ಜೋಕರ್, ಡಾಗ್, ಚೋಕ್ಲಿ ಕೊಹ್ಲಿ! – ವಿರಾಟ್ ಗೆ ಇದೆಂಥಾ ಅವಮಾನ?
ಆಸಿಸ್ ಫ್ಯಾನ್ಸ್ ಹುಚ್ಚಾಟಕ್ಕೆ ರಿವೇಂಜ್

ಜೋಕರ್, ಡಾಗ್, ಚೋಕ್ಲಿ ಕೊಹ್ಲಿ! – ವಿರಾಟ್ ಗೆ ಇದೆಂಥಾ ಅವಮಾನ?ಆಸಿಸ್ ಫ್ಯಾನ್ಸ್ ಹುಚ್ಚಾಟಕ್ಕೆ ರಿವೇಂಜ್

ಕದನದೊಳ್ ಕಲಿ ಪಾರ್ಥನಂ ಕೆಣಕಿ ಉಳಿದವರಿಲ್ಲ ಎಂದು ಕುರುಕ್ಷೇತ್ರದಲ್ಲಿ ಅರ್ಜುನ ಅಭಿಮನ್ಯುವಿಗೆ ಹೇಳೋ ಮಾತು. ಬಟ್ ಈ ಡೈಲಾಗ್ ಕ್ರಿಕೆಟ್​ನಲ್ಲಿ ಕದನದೋಳ್ ಕೊಹ್ಲಿ ಕೆಣಕಿ ಉಳಿದವರಿಲ್ಲ ಅಂತಾನೇ ಫೇಮಸ್. ಯಾಕಂದ್ರೆ ವಿರಾಟ್ ಕೊಹ್ಲಿ ಯಾವ್ದನ್ನು ಇಟ್ಕೊಳ್ಳೋಲ್ಲ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ಒಂದಕ್ಕೆ ಎರಡನ್ನ ಕೊಟ್ಟೇ ವಾಪಸ್ ಬರೋದು. ಈಗ ಆಸ್ಟ್ರೇಲಿಯಾದಲ್ಲೂ ಅದೇ ಆಗ್ತಿದೆ. ಕೊಹ್ಲಿಯನ್ನ ಕಂಡ್ರೆ ಸಾಕು ಉರಿದುರಿದು ಬೀಳ್ತಿದ್ದಾರೆ. ಕಾಂಗರೂನಾಡಿನ ದುರಹಂಕಾರಿಗಳಿಗೆ ಕೊಹ್ಲಿ ಕೂಡ ಸರಿಯಾಗೇ ಟಾಂಟ್ ಕೊಟ್ಟಿದ್ದಾರೆ. ಅಷ್ಟಕ್ಕೂ ಕೊಹ್ಲಿಯನ್ನ ಕಂಡ್ರೆ ಆಸ್ಟ್ರೇಲಿಯನ್ನರು ಅದ್ಯಾಕೆ ಹಂಗೆ ಆಡ್ತಿದ್ದಾರೆ..? ಅಭಿಮಾನಿಗಳ ವರ್ತನೆ ಅತಿಯಾಗಿದ್ದೇಕೆ? ಅಲ್ಲಿನ ಫ್ಯಾನ್ಸ್ ಗೆ ಉಗಿದ್ರಾ ವಿರಾಟ್? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದಾಖಲೆ ಬರೆದ ನಿತೀಶ್ ಕುಮಾರ್ ರೆಡ್ಡಿ!  – ಟೀಮ್‌ ಇಂಡಿಯಾದಲ್ಲಿ ಯುವ ಆಟಗಾರರಿಗೆ ಇನ್ನಾದ್ರೂ ಚಾನ್ಸ್‌ ಸಿಗುತ್ತಾ?

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಕಿಂಗ್ ವಿರಾಟ್ ಕೊಹ್ಲಿಯದ್ದೇ ಹವಾ. ಅವ್ರದ್ದೇ ರಾಷ್ಟ್ರದ ಯಾವೊಬ್ಬ ಆಟಗಾರನನ್ನೂ ಆ ಮಟ್ಟಿಗೆ ವೈಭವೀಕರಿಸಿರಲಿಲ್ಲ. ಫ್ರಂಟ್ ಪೇಜ್ ತುಂಬೆಲ್ಲಾ ಕೊಹ್ಲಿಯೇ ರಾರಾಜಿಸಿದ್ರು. ಆದ್ರೀಗ ಅದೇ ಮಾಧ್ಯಮಗಳು ಕೊಹ್ಲಿಯನ್ನ ಟೀಸ್ ಮಾಡುತ್ತಿವೆ. ಅಲ್ಲಿನ ಅಭಿಮಾನಿಗಳು ಮೈದಾನದ ಒಳಗೆ ಮತ್ತು ಹೊರಗೂ ರೇಗಿಸುತ್ತಿದ್ದಾರೆ. ರೇಗಿಸ್ತಿದ್ದಾರೆ ಅನ್ನೋದಕ್ಕಿಂತ ಅವಮಾನ ಮಾಡ್ತಿದ್ದಾರೆ.

ಕೊಹ್ಲಿಯನ್ನು ಜೋಕರ್ ಎಂದ ಆಸ್ಟ್ರೇಲಿಯಾ ಮಾಧ್ಯಮಗಳು!

ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 4ನೇ ಟೆಸ್ಟ್ ಪಂದ್ಯವು ದಿನದಿಂದ ದಿನಕ್ಕೆ ಹೈವೋಲ್ಟೇಜ್ ರಿಸಲ್ಟ್​ನತ್ತ ಸಾಗ್ತಿದೆ. ಪಂದ್ಯದ ಮೊದಲ ದಿನದಾಟದಲ್ಲಿ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ 19 ವರ್ಷದ ಆಟಗಾರ ಸ್ಯಾಮ್ ಕಾನ್​ಸ್ಟಾಸ್ ನಡುವೆ ನಡೆದ ಜಟಾಪಟಿ ಸಾಕಷ್ಟು ವೈರಲ್ ಆಗಿತ್ತು. ವಿವಾದ ಸೃಷ್ಟಿಸಿತ್ತು. ಸ್ಯಾಮ್​ಗೆ ಕೊಹ್ಲಿ ಗುದ್ದಿದ್ದರು. ಆ ನಂತ್ರ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ರು. ಈ ಇನ್ಸಿಡೆಂಟ್ ಬಳಿಕ ಕೊಹ್ಲಿಯನ್ನ ಅಲ್ಲಿನ ಅಭಿಮಾನಿಗಳು ಟಾರ್ಗೆಟ್ ಮಾಡ್ತಿದ್ದಾರೆ. ಮೀಡಿಯಾಗಳು ಕೂಡ ಜೋಕರ್ ಎಂದು ರಿಪೋರ್ಟ್ ಮಾಡಿದೆ. ಅದರಲ್ಲೂ ‘ದಿ ವೆಸ್ಟ್ ಆಸ್ಟ್ರೇಲಿಯನ್’ ಪತ್ರಿಕೆಯು ಕೊಹ್ಲಿಯನ್ನು ಕೋಡಂಗಿ (ಜೋಕರ್) ಎಂಬ ಶೀರ್ಷಿಕೆಯೊಂದಿಗೆ ಟೀಕಿಸಿದೆ.

ಆಸ್ಟ್ರೇಲಿಯನ್ನರ ಮುಖಕ್ಕೆ ಉಗಿದ್ರಾ ಕೊಹ್ಲಿ?

ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ ಫೀಲ್ಡಿಂಗ್ ಮಾಡುವಾಗಲೂ ಆಸ್ಟ್ರೇಲಿಯಾ ಅಭಿಮಾನಿಗಳು ಕೆಣಕುತ್ತಿದ್ದಾರೆ. ಬೌಂಡರಿ ಲೈನ್ ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರು ಆಸಿಸ್ ಬ್ಯಾಟರ್ಸ್ ಹೊಡೆದ ಚೆಂಡನ್ನು ಚಿರತೆಯಂತೆ ಓಡಿ ತಡೆದ್ರು. ವಿರಾಟ್​ರ ಈ ಫೀಲ್ಡಿಂಗ್ ಕೆಪಾಸಿಟಿ ನೋಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಚಪ್ಪಾಳೆ ತಟ್ಟಿ ಸಪೋರ್ಟ್ ಮಾಡ್ತಿದ್ರು. ಆದ್ರೆ ಆಸ್ಟ್ರೇಲಿಯಾ ಅಭಿಮಾನಿಗಳು ಸುಮ್ಮನೇ ಇರದೆ ಜೋರಾಗಿ ನಗುತ್ತಾ ವಿರಾಟ್ ಕೊಹ್ಲಿ ಅವರನ್ನು ಕೆಣಕಿದ್ರು. ಅದೊಂಥರ ಕೊಹ್ಲಿಗೆ ಟ್ರಿಗರ್ ಮಾಡಿದಂತಾಯ್ತು. ಈ ವೇಳೆ ಬೌಂಡರಿ ಲೈನ್ ದಾಟಿ ಬಂದ ವಿರಾಟ್ ಕೂಲಿಂಗ್ ಗ್ಲಾಸ್ ತೆಗೆದುಕೊಂಡ್ರು. ಹಾಗೇ ಬಾಯಲ್ಲಿದ್ದ ಚ್ಯುಯಿಂಗ್ ಗಮ್ ನ ಉಗಿದ್ರು. ಬಟ್ ಚ್ಯುಯಿಂಗ್ ಗಮ್ ಉಗಿದಿದ್ದು ನಮಗೇ ಅಂತಾ ಆಸ್ಟ್ರೇಲಿಯಾ ಫ್ಯಾನ್ಸ್ ಮತ್ತಷ್ಟು ಉರಿದುಕೊಳ್ತಿದ್ದಾರೆ.

ಕೊಹ್ಲಿಯನ್ನು ವೈಟ್ ಡಾಗ್ ಎಂದು ಕೂಗಿದ ಆಸ್ಟ್ರೇಲಿಯನ್ನರು!

ವಿರಾಟ್ ಕೊಹ್ಲಿಯನ್ನೇ ಟಾರ್ಗೆಟ್ ಮಾಡಿರೋ ಅಲ್ಲಿನ ಫ್ಯಾನ್ಸ್ ಗ್ಯಾಲರಿಯಲ್ಲೇ ಕುಳಿತು ಏನೇನೋ ಕೂಗುತ್ತಾ ಮಂಗಾಟ ಮಾಡ್ತಿದ್ದಾರೆ. ಅದ್ರಲ್ಲೂ ಕೊಹ್ಲಿ ಈಸ್ ಎ ವೈಟ್ ಡಾಗ್, ಕೊಹ್ಲಿ ಈಸ್ ಎ ವೈಟ್ ಡಾಗ್ ಅಂತಾ ಬಾಯಿ ಬಡ್ಕೊಳ್ತಿದ್ದಾರೆ.

ಇನ್ನೂ ಜೋರಾಗಿ ಕೂಗುವಂತೆ ಟಾಂಗ್ ಕೊಟ್ಟ ವಿರಾಟ್!

ಬೌಂಡರಿ ಲೈನ್ ಸಮೀಪ ಫೀಲ್ಡಿಂಗ್ ವೇಳೆ ಆಸ್ಟ್ರೇಲಿಯಾ ಫ್ಯಾನ್ಸ್ ಕೊಹ್ಲಿಯನ್ನ ಟೀಕಿಸ್ತಾ ಇದ್ರು. ಜೋರು ಜೋರಾಗಿ ಕೂಗುತ್ತಾ ಇರಿಟೇಟ್ ಮಾಡ್ತಿದ್ರು. ಈ ವೇಳೆ ಕೊಹ್ಲಿ ಕೇಳಿಸ್ತಿಲ್ಲ, ಇನ್ನೂ ಜೋರಾಗಿ ಕೂಗಿ ಎನ್ನುವಂತೆ ಸಹ್ನೆ ಮಾಡಿದ್ದಾರೆ. ಈ ಮೂಲಕ ಆಸಿಸ್ ಫ್ಯಾನ್ಸ್ ಗೆ ತಿರುಗೇಟು ಕೊಟ್ಟಿದ್ದಾರೆ.

ಹೀಗೆ ಕೊಹ್ಲಿ ಫೀಲ್ಡಿಂಗ್ ಟೈಮಲ್ಲಿ ಸುಖಾಸುಮ್ಮನೆ ಖ್ಯಾತೆ ಮಾಡ್ತಿರೋ ಕಾಂಗರೂನಾಡಿನ ಜನ ಬ್ಯಾಟಿಂಗ್ ವೇಳೆಯೂ ತಮ್ಮ ಚಿಲ್ರೆ ಬುದ್ಧಿಯನ್ನ ಬಿಡ್ತಿಲ್ಲ. ನಾಲ್ಕನೇ ಪಂದ್ಯದ ಎರಡನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ರು. 36 ರನ್ ಗಳಿಗೆ ವಿಕೆಟ್ ಒಪ್ಪಿಸಿ ಡ್ರೆಸ್ಸಿಂಗ್ ರೂಮ್ ಗೆ ತೆರಳುವಾಗ ಅಲ್ಲೂ ಅಣಕಿಸಿದ್ದಾರೆ. ಅಭಿಮಾನಿಯೊಬ್ಬ ವಿರಾಟ್ ಕೆರಳುವಂತೆ ಕೂಗಿದ್ದಾನೆ. ಅಭಿಮಾನಿಯ ಮಾತಿಗೆ ಕೋಪಗೊಂಡ ವಿರಾಟ್ ಕೊಹ್ಲಿ ಮತ್ತೆ ವಾಪಸ್‌ ಬಂದು ಕೋಪದಿಂದ ಅವರತ್ತ ದಿಟ್ಟಿಸಿ ನೋಡಿದ್ದಾರೆ. ಈ ವೇಳೆ ಮೈದಾನದ ಸಿಬ್ಬಂದಿ ಸಮಾಧಾನಪಡಿಸಿ ಮತ್ತೆ ಡ್ರೆಸ್ಸಿಂಗ್‌ ರೂಮ್‌ಗೆ ಕಳುಹಿಸಿದ್ದಾರೆ.

ಹೀಗೆ ವಿರಾಟ್​ರನ್ನೇ ಟಾರ್ಗೆಟ್ ಮಾಡ್ತಿರೋ ಅಲ್ಲಿನ ಫ್ಯಾನ್ಸ್ ಅತಿರೇಕವಾಗಿ ವರ್ತಿಸುತ್ತಿದ್ದಾರೆ. ಅವ್ರ ಈ ಬಿಹೇವಿಯರ್​ಗೆ ಸಿಟ್ಟಾಗಿರೋ ಭಾರತೀಯ ಫ್ಯಾನ್ಸ್ ಕೂಡ ನೀವು ನಮ್ಮ ತವರಿಗೆ ಬಂದಾಗ ಇದಕ್ಕೆ ಡಬಲ್ ತೀರಿಸಿಕೊಳ್ತೇವೆ ಅಂತಾ ರಿಪ್ಲೈ ಕೊಡ್ತಿದ್ದಾರೆ. ಈ ಜಿದ್ದಾಜಿದ್ದಿ ಅದೆಲ್ಲಿಗೆ ಹೋಗಿ ಮುಟ್ಟುತ್ತೋ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *