ಇದ್ರೆ ಇಂಥಾ ಗರ್ಲ್ ಫ್ರೆಂಡ್ ಇರ್ಬೇಕು ನೋಡಿ!- ಟಿಕ್ ಟಾಕ್ ಸುಂದರಿ ಮಾಡಿದ್ದೇನು ಗೊತ್ತಾ?

ಇದ್ರೆ ಇಂಥಾ ಗರ್ಲ್ ಫ್ರೆಂಡ್ ಇರ್ಬೇಕು ನೋಡಿ!- ಟಿಕ್ ಟಾಕ್ ಸುಂದರಿ ಮಾಡಿದ್ದೇನು ಗೊತ್ತಾ?

ಲವ್ ಸ್ಟೋರಿಗಳು ಮತ್ತು ಬ್ರೇಕ್ ಅಪ್ ಸ್ಟೋರಿಗಳು ವಿಚಿತ್ರ ಕಾರಣಗಳಿಗಾಗಿ ವೈರಲ್ ಆಗ್ತಾ ಇರ್ತವೆ. ಲವ್ ಮಾಡಿದಾಗ ನೀನೇ‌ ನನ್ನ ಪ್ರಾಣ ಅಂತಿರುತ್ತಾರೆ.. ಅದೇ ಬ್ರೇಕ್ ಅಪ್‌ ಆದಾಗ ಪ್ರಾಣ ತೆಗೆಯೋ‌ ಮಟ್ಟಕ್ಕೂ ಹೋಗ್ತಾರೆ.. ಆದ್ರೆ ಇಲ್ಲೊಬ್ಬಳು ಪುಣ್ಯಾತಗಿತ್ತಿ ಮಾಡಿರುವ ಕೆಲಸದ ಬಗ್ಗೆ ಕೇಳಿದ್ರೆ ಶಾಕ್‌ ಆಗ್ತಿರಾ?

ಇದನ್ನೂ ಓದಿ: ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..?- ಮಂಡ್ಯದಲ್ಲಿ ಸ್ಪರ್ಧೆ ಖಂಡಿತಾ ಎಂದು ಹಠ ಮಾಡಿದ್ಯಾಕೆ ಸಂಸದೆ

ಈಗೀಗ ಲವ್, ಬ್ರೇಕಪ್ ಕಾಮನ್ ಆಗೋಗಿದೆ. ಸಣ್ಣ ಮನಸ್ತಾಪ ಆದ್ರೂ ಅದನ್ನೇ ದೊಡ್ಡದು ಮಾಡಿ ಬ್ರೇಕ್ ಅಪ್ ಮಾಡ್ಕೊಳ್ತಾರೆ..  ಹುಡುಗಿ  ನಮ್ಮನ್ನ ಬಿಟ್ಟು ಹೋದ್ರೆ ಅಷ್ಟೇ.. ಅಲ್ಲಿಗೆ ಅವರ ಚಾಪ್ಟರ್‌ ಮುಗೀತು ಅಂತ.. ಅದೆಷ್ಟೋ ಮಂದಿ ಯುವಕರು ಅಂದುಕೊಂಡಿದ್ದಾರೆ. ಇನ್ನೂ ಕೆಲವರಿದ್ದಾರೆ ಲವ್ ಬ್ರೇಕ್ ಅಪ್ ಆದ ಬಳಿಕ ಫ್ರೆಂಡ್‌ ಆಗಿರುತ್ತಾರೆ. ಆದ್ರೆ ಆಸ್ಟ್ರೇಲಿಯಾದ ಫೇಮಸ್ ಟಿಕ್‌ಟಾಕ್‌ ಸ್ಟಾರ್‌ ಅನ್ನಾ ಪೌಲ್‌ ತನ್ನ ಎಕ್ಸ್ ಬಾಯ್ಸ್‌ ಫ್ರೆಂಡ್‌ಗೆ ದುಬಾರಿ ಗಿಫ್ಟ್ ಕೊಟ್ಟು ಭಾರಿ‌ ಸುದ್ದಿಯಾಗಿದ್ದಾಳೆ. ಆಕೆ ತನ್ನ ಎಕ್ಸ್ ಬಾಯ್ ಫ್ರೆಂಡ್ ಗೆ ಬರೋಬ್ಬರಿ  2 ಕೋಟಿ ರೂಪಾಯಿಯ ಮೌಲ್ಯದ ಗಿಫ್ಟ್ ಕೊಟ್ಟಿದ್ದಾಳೆ. 24 ವರ್ಷದ ಟಿಕ್‌ಟಾಕ್ ಸುಂದರಿ ಅನ್ನಾ ಪೌಲ್‌ ತನ್ನ ಮಾಜಿ ಬಾಯ್‌ಫ್ರೆಂಡ್‌, ಗ್ಲೆನ್ ಥಾಂಪ್ಸನ್‌ಗೆ 4 ಲಕ್ಷ ಆಸ್ಟ್ರೇಲಿಯನ್ ಡಾಲರ್‌ ಬೆಲೆಯ ದುಬಾರಿ ಕಾರನ್ನ ಉಡುಗೊರೆಯಾಗಿ ನೀಡಿದ್ದಾಳೆ. ಭಾರತದ ಕರೆನ್ಸಿ ಪ್ರಕಾರ ಇದು 2,17,61,544 ರೂಪಾಯಿಯಾಗುತ್ತೆ.

ನಿಸ್ಸಾನ್ ಸ್ಕೈಲೈನ್ GT-R R33 ಕಾರನ್ನು ಗಿಫ್ಟ್ ನೀಡಿದ್ದಾಳೆ. ಈ ವಿಡಿಯೋ ಕೂಡ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹುಡುಗರಂತೂ ನಾನಾದ್ರೂ ಈಕೆಯ ಮಾಜಿ ಬಾಯ್‌ಫ್ರೆಂಡ್‌ ಆಗಬಾರದಿತ್ತಾ ಅಂತ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು ಈ ವಿಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ. ನನ್ನ ಎಕ್ಸ್‌‌ ಬಿಟ್ಟು ಹೋದಮೇಲೆ ನನಗೆ ಖರ್ಚು ಮಾಡಿದ ಹಣವನ್ನು ರಿರ್ಟನ್‌ ಕೊಡು ಅಂತ ಹೇಳ್ತಿದ್ದಾಳೆ. ನೀವು ನೋಡಿದ್ರೆ ಮಾಜಿ ಬಾಯ್‌ಫ್ರೆಂಡ್‌ಗೆ ಕಾರ್‌ ಗಿಫ್ಟ್ ನೀಡಿದ್ದೀರಾ. ನೀವು ನಿಜವಾಗಲೂ ಏಂಜಲ್‌ ಅಂತ ಕಮೆಂಟ್ ಮಾಡುತ್ತಿದ್ದಾರೆ.

Shwetha M