AUS ವಿಶ್ವಕಪ್ ಕಹಳೆ – ಭಾರತಕ್ಕೆ ಸಿಕ್ಕೇ ಇಲ್ಲ ಪರ್ಫೆಕ್ಟ್ ಟೀಂ 
RO-KO, KL, ಗಿಲ್ ಮಾತ್ರ ಫೈನಲ್

AUS ವಿಶ್ವಕಪ್ ಕಹಳೆ – ಭಾರತಕ್ಕೆ ಸಿಕ್ಕೇ ಇಲ್ಲ ಪರ್ಫೆಕ್ಟ್ ಟೀಂ RO-KO, KL, ಗಿಲ್ ಮಾತ್ರ ಫೈನಲ್

ಕ್ರಿಕೆಟ್ ಲೋಕದ ಎಲ್ಲರ ಟಾರ್ಗೆಟ್​ 2027ರ ಏಕದಿನ ವಿಶ್ವಕಪ್. ಐಸಿಸಿಯ ಪ್ರತಿಷ್ಠಿತ ಟೂರ್ನಮೆಂಟ್​​ ಟ್ರೋಫಿ ಗೆಲ್ಲೋಕೆ ಈಗಿನಿಂದಲೇ ಪ್ರಿಪರೇಷನ್ಸ್ ಸ್ಟಾರ್ಟ್ ಆಗಿದೆ. ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ಅಂತೂ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಆದ್ರೆ ಭಾರತಕ್ಕೆ ಮಾತ್ರ ಈ ವಿಚಾರದಲ್ಲಿ ಇನ್ನೂ ಕ್ಲಿಯರ್ ಪಿಕ್ಚರ್​​ರೇ ಸಿಕ್ತಿಲ್ಲ.

ಇದನ್ನೂ ಓದಿ : ಭಾರತದ ಬೌಲಿಂಗ್ ಗೆ ಬೆಚ್ಚಿದ NZ – ಕೊಹ್ಲಿ SUPER MAN ಕ್ಯಾಚ್

2027ರ ಬಿಗ್ ಟೂರ್ನಮೆಂಟ್​ಗಳನ್ನೇ ಗುರಿಯಾಗಿಟ್ಟುಕೊಂಡು ಆಸ್ಟ್ರೇಲಿಯಾ ಮಹತ್ವದ ಹೆಜ್ಜೆ ಇಟ್ಟಿದೆ. ಮಾಜಿ ದಿಗ್ಗಜ ಬ್ಯಾಟರ್ ಮೈಕೆಲ್ ಹಸ್ಸಿ ಅವರನ್ನು ತಂಡದ ಕೋಚಿಂಗ್ ಕನ್ಸಲ್ಟೆಂಟ್ ಆಗಿ ನೇಮಕ ಮಾಡಿದೆ. 2027ರಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿ ಮತ್ತು ಏಕದಿನ ವಿಶ್ವಕಪ್‌ನಲ್ಲಿ ಹಸ್ಸಿ ಆಸ್ಟ್ರೇಲಿಯಾ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಅಷ್ಟೇ ಅಲ್ಲ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು ಟಿ20 ವಿಶ್ವಕಪ್‌ಗೂ ಟಿ20 ಸಲಹೆಗಾರರಾಗಿ ಕೆಲಸ ಮಾಡ್ತಾರೆ. Mr. Cricket ಎಂದೇ ಪ್ರಸಿದ್ಧರಾಗಿರುವ ಹಸ್ಸಿ, ಆಸ್ಟ್ರೇಲಿಯಾ ತಂಡದ ಕೋಚಿಂಗ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 51ಕ್ಕೂ ಹೆಚ್ಚು ಸರಾಸರಿ ಹೊಂದಿರುವ ಹಸ್ಸಿ, ಆಸ್ಟ್ರೇಲಿಯಾ ಪರ 79 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅವರ ಅಪಾರ ಅಂತಾರಾಷ್ಟ್ರೀಯ ಅನುಭವ ತಂಡಕ್ಕೆ ನೆರವಾಗಲಿದೆ ಎಂಬುದು ಕ್ರಿಕೆಟ್ ಆಸ್ಟ್ರೇಲಿಯಾದ ನಿರೀಕ್ಷೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಎಂಟು ವರ್ಷಗಳ ಕಾಲ ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಿದ ಅನುಭವವೂ ಹಸ್ಸಿಗಿದೆ. ಹೀಗೆ ಆಸೀಸ್ ಮಂಡಳಿ ಆಲ್ರೆಡಿ ಒಂದು ಸ್ಟೆಪ್ ಮುಂದೆ ಹೋಗಿದ್ರೆ ಭಾರತಕ್ಕೆ ಮಾತ್ರ ಕನ್ಫ್ಯೂಷನ್ಸ್ ತಪ್ಪಿಲ್ಲ.

ಟೀಂ ಇಂಡಿಯಾಗೆ ಫೈನಲ್ ಟೀಂ ರೆಡಿ ಮಾಡೋದೇ ಸವಾಲ್!

ಭಾರತ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಆಡ್ತಿದೆ. ಆದ್ರೆ 2027ರ ಏಕದಿನ ವಿಶ್ವಕಪ್​ಗೆ ತಂಡ ಹೇಗಿರಬೇಕು ಅನ್ನೋದಕ್ಕೆ ಇನ್ನೂ ಕ್ಲ್ಯಾರಿಟಿ ಸಿಕ್ತಿಲ್ಲ. ಬ್ಯಾಟಿಂಗ್​ನಲ್ಲಿ ಪರ್ಫೆಕ್ಟ್ ಅನ್ನಿಸ್ತಿದ್ರೂ ಬೌಲಿಂಗ್ ಕಷ್ಟ ಆಗೋ ಸಾಧ್ಯತೆಗಳಿದೆ.

ಭಾರತಕ್ಕೆ ಬೌಲಿಂಗ್ ಹೊರೆ!

ಹಾರ್ದಿಕ್ ಪಾಂಡ್ಯ ಇಂಜುರಿಯಿಂದ ಇನ್ನೂ ರಿಕವರ್ ಆಗದ ಸಮಸ್ಯೆ

ಜಸ್ಪ್ರೀತ್ ಬುಮ್ರಾ ಫಸ್ಟ್ ಚಾಯ್ಸ್ ಆಗಿದ್ರೂ ಸೀಮಿತ ಪಂದ್ಯಗಳಷ್ಟೇ ಆಟ

ಅನುಭವಿಗಳಾದ ಶಮಿ, ಭುವಿ ತಗೊಳ್ಳಲ್ಲ.. ಸಿರಾಜ್ ಗೆ ಅವಕಾಶ ಕೊಡಲ್ಲ

ಹೊಸಬರಿಗೆ ಅವಕಾಶ ಕೊಡಲು ಅನುಭವದ ಕೊರತೆ.. ಪ್ರೆಶರ್ ನಲ್ಲಿ ಕಷ್ಟ

ಅಕ್ಷರ್ ಪಟೇಲ್ ಆಯ್ಕೆ ಲಿಸ್ಟ್ ನಲ್ಲಿದ್ರೂ ಬ್ಯಾಟಿಂಗ್ & ಬೌಲಿಂಗ್ ಕಳಪೆ

ಹೀಗೆ ಭಾರತಕ್ಕೆ ಟಾಪ್ 5 ಬ್ಯಾಟರ್ಸ್ ಕನ್ಫರ್ಮ್ ಇದ್ರೂ ಆ ನಂತ್ರದ ಸ್ಲಾಟ್​ಗಳಿಗೆ ಯಾರನ್ನ ಪಿಕ್ ಮಾಡೋದು ಅನ್ನೋ ಡೌಟ್​ನಲ್ಳೇ ಇದ್ದಾರೆ. ಸದ್ಯಕ್ಕೆ ಅರ್ಷದೀಪ್ ಸಿಂಗ್ ಟಿ-20ಐನಲ್ಲೂ ಇಂಪ್ಯಾಕ್ಟ್ ಮಾಡ್ತಿರೋದ್ರಿಂದ ಏಕದಿನದಲ್ಲಿ ಅವ್ರನ್ನ ಪ್ರಿಫರ್ ಮಾಡ್ಬೋದು. ಸ್ಪಿನ್ನರ್ಸ್ ಅಂತಾ ಬಂದಾಗ ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಕಡೆ ನೋಡ್ತಾರೆ. ಬ್ಯಾಡ್​ಲಕ್ ಅಂದ್ರೆ ಅವ್ರನ್ನ ಆಡಿಸೋದೇ ದೊಡ್ಡ ವಿಷಯ ಆಗೋಗಿದೆ. ಬೆಂಚ್​ಗಷ್ಟೇ ಸೀಮಿತ ಆಗ್ತಿದ್ದಾರೆ. ಹೀಗಾಗಿ ಭಾರತ ಈ ಕನ್ಫ್ಯುಷನ್​ಗಳಿಗೆ ಯಾವಾಗ ಸಲ್ಯೂಷನ್ ಕಂಡುಕೊಳ್ಳುತ್ತೋ ನೋಡ್ಬೇಕು. ಯಾಕಂದ್ರೆ ವಿಶ್ವಕಪ್​ಗೆ ಇನ್ನೂ ಸಾಕಷ್ಟು ಟೈಂ ಇದೆ ಅನ್ಸಿದ್ರೂ ಏಕದಿನ ಪಂದ್ಯಗಳಂತೂ ಜಾಸ್ತಿ ಇಲ್ಲ. ಸೋ ಮ್ಯಾನೇಜ್​ಮೆಂಟ್ ಲೆಕ್ಕಾಚಾರ ಹೇಗಿರುತ್ತೆ ಅನ್ನೋದೇ ಸದ್ಯದ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *