IND Vs AUS ಫೈಟ್ ಗೆ ಡಬಲ್ ಶಾಕ್ – ಆಸೀಸ್ ಗೆ ಕೈಕೊಟ್ಟ ಸ್ಟಾರ್ಕ್, ಕಮಿನ್ಸ್
RO-KO ಕಮ್ ಬ್ಯಾಕ್.. ಹೇಗಿದೆ ಲಕ್?

ಸೆಪ್ಟೆಂಬರ್ 9ರಿಂದ 28ರವರೆಗೆ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಆ ಬಳಿಕ ಅಕ್ಟೋಬರ್ನಲ್ಲಿ ಭಾರತ ಐದು ಪಂದ್ಯಗಳ ಟಿ-20ಐ ಹಾಗೇ 3 ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾಗೆ ಹಾರಲಿದೆ. ಏಕದಿನ ಸರಣಿಯು ಅಕ್ಟೋಬರ್ 19 ರಂದು ಪರ್ತ್ನಿಂದ ಪ್ರಾರಂಭವಾಗಿ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ಕೊನೆಗೊಳ್ಳಲಿದೆ. ಟಿ-20 ಸರಣಿಯು ಅಕ್ಟೋಬರ್ 29 ರಂದು ಕ್ಯಾನ್ಬೆರಾದಲ್ಲಿ ಪ್ರಾರಂಭವಾಗಿ ನವೆಂಬರ್ 8 ರಂದು ಬ್ರಿಸ್ಬೇನ್ನಲ್ಲಿ ಕೊನೆಗೊಳ್ಳಲಿದೆ. ಬಟ್ ಈ ಸರಣಿಗೆ ಅಭಿಮಾನಿಗಳ ಕ್ರೇಜ್ ಹೆಂಗಿದೆ ಅಂದ್ರೆ ಈಗಾಗ್ಲೇ ಏಕದಿನ ಮತ್ತು ಟಿ20 ಸರಣಿಯ ಎಲ್ಲಾ ಪಂದ್ಯಗಳ ಟಿಕೆಟ್ಗಳು ಮಾರಾಟವಾಗಿವೆ. ಅದ್ರಲ್ಲೂ ರೋಹಿತ್ ಕೊಹ್ಲಿ ಆಡಲಿರುವ ಏಕದಿನ ಮಾದರಿ ಪಂದ್ಯಗಳ ಟಿಕೆಟ್ಗಳು ನಾಲ್ಕು ತಿಂಗಳ ಮೊದಲೇ ಸೋಲ್ಡ್ ಔಟ್ ಆಗಿರೋ ಮಾಹಿತಿ ಇದೆ. ಹೀಗೆ ಟೀಂ ಇಂಡಿಯಾ ಪರ ಯಾರೆಲ್ಲಾ ವೈಟ್ ಬಾಲ್ ಸರಣಿಗೆ ಸೆಲೆಕ್ಟ್ ಆಗ್ತಾರೆ ಅಂತಾ ಲೆಕ್ಕಾಚಾರ ಮಾಡುವಾಗ್ಲೇ ಆಸ್ಟ್ರೇಲಿಯಾ ಕ್ರಿಕೆಟ್ನಲ್ಲಿ ಬ್ಯಾಕ್ ಟು ಬ್ಯಾಕ್ ಆಘಾತ ತಟ್ಟಿದೆ.
ಇದನ್ನೂ ಓದಿ : RR, KKR, CSKಗೆ ಹೊಸ ಕ್ಯಾಪ್ಟನ್ಸ್ – ಡೆಲ್ಲಿ ಸಾರಥ್ಯದಿಂದ ಹೊರಬಿದ್ರಾ ಪಟೇಲ್?
ಆಸ್ಟ್ರೇಲಿಯಾ ತಂಡದಲ್ಲಿ ಮರ್ಕ್ಯೂ ಬೌಲರ್ ಎಂದೇ ಫೇಮಸ್ ಆಗಿದ್ದ 35 ವರ್ಷದ ಮಿಚೆಲ್ ಸ್ಟಾರ್ಕ್ ಟಿ20 ಇಂಟರ್ನ್ಯಾಷನಲ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 2024ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೊನೇ ಬಾರಿ ಕಾಣಿಸಿಕೊಂಡಿದ್ರು. ಆ ನಂತರ ಆಸ್ಟ್ರೇಲಿಯಾದ ಯಾವುದೇ ಟಿ20 ಟೂರ್ನಿಯಲ್ಲಿ ಮಿಚೆಲ್ ಸ್ಟಾರ್ಕ್ ಆಡಿರಲಿಲ್ಲ. ಇದೀಗ ಇನ್ಮುಂದೆ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಕೊಡೋ ಕಾರಣದಿಂದಾಗಿ ಟಿ20ಐ ಕ್ರಿಕೆಟ್ಗೆ ವಿದಾಯ ಹೇಳಿದ್ದಾಗಿ ತಿಳಿಸಿದ್ದಾರೆ. ಇನ್ನು ಆಸಿಸ್ ಪರ 65 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಮಿಚೆಲ್ ಸ್ಟಾರ್ಕ್ 23.81 ಸರಾಸರಿಯೊಂದಿಗೆ 79 ವಿಕೆಟ್ಗಳನ್ನು ಕಬಳಿಸಿದ್ದಾರೆ. 7.74 ಬೌಲಿಂಗ್ ಎಕನಾಮಿ ಇದೆ. 20 ರನ್ಗೆ 4 ವಿಕೆಟ್ಗಳನ್ನು ಕಬಳಿಸಿರುವುದು ಟಿ20ಯಲ್ಲಿ ಬೆಸ್ಟ್ ಪರ್ಫಾಮೆನ್ಸ್ ಆಗಿದೆ. ಹೀಗೆ ಸ್ಟಾರ್ಕ್ ನಿವೃತ್ತಿ ನಡುವೆಯೂ ಪ್ಯಾಟ್ ಕಮಿನ್ಸ್ ವಿಚಾರವಾಗಿ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ.
ಭಾರತದ ವಿರುದ್ಧದ ವೈಟ್ ಬಾಲ್ ಸರಣಿಗಿಲ್ಲ ಪ್ಯಾಟ್ ಕಮಿನ್ಸ್
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತವನ್ನ ಸೋಲಿಸಿದ್ದ ಆಸ್ಟ್ರೇಲಿಯಾ ಪಡೆ ಇದೀಗ ವೈಟ್ ಬಾಲ್ ಸರಣಿಯಲ್ಲೂ ಗೆದ್ದು ಬೀಗೋ ಲೆಕ್ಕಾಚಾರದಲ್ಲಿದೆ. ಆದ್ರೆ ಸರಣಿಗೆ ಇನ್ನೂ ಒಂದೂವರೆ ತಿಂಗಳು ಟೈಂ ಇರುವಾಗ್ಲೇ ಬ್ರೇಕಿಂಗ್ ನ್ಯೂಸ್ವೊಂದು ಹೊರ ಬಿದ್ದಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಭಾರತ ವಿರುದ್ಧದ ವೈಟ್ ಬಾಲ್ ಸಿರೀಸ್ನಿಂದಲೇ ರೂಲ್ಡ್ ಔಟ್ ಆಗಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವ ಕಮಿನ್ಸ್ ಅಕ್ಟೋಬರ್ ನಲ್ಲಿ ನಡೆಯಲಿರುವ ಭಾರತದ ವಿರುದ್ಧ ವೈಟ್ ಬಾಲ್ ಸರಣಿ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗಳಿಂದ ಹೊರಗುಳಿಯಲಿದ್ದಾರೆ. ವೈದ್ಯಕೀಯ ತಪಾಸಣೆಯಲ್ಲಿ ಯಾವುದೇ ಮೂಳೆ ಮುರಿತ ಇಲ್ಲವೆಂದು ತಿಳಿದುಬಂದರೂ, ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆ ಇರವುದರಿಂದ ಲಾಂಗ್ ರೆಸ್ಟ್ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಇಬ್ಬರು ದಿಗ್ಗಜ ಆಟಗಾರರು ಭಾರತ ವಿರುದ್ಧದ ಪಂದ್ಯಗಳಿಗೆ ಗೈರಾಗಲಿದ್ದಾರೆ.

ನೋಡಿರಿ

