WTC ಫೈನಲ್ ನಲ್ಲಿ ಗೋಲ್ಡನ್ ಸ್ಟಾರ್ಸ್ – ಸೋಲೇ ಕಾಣದವರಲ್ಲಿ ಸೋಲೋದ್ಯಾರು?
ಟೆಂಬಾ Vs ಕಮಿನ್ಸ್.. ಯಾರಿಗೆ ಟ್ರೋಫಿ?

WTC ಫೈನಲ್ ನಲ್ಲಿ ಗೋಲ್ಡನ್ ಸ್ಟಾರ್ಸ್ – ಸೋಲೇ ಕಾಣದವರಲ್ಲಿ ಸೋಲೋದ್ಯಾರು?ಟೆಂಬಾ Vs ಕಮಿನ್ಸ್.. ಯಾರಿಗೆ ಟ್ರೋಫಿ?

2023ರ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿ ಮೆರೆದಿದ್ದ ಆಸ್ಟ್ರೇಲಿಯಾ ತಂಡವು ಇದೀಗ ಎರಡನೇ ಬಾರಿಗೆ ಟೈಟಲ್ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನ ಎತ್ತಿ ಹಿಡಿಯೋಕೆ ಹರಿಣಗಳ ಪಡೆ ಎದುರು ನೋಡ್ತಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಅಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿತ್ತು. ಆಸ್ಟ್ರೇಲಿಯಾ ಎರಡನೇ ಸ್ಥಾನವನ್ನು ಪಡೆದಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರೇ ಇದ್ದು ರೋಚಕತೆ ಹೆಚ್ಚಿಸಿದೆ. ಉಭಯ ತಂಡದಲ್ಲೂ ಸ್ಟಾರ್ ವೇಗದ ಬೌಲರ್‌ಗಳೇ ತುಂಬಿದ್ದು ವೇಗಿಗಳ ಕಾದಾಟದಲ್ಲಿ ಗೆಲ್ಲೋರು ಯಾರು ಅನ್ನೋ ಕುತೂಹಲ ಹುಟ್ಟಿಸಿದೆ. ಅದ್ರ ಜೊತೆಗೆ ಸೌತ್ ಆಫ್ರಿಕಾ ನಾಯಕ ಟೆಂಬಾ ಬವುಮಾ ಮೇಲೆ ಇಡೀ ಕ್ರಿಕೆಟ್ ಜಗತ್ತೇ ಕಣ್ಣಿಟ್ಟಿದೆ. ಅದಕ್ಕೆ ಕಾರಣಗಳೂ ಇವೆ.

ಇದನ್ನೂ ಓದಿ : RO-KO ಇಲ್ಲದ ಭಾರತ ತಂಡಕ್ಕೆ ಕೆಎಲ್ ರಾಹುಲ್ ಆಸರೆ – ಆಂಗ್ಲರ ನಾಡಲ್ಲಿ ಗೆಲ್ಲೋದು ಕಷ್ಟನಾ?

ಟೆಂಬಾ ಬವುಮಾ ಪಾಲಿಗೆ ಈ ಪಂದ್ಯ ಅವ್ರ ಕ್ರಿಕೆಟ್ ಕರಿಯರ್​ನಲ್ಲೇ ದಿ ಮೋಸ್ಟ್ ಟಫೆಸ್ಟ್ ಫೈಟ್. ಯಾಕಂದ್ರೆ ಸೌತ್ ಆಫ್ರಿಕಾ ತಂಡದಲ್ಲಿ ಬವುಮಾ ಜರ್ನಿ ಅಷ್ಟು ಈಸಿ ಇರ್ಲಿಲ್ಲ. ಆಟದಲ್ಲಿ ಎಷ್ಟೇ ಸಮರ್ಥನಾಗಿದ್ರೂ ಕಪ್ಪು ಬಣ್ಣವಿರೋ ಕಾರಣಕ್ಕೆ ಸಾಕಷ್ಟು ಏರಿಳಿತಗಳನ್ನ ಕಂಡಿದ್ದಾರೆ. ಯಾಕಂದ್ರೆ ಅಲ್ಲಿಯೂ ಕೂಡ ವರ್ಣಬೇಧ ನೀತಿ ಪೀಕ್​ನಲ್ಲಿತ್ತು.

ಬವುಮಾ ಏಳು ಬೀಳಿನ ಹಾದಿ!

2014ರಲ್ಲಿ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕರಿಯರ್ ಆರಂಭಿಸಿದ ಬವುಮಾ

2016ರಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಲ್ಯಾಂಡ್ಸ್​​ನಲ್ಲಿ ಅಜೇಯ ಶತಕ ಸಿಡಿಸಿದ್ರು

ಮುಖ್ಯ ಕೋಚ್ ಶುಕ್ರಿ ಕಾನ್ರಾಡ್ 2023ರಲ್ಲಿ ಕ್ಯಾಪ್ಟನ್ ಆಗಿ ಬವುಮಾ ನೇಮಕ

ಟೆಂಬಾ ಬವುಮಾ ನಾಯಕತ್ವದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯ ಸೋತಿಲ್ಲ

ಬವುಮಾ 9 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡವನ್ನ ಲೀಡ್

8 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ರೆ ಒಂದು ಪಂದ್ಯ ಡ್ರಾನಲ್ಲಿ ಅಂತ್ಯ

2023ರಿಂದ 2025 ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್​ನಲ್ಲಿ ಗೆಲ್ತಾರಾ?

ದಕ್ಷಿಣ ಆಫ್ರಿಕಾ ತಂಡದಲ್ಲಿ ಭರವಸೆಯ ಆಟಗಾರರೇ ತುಂಬಿದ್ದಾರೆ. ಆರಂಭಿಕರಾಗಿ ರಯನ್‌ ರಿಕಲ್ಟನ್‌, ಐಡೆನ್ ಮಾರ್ಕ್ರಾಮ್‌ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇನ್ನು ಟೆಂಬಾ ಬವುಮಾ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್, ವಿಯಾನ್ ಮುಲ್ಡರ್, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಬಲ್ಲರು. ವೇಗದ ಬೌಲರ್‌ಗಳಾದ ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಕಾರ್ಬಿನ್‌ ಬಾಷ್ ಪಂದ್ಯದ ದಿಕ್ಕನ್ನೇ ಬದಲಿಸೋ ಸಾಮರ್ಥ್ಯ ಹೊಂದಿದ್ದಾರೆ. ಇದು ಹರಿಣಗಳ ಪಡೆಯ ಸ್ಟ್ರೆಂಥ್ ಆದ್ರೆ ಆಸಿಸ್ ಪಡೆ ಕೂಡ ಲಕ್ಕಿಯಸ್ಟ್ ಹಿಸ್ಟರಿ ಹೊಂದಿದೆ. ಅದ್ರಲ್ಲೂ ಈ ತ್ರಿಮೂರ್ತಿಗಳೇ ಪ್ಲಸ್.

ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಡೇಂಜರಸ್ ಌಂಡ್ ಲಕ್ಕಿಯೆಸ್ಟ್ ತ್ರಿಮೂರ್ತಿಗಳಿದ್ದಾರೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೇ ಜೋಶ್ ಹೇಜಲ್​ವುಡ್. ಆಸಿಸ್ ಪಾಲಿಗೆ ಒಂಥರ ಗೋಲ್ಡನ್ ಟ್ರಿಯೋ ಇದ್ದಂಗೆ.  ಈ ಮೂರೂ ಜನ ಬೌಲಿಂಗ್​ನಲ್ಲಿ ಎಷ್ಟು ಡ್ಯಾಮೇಜ್ ಮಾಡ್ತಾರೋ ಫೈನಲ್ ಮ್ಯಾಚಸ್ ಅಂತಾ ಬಂದಾಗ ಅಷ್ಟೇ ಅದೃಷ್ಟವಂತರು. ಆಸ್ಟ್ರೇಲಿಯಾ ಕ್ರಿಕೆಟ್‌ನ ಈ ತ್ರಿಮೂರ್ತಿಗಳು ಒಟ್ಟಿಗೆ ಎಂದಿಗೂ ಫೈನಲ್‌ನಲ್ಲಿ ಸೋತಿಲ್ಲ.

ಫೈನಲ್ ಸೋಲದ ತ್ರಿಮೂರ್ತಿಗಳು!

ಕಮಿನ್ಸ್, ಸ್ಟಾರ್ಕ್ ಹಾಗೇ ಹೇಜಲ್ ​ವುಡ್ 2015 ರ ವಿಶ್ವಕಪ್‌

ನ್ಯೂಜಿಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿ ಪ್ರಶಸ್ತಿ

ಆ ಬಳಿಕ 2021 ರಲ್ಲಿ ಮೂವರು ಚೊಚ್ಚಲ T20 ಪ್ರಶಸ್ತಿಯನ್ನು ಗೆದ್ರು

2023 ರ ವಿಶ್ವಕಪ್​ ನಲ್ಲಿ ಭಾರತವನ್ನ ಸೋಲಿಗೆ ಫೈನಲ್ ಪಂದ್ಯ ಗೆದ್ದಿದ್ರು

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೂ ಒಟ್ಟೊಟ್ಟಿಗೆ ಕಾಲಿಡ್ತಿದ್ದು ಗೆಲ್ಲೋ ವಿಶ್ವಾಸ

ಜೋಶ್ & ಸ್ಟಾರ್ಕ್ ತಾವು ಆಡಿದ ಯಾವುದೇ ಫೈನಲ್ ಪಂದ್ಯವನ್ನ ಸೋತಿಲ್ಲ

ಇಬ್ಬರೂ ಆಟಗಾರರು ತಮ್ಮ ವೃತ್ತಿ ಜೀವನದಲ್ಲಿ 7 ಫೈನಲ್ ಪಂದ್ಯಗಳನ್ನ ಆಡಿದ್ದಾರೆ

CL T20, IPL, ಏಕದಿನ ವಿಶ್ವಕಪ್, ಟಿ-20 ವಿಶ್ವಕಪ್, ಡಬ್ಲ್ಯೂಟಿಸಿ

2025ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ​ನಲ್ಲೂ ಅದೇ ಗೋಲ್ಡನ್ ಚಾರ್ಮ್?

ಅದ್ರಲ್ಲೂ ಆಸ್ಟ್ರೇಲಿಯಾ ತಂಡದಲ್ಲಿ ಸ್ಟಾರ್‌ ಬ್ಯಾಟರ್‌ಗಳ ದಂಡೇ ಇದೆ. ಅನುಭವಿ ಉಸ್ಮಾನ್ ಖವಾಜಾ, ಯುವ ಆಟಗಾರ ಸ್ಯಾಮ್ ಕೊನ್ಸ್​ಟಾಸ್ ಓಪನರ್ಸ್ ಆಗ್ತಾರೆ. ಮಧ್ಯಮ ಕ್ರಮಾಂಕದಲ್ಲಿ ಮಾರ್ನಸ್ ಲಬುಶೇನ್‌, ಸ್ಟೀವ್ ಸ್ಮಿತ್, ಟ್ರಾವಿಸ್‌ ಹೆಡ್‌ ಕಾಣಿಸಿಕೊಳ್ಳಲಿದ್ದಾರೆ. ವೇಗದ ಬೌಲರ್​ಗಳಾಗಿ ಮಿಚೆಲ್ ಸ್ಟಾರ್ಕ್‌, ಜೋಶ್ ಹ್ಯಾಜಲ್‌ವುಡ್‌, ಪ್ಯಾಟ್‌ ಕಮಿನ್ಸ್ ಸಿಂಹಸ್ವಪ್ನರಾಗ್ತಾರೆ.

Shantha Kumari