RCB ಪರ ಆಡಲ್ವಾ AUS ಪ್ಲೇಯರ್ಸ್? – PAK, BAN ಸರಣಿ ಸೋಲಿಗೆ ಶಿಕ್ಷೆ?
ಸ್ಟಾರ್ಸ್ ಗೆ NOCಯಲ್ಲೇ ಕಡಿವಾಣ?

ವಿಶ್ವ ಕ್ರಿಕೆಟ್ ಇತಿಹಾಸವನ್ನ ಕೆದಕಿದ್ರೆ ಆಸ್ಟ್ರೇಲಿಯಾ ಸ್ಟ್ರಾಂಗೆಸ್ಟ್ ಌಂಡ್ ಮೋಸ್ಟ್ ಸಕ್ಸಸ್ಫುಲ್ ಟೀಂ. ಐಸಿಸಿ ಟೂರ್ನಮೆಂಟ್ಸ್ನಲ್ಲೂ ಡಾಮಿನೇಷನ್ ಮಾಡಿರೋ ಬಲಿಷ್ಠ ತಂಡ. ಆದ್ರೆ ಇತ್ತೀಚಿನ ರಿಸಲ್ಟ್ ನೋಡಿದ್ರೆ ಕಾಂಗರೂಪಡೆ ಇಷ್ಟು ಡಮ್ಮಿ ಆಯ್ತಾ ಅನ್ನಿಸಿಬಿಡುತ್ತೆ. ಬಟ್ ರಿಯಾಲಿಟಿ ಬೇರೆನೇ ಇದೆ. ಸ್ಟಾರ್ ಪ್ಲೇಯರ್ಗಳೆಲ್ಲಾ ಫ್ರಾಂಚೈಸಿ ಲೀಗ್ಸ್ ಅಂತಾ ಬ್ಯುಸಿ ಆಗಿದ್ರೆ ಆಸ್ಟ್ರೇಲಿಯಾ ನ್ಯಾಷನಲ್ ಟೀಂ ಮಾತ್ರ ಸೋತು ಸೋತು ಸುಣ್ಣವಾಗ್ತಿದೆ. ಹಿಸ್ಟರಿಯಲ್ಲೇ ಫಾರ್ ದಿ ಫಸ್ಟ್ ಟೈಂ ಬಾಂಗ್ಲಾದೇಶದ ವಿರುದ್ಧ ಸರಣಿಯನ್ನೇ ಕಳ್ಕೊಂಡಿದ್ದಾರೆ. ಈ ಸರಣಿ ಸೋಲಿನ ಬಳಿಕ ಆಸೀಸ್ ಕ್ರಿಕೆಟ್ನಲ್ಲಿ ಬಿರುಗಾಳಿ ಎದ್ದಿದ್ದು ಸೂಪರ್ ಸ್ಟಾರ್ಸ್ಗೆ ಕಡಿವಾಣ ಹಾಕೋಕೆ ಮುಂದಾಗಿದ್ದಾರೆ.
ಬಲಿಷ್ಠ ತಂಡಗಳಿಗೂ ನಡುಕು ಹುಟ್ಟಿಸುತ್ತಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ಟೀಂ ಈಗ ಆವರೇಜ್ ಎನ್ನುವಂಥ ತಂಡಗಳ ಎದುರಲ್ಲೂ ಮುಗ್ಗರಿಸ್ತಿದ್ದಾರೆ. ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರೋ ಮೂರು ಪಂದ್ಯಗಳ ಏಕದಿನ ಸರಣಿಯನ್ನ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸೋತು ಸುಣ್ಣವಾಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಬಾಂಗ್ಲಾ ಪ್ರವಾಸಕ್ಕೂ ಮುನ್ನ ಪಾಕಿಸ್ತಾನದಲ್ಲಿ ಏಕದಿನ ಸರಣಿಯನ್ನಾಡಿದ್ದ ಆಸೀಸ್ ಪಡೆ ಅಲ್ಲೂ ಕೂಡ ಏಕದಿನ ಸರಣಿಯನ್ನು ಸೋತಿದ್ರು. ಇದೀಗ ಬಾಂಗ್ಲಾದೇಶದಲ್ಲೂ ಇನ್ನೂ ಒಂದು ಪಂದ್ಯ ಬಾಕಿ ಇದ್ದಂತೆಯೇ ಪಲ್ಟಿ ಹೊಡೆದಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು ಏಕದಿನ ಸರಣಿಯಲ್ಲಿ ಸೋಲಿಸಿ ಬಾಂಗ್ಲಾ ಹುಲಿಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ : TESTಗೆ ಮಾತ್ರ ಮೊಹಮ್ಮದ್ ಸಿರಾಜ್ ಸೀಮಿತ – ಬುಮ್ರಾ ಆಡದಿದ್ರಷ್ಟೇ T-20I & ODI
ಒಂದೂ ರನ್ ಗಳಿಸದೆ 3 ವಿಕೆಟ್ ಕಳ್ಕೊಂಡ ಆಸೀಸ್ ತಂಡ!
ಜೂನ್ 9ರಂದು ಮೀರ್ಪುರ್ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ 86 ರನ್ಗಳ ಬೃಹತ್ ಅಂತರದಲ್ಲಿ ಸೋತಿದ್ದ ಆಸ್ಟ್ರೇಲಿಯಾ ನಿನ್ನೆ ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಮ್ಯಾಚಲ್ಲಿ ಇನ್ನೂ ಹೀನಾಯ ಪ್ರದರ್ಶನ ನೀಡಿತು. ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡ್ತೀವಿ ಎಂದ ಆಸೀಸ್ ಪಡೆ ಆರಂಭದಲ್ಲೇ ಪೆವಿಲಿಯನ್ ಪರೇಡ್ ನಡೆಸಿತು. ಬಾಂಗ್ಲಾ ನೆಲದಲ್ಲಿ ನೆಲಕಚ್ಚಿ ಆಡ್ತಿದ್ದವ್ರು ಖಾತೆ ತೆರೆಯೋಕೂ ಒದ್ದಾಡ್ತಿದ್ರು. ಅದೆಷ್ಟರ ಮಟ್ಟಿಗೆ ಅಂದ್ರೆ ಟಾಪ್ ಆರ್ಡರ್ನ ಮೂವರು ಬ್ಯಾಟರ್ಸ್ ಖಾತೆ ತೆರೆಯದೇ ಔಟ್ ಆದ್ರು. ಈ ಮೂಲಕ ಆಸೀಸ್ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ದಾಖಲಿಸಿದ ಬೇಡದ ದಾಖಲೆಯೊಂದನ್ನು ತನ್ನ ಖಾತೆಗೆ ಹಾಕಿಕೊಂಡಿತು. ಸೋ ಅಲ್ಲಿಗೆ ಒಂದೂ ರನ್ ಸ್ಕೋರ್ ಮಾಡದೆ 3 ವಿಕೆಟ್ಸ್ ಬಿದ್ದಾಗಿತ್ತು. ಮಳೆ ಕೂಡ ಕಾಟ ಕೊಟ್ಟಿದ್ರಿಂದ 42 ಓವರ್ಗಳಿಗೆ ಸೀಮಿತವಾದ ಮ್ಯಾಚಲ್ಲಿ 8 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಹಾಗೇ ಬಾಂಗ್ಲಾ ತಂಡಕ್ಕೆ 41 ಓವರ್ಗಳಲ್ಲಿ 192 ರನ್ಗಳ ಟಾರ್ಗೆಟ್ ನಿಗದಿ ಪಡಿಸಿದ್ರು. ಹೀಗಿದ್ರೂ ಬಾಂಗ್ಲಾದೇಶ 35 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ ಗೆದ್ದು ಪಂದ್ಯದ ಜೊತೆ ಸರಣಿಯನ್ನೂ ಕೈವಶ ಮಾಡಿಕೊಳ್ತು. ಆದ್ರೆ ಬಾಂಗ್ಲಾ ವಿರುದ್ಧದ ಈ ಸೋಲು ಕ್ರಿಕೆಟ್ ಆಸ್ಟ್ರೇಲಿಯಾದಲ್ಲಿ ಕೋಲಾಹಲ ಎಬ್ಬಿಸಿದೆ.
ಐಪಿಎಲ್ ನಲ್ಲಿ ಸ್ಟಾರ್ಸ್ ಬ್ಯುಸಿ.. ಸರಣಿಗಳಲ್ಲಿ ಆಸ್ಟ್ರೇಲಿಯಾಗೆ ಸೋಲು!
ಅಷ್ಟಕ್ಕೂ ಇಲ್ಲಿ ಆಸ್ಟ್ರೇಲಿಯಾ ತಂಡದ ಸೋಲಿಗೆ ಅಸಲಿ ಕಾರಣ ಬೇರೆನೇ ಇದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ವಿರುದ್ಧದ ಸರಣಿಗಳಲ್ಲಿ ಆಸೀಸ್ ಪರ ಸ್ಟಾರ್ ಪ್ಲೇಯರ್ಗಳ್ಯಾರು ಇರಲಿಲ್ಲ. ಐಪಿಎಲ್ ಆಡಿದ ಕೂಪರ್ ಕೊನೊಲಿ, ಜೋಶ್ ಇಂಗ್ಲಿಸ್, ಕ್ಯಾಮರೋನ್ ಗ್ರೀನ್ ಹೀಗೆ ಕೆಲವ್ರು ಇದ್ರೂ ಕೂಡ ಫಸ್ಟ್ ಪ್ರಿಯಾರಿಟಿ ಪ್ಲೇಯರ್ಸ್ ಅಂದ್ರೆ ಫ್ರಂಟ್ ಲೈನ್ನಲ್ಲಿ ಆಡುವಂಥ ಸ್ಟಾರ್ ಆಟಗಾರರು ಯಾರೂ ಈ ತಂಡದಲ್ಲಿ ಇರ್ಲಿಲ್ಲ. ಆಪ್ಶನಲ್ ಪ್ಲೇಯರ್ಸ್ ಇದ್ದ ಟೀಂ ಇದು. ಇದೇ ಈಗ ಆಸ್ಟ್ರೇಲಿಯಾ ತಂಡದ ಸೋಲಿಗೆ ಮುಖ್ಯ ಕಾರಣ ಆಗಿರುವಂಥದ್ದು. ಎಂಡ್ ಆಫ್ ದಿ ಡೇ ಪ್ಲೇಯರ್ಸ್ ಯಾರು ಅನ್ನೋದಕ್ಕಿಂತ ರಿಸಲ್ಟ್ ಏನಾಯ್ತು ಅನ್ನೋದೇ ತಾನೇ ಮುಖ್ಯ. ಅಂದ್ರೆ ಇಲ್ಲಿ ಆಸ್ಟ್ರೇಲಿಯಾ ಸೋತಿದೆ ಅನ್ನೋದಷ್ಟೇ ಹೈಲೆಟ್ ಆಗುತ್ತೆ. ಯಾರು ಆಡಿದ್ರು ಯಾರು ಹೊರಗಿದ್ರು ಅನ್ನೋದು ಮ್ಯಾಟ್ರ್ ಆಗಲ್ಲ. ಇದೇ ಕಾರಣಕ್ಕೆ ಪಾಕಿಸ್ತಾನ ಮತ್ತು ಬಾಂಗ್ಲಾ ವಿರುದ್ಧದ ಸರಣಿ ಸೋಲಿನ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ನಲ್ಲಿ ಹೊಸ ಅಲೆ ಎದ್ದಿದೆ. ಐಪಿಎಲ್ ಸೇರಿದಂತೆ ಫ್ರಾಂಚೈಸಿ ಲೀಗ್ಗಳಲ್ಲಿ ಆಡೋಕೆ ಅವಕಾಶ ಕೊಡ್ಬೇಕಾ ಎನ್ನೋ ಚರ್ಚೆ ಶುರುವಾಗಿದೆ.
ಆಸೀಸ್ ಪ್ಲೇಯರ್ಸ್ ಗೆ ಬ್ರೇಕ್?
2026ರ ಐಪಿಎಲ್ ನಲ್ಲಿ 16 ಆಸ್ಟ್ರೇಲಿಯನ್ ಆಟಗಾರರು ಭಾಗಿ
ಟಿಮ್ ಡೇವಿಡ್, ಜೋಶ್ ಹೇಜಲ್ ವುಡ್, ಪ್ಯಾಟ್ ಕಮಿನ್ಸ್, ಟ್ರಾವಿಸ್ ಹೆಡ್
ಕೂಪರ್ ಕೊನೊಲಿ, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಮಾರ್ಷ್ ಸೇರಿದಂತೆ ಸ್ಟಾರ್ಸ್
ಈ ಪೈಕಿ ಬಿಗ್ ಪ್ಲೇಯರ್ಸ್ ಪಾಕ್, ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಗೈರು
2 ತಿಂಗಳ ಕಾಲ ಲೀಗ್ ಆಡೋದ್ರಿಂದ ಆಸ್ಟ್ರೇಲಿಯಾ ಪರ ಆಡಲು ಅಸಾಧ್ಯ
ಫ್ರಾಂಚೈಸಿ ಜೊತೆಗಿನ ಕಮಿಟ್ ಮೆಂಟ್ಸ್ ಗಳಿಂದ ರಾಷ್ಟ್ರೀಯ ತಂಡಕ್ಕೆ ಗೈರು
ಮೇ 30, ಜೂನ್ 2 ಮತ್ತು ಜೂನ್ 4 ರಂದು ಪಾಕಿಸ್ತಾನ ವಿರುದ್ಧ ಏಕದಿನ ಸರಣಿ
ವರ್ಕ್ ಲೋಡ್ ಮ್ಯಾನೇಜ್ ಮೆಂಟ್ ದೃಷ್ಟಿಯಿಂದ ಫಾಸ್ಟ್ ಬೌಲರ್ಸ್ ಗೆ ರೆಸ್ಟ್
ಐಪಿಎಲ್ ನಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳು ಇರೋದ್ರಿಂದ ಇಂಜುರಿ ಸಾಧ್ಯತೆ
ಸಿಪಿಎಲ್, ಪಿಎಸ್ ಎಲ್, ಬಿಗ್ ಬ್ಯಾಷ್ ಲೀಗ್ ಹೀಗೆ ಹಲವು ಫ್ರಾಂಚೈಸಿ ಲೀಗ್
ವಿದೇಶಿ ಲೀಗ್ ಗಳಿಗೆ ಎನ್ ಒಸಿ ನೀಡುವುದನ್ನು ತಡೆಯುವಂತೆ ಮನವಿ

ನೋಡಿರಿ

