2024ರ ಟಿ-20 ವಿಶ್ವಕಪ್​ನಲ್ಲಿ ಸೂಪರ್ 8 ಹಂತದಲ್ಲೇ ಹೊರಬಿದ್ದಿದ್ರು. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್​ನಲ್ಲಿ ಭಾರತದ ಎದುರಲ್ಲೇ ಸೋತು ಹೊರಬಿದ್ದಿದ್ರು. 2025ರ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೋತು ಟ್ರೋಫಿ ಮಿಸ್ ಮಾಡಿಕೊಂಡಿದ್ರು. 2026ರ ಟಿ-20 ವಿಶ್ವಕಪ್​ನಲ್ಲಂತೂ ಮೊದಲ ಸುತ್ತಿನಲ್ಲೇ ಗೇಟ್​ಪಾಸ್ ತಗೊಂಡಿದ್ರು. ಅಷ್ಟೇ ಅಲ್ಲ ಸರಣಿಗಳಲ್ಲೂ ಹೀನಾಯ ಸೋಲುಗಳನ್ನ ಕಂಡಿದ್ದಾರೆ. ಆಸ್ಟ್ರೇಲಿಯಾ ಪ್ರತೀ ಸಲ ಜಾರಿ ಬಿದ್ದಾಗ್ಲೂ ಕರ್ಮ ರಿಟರ್ನ್ಸ್ ಅನ್ನೋ ಹ್ಯಾಷ್​ಟ್ಯಾಗ್​ನಲ್ಲಿ ಟ್ರೋಲ್ ಮಾಡಲಾಗುತ್ತೆ. ಈಗ ಬಾಂಗ್ಲಾ ವಿರುದ್ಧ ಸೋತ ಮೇಲೂ ಕಪ್ ಮೇಲೆ ಕಾಲಿಟ್ಟಿದ್ದರಿಂದಲೇ ಕೇಡುಗಾಲ ಬಂದಿದ್ದು ಅನ್ನೋ ಮಾತುಗಳು ಕೇಳಿ ಬರ್ತಿವೆ. ಒಟ್ನಲ್ಲಿ ಕ್ರಿಕೆಟ್ ಲೋಕದಲ್ಲಿ ಬಲಿಷ್ಠ ತಂಡವಾಗಿ ಎದುರಾಳಿಗಳನ್ನ ತೀರಾ ಕೆಳಮಟ್ಟದಲ್ಲಿ ಕಾಣ್ತಿದ್ದ ಆಸೀಸ್ ನಾಡಿನ ಆಟಗಾರರ ಸೊಕ್ಕು ದಿನೇ ದಿನೇ ಕಮ್ಮಿಯಾಗ್ತಿದೆ. ಹೀನಾಯ ಸೋಲುಗಳು ಅವ್ರ ಗರ್ವಭಂಗ ಮಾಡ್ತಿದೆ. ಇದೀಗ ಬಾಂಗ್ಲಾದೇಶ ಅವ್ರದ್ದೇ ಮಣ್ಣಿನಲ್ಲಿ ಮೊದಲ ಪಂದ್ಯ ಗೆದ್ದು 2 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಡ್ರಾ ಮಾಡಿಕೊಂಡರೂ ಆಸ್ಟ್ರೇಲಿಯಾ ನೆಲದಲ್ಲಿ ಮೊಟ್ಟಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಮತ್ತೊಂದು ಇತಿಹಾಸ ನಿರ್ಮಿಸಲಿದೆ.

Shantha Kumari

Leave a Reply

Your email address will not be published. Required fields are marked *