ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನೇ ಬಗ್ಗು ಬಡಿದ ಶ್ರೀಲಂಕಾ – ಟೂರ್ನಿಯಿಂದ ಆಸೀಸ್ ಪಡೆ ಔಟ್?

ಶ್ರೀಲಂಕಾ ತಂಡ, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದೆ. ಈ ಗೆಲುವಿನ ಮೂಲಕ ದಸೂನ್ ಶಣಕ ಅವರ ನಾಯಕತ್ವದ ಶ್ರೀಲಂಕಾ ತಂಡ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಹಂತಕ್ಕೆ ಪ್ರವೇಶ ಮಾಡಿತು. ಆದರೆ, ಸತತ ಎರಡನೇ ಸೋಲು ಅನುಭವಿಸಿದ ಮಾಜಿ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡದ ಸೂಪರ್-8ರ ಹಾದಿ ಅತ್ಯಂತ ಕಠಿಣವಾಗಿದೆ. ಅಲ್ಲದೆ ಆಸೀಸ್ ತಂಡದ ಸೂಪರ್-8ರ ಭವಿಷ್ಯ ಜಿಂಬಾಬ್ವೆ ತಂಡದ ಕೈಯಲ್ಲಿದೆ. ಪೆಬ್ರವರಿ 17 ರಂದು ಐರ್ಲೆಂಡ್ ವಿರುದ್ಧ ಜಿಂಬಾಬ್ವೆ ಗೆಲುವು ಪಡೆದರೆ, ಆಸ್ಟ್ರೇಲಿಯಾ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.
ಇದನ್ನೂ ಓದಿ: 40 ಜನ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಪಲ್ಟಿ! – ಹಲವರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ!
ಸೋಮವಾರ ಇಲ್ಲಿನ ಪಲ್ಲೆಕೆಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿಆಸ್ಟ್ರೇಲಿಯಾ ನೀಡಿದ್ದ 182 ರನ್ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ, ಕುಸಾಲ್ ಪೆರೆರಾ ಅವರೊಂದಿಗೆ ಮೊದಲನೇ ವಿಕೆಟ್ ಬಹುಬೇಗ ಕಳೆದುಕೊಂಡಿತು. ಆದರೂ ಪಥುಮ್ ನಿಸಾಂಕ (100 ರನ್) ಅವರ ಚೊಚ್ಚಲ ಶತಕ ಹಾಗೂ ಕುಸಾಲ್ ಮೆಂಡಿಸ್ ( 51 ರನ್) ಅವರ ಅರ್ಧಶತಕದ ಬಲದಿಂದ ಆತಿಥೇಯ ಶ್ರೀಲಂಕಾ 18 ಓವರ್ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 184 ರನ್ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನ ಮೂಲಕ ಶ್ರೀಲಂಕಾ, ಅಂತಿಮ ಎಂಟರ ಘಟ್ಟಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟಿತು.
ಪಥುಮ್ ನಿಸಾಂಕ ಚೊಚ್ಚಲ ಶತಕ
ಶ್ರೀಲಂಕಾ ತಂಡದ ಗಲುವಿನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಪಥುಮ್ ನಿಸಾಂಕ ಬಹು ಮುಖ್ಯ ಪಾತ್ರವನ್ನು ವಹಿಸಿದರು. ಕುಸಾಲ್ ಪೆರೆರಾ ಬೇಗ ನಿರ್ಗಮಿಸಿದರೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಪಥುಮ್ ನಿಸಾಂಕ ಆಸೀಸ್ ಬೌಲಿಂಗ್ ದಾಳಿಯನ್ನು ಛಿದ್ರಗೊಳಿಸಿದರು. ಕೊನೆಯವರೆಗೂ ಕ್ರೀಸ್ನಲ್ಲಿ ಅಜೇಯರಾಗಿ ಉಳಿದ ಅವರು, ಆಡಿದ 52 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 100 ರನ್ಗಳನ್ನು ಸಿಡಿಸಿದರು. ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದರು. ಅಲ್ಲದೆ ಕುಸಾಲ್ ಮೆಂಡಿಸ್ ಅವರ ಜೊತೆಗೆ ಎರಡನೇ ವಿಕೆಟ್ಗೆ ನಿಸಾಂಕ 66 ಎಸೆತಗಳಲ್ಲಿ 97 ರನ್ಗಳನ್ನು ಕಲೆ ಹಾಕಿದರು. ನಂತರ ಮೂರನೇ ವಿಕೆಟ್ಗೆ ಪವನ್ ರತ್ನ ನಾಯಕೆ ಜೊತೆಗೆ 34 ಎಸೆತಗಳಲ್ಲಿ 79 ರನ್ಗಳ ಸ್ಪೋಟಕ ಜೊತೆಯಾಟವನ್ನು ಆಡಿದರು.

ನೋಡಿರಿ

