RCBಗಿಲ್ಲ ಜೋಶ್.. DCಗಿಲ್ಲ ಸ್ಟಾರ್ಕ್ – ಪ್ಲೇ ಆಫ್ಸ್ ಟೈಮಲ್ಲೇ ಕೈಕೊಡ್ತಾರಾ?
PAK Vs AUS ಸರಣಿ ಶಾಕ್ ಯಾರಿಗೆ?

19ನೇ ಸೀಸನ್ ಐಪಿಎಲ್ ಈಗ ರಣರೋಚಕ ಘಟ್ಟದಲ್ಲಿದೆ. ಇನ್ನೇನು ಪ್ಲೇಆಫ್ಸ್ ಟಿಕೆಟ್ಸ್ ಕನ್ಫರ್ಮ್ ಆಗೋ ಟೈಂ. ಆದ್ರೆ ಟಾಪ್-4 ಲೆಕ್ಕಾಚಾರದಲ್ಲಿರೋ ತಂಡಗಳಿಗೆ ವಿದೇಶಿ ಆಟಗಾರರರದ್ದೇ ಚಿಂತೆಯಾಗಿದೆ. ಯಾಕಂದ್ರೆ ನ್ಯಾಷನಲ್ ಡ್ಯೂಟಿಗಾಗಿ ಕೆಲ ಆಟಗಾರರು ತಮ್ಮ ತಮ್ಮ ದೇಶಗಳಿಗೆ ವಾಪಸ್ ಹೋಗ್ತಾರೆ. ಲಾಸ್ಟ್ ಸೀಸನ್ ಕೂಡ ಹೀಗೇ ಆಗಿತ್ತು. ಇದೀಗ ಆಸ್ಟ್ರೇಲಿಯಾ ಆಟಗಾರರು ಕೂಡ ಪ್ಲೇ ಆಫ್ ಪಂದ್ಯಗಳನ್ನ ಮಿಸ್ ಮಾಡಿಕೊಳ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ಅದ್ರಲ್ಲೂ ಆರ್ಸಿಬಿಗೆ ದೊಡ್ಡ ಹೊಡೆತವೇ ಬೀಳುತ್ತಾ ಅನ್ನೋ ಟೆನ್ಷನ್ ಶುರುವಾಗಿದೆ.
ಇದನ್ನೂ ಓದಿ : ಅಲೆನ್ ಶತಕದ ಆರ್ಭಟ.. ಸತತ ನಾಲ್ಕನೇ ಪಂದ್ಯ ಗೆದ್ದ ಕೊಲ್ಕತ್ತಾ – ಡೆಲ್ಲಿ ಪ್ಲೇ ಆಫ್ ಕನಸು ನುಚ್ಚು ನೂರು
ಐಪಿಎಲ್ ಅಂದ್ರೆ ಜಗತ್ತಿನಲ್ಲೇ ನಂಬರ್ 1 ಲೀಗ್. ಮಾರ್ಚ್ 28ರಂದು ಅದ್ಧೂರಿಯಾಗಿ ಆರಂಭವಾಗಿದ್ದ ಟೂರ್ನಿ ಮೇ 31ಕ್ಕೆ ಫೈನಲ್ ಪಂದ್ಯದ ಮೂಲಕ ಕೊನೆಗೊಳ್ಳಲಿದೆ. ವಿದೇಶಗಳ ಸ್ಟಾರ್ ಪ್ಲೇಯರ್ಗಳೆಲ್ಲಾ ಐಪಿಎಲ್ನಲ್ಲಿ ಬೇರೆ ಬೇರೆ ಫ್ರಾಂಚೈಸಿಗಳ ಪರ ಆಡ್ತಾರೆ. ಌಂಡ್ ಆಸ್ಟ್ರೇಲಿಯಾ ನ್ಯಾಷನಲ್ ತಂಡದ ಪ್ಲೇಯರ್ಸ್ ಕೂಡ ಇದ್ದಾರೆ. ಆದ್ರೀಗ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಮೇ 31ರಿಂದ ಆರಂಭವಾಗಲಿದೆ. ಇದೇ ವೇಳಾಪಟ್ಟಿ ಐಪಿಎಲ್ಗೂ ಕ್ಲ್ಯಾಶ್ ಆಗೋ ಆತಂಕ ತಂದಿದೆ. ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದ್ರಾಬಾದ್ನಂಥ ತಂಡಗಳಿಗೆ ಸ್ಟಾರ್ ಪ್ಲೇಯರ್ಗಳನ್ನೇ ಮಿಸ್ ಮಾಡಿಕೊಳ್ಳೋ ಟೆನ್ಷನ್ ಸ್ಟಾರ್ಟ್ ಆಗಿದೆ.
ಮೇ 31ರಿಂದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಏಕದಿನ ಸರಣಿ!
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಪಿಎಸ್ಎಲ್ 2026 ರ ನಂತರ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಯೋಜಿಸುವುದಾಗಿ ಘೋಷಿಸಿದೆ. ಏಕದಿನ ಸರಣಿಯ ಮೊದಲ ಪಂದ್ಯವನ್ನು ಮೇ 31 ರಂದು ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಿಗದಿಪಡಿಸಲಾಗಿದೆ. ಌಕ್ಚುಲಿ ಐಪಿಎಲ್ 2026 ರ ಗ್ರ್ಯಾಂಡ್ ಫಿನಾಲೆ ಕೂಡ ಅದೇ ದಿನಾಂಕದಂದು ನಡೆಯಲಿದೆ. ಸರಣಿಯ ಮುಂದಿನ ಎರಡು ಪಂದ್ಯಗಳು ಜೂನ್ 2 ಮತ್ತು 4 ರಂದು ನಡೆಯಲಿವೆ. ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಪ್ರಸ್ತುತ ಐಪಿಎಲ್ ಫ್ರಾಂಚೈಸಿಗಳ ಪರ ಆಡ್ತಿದ್ದಾರೆ. ಹಾಗೇನಾದ್ರೂ ಅವ್ರು ನ್ಯಾಷನಲ್ ಪಂದ್ಯಗಳನ್ನ ಆಡಲು ಆಸೀಸ್ಗೆ ವಾಪಸ್ ಹೋದ್ರೆ ಐಪಿಎಲ್ನಲ್ಲಿ ತಂಡಗಳಿಗೆ ಹೊಡೆತ ಬೀಳಲಿದೆ. ಯಾವ್ಯಾವ ತಂಡಗಳಿಗೆ ಎಫೆಕ್ಟ್ ಆಗುತ್ತೆ ನೋಡೋಣ.
ಕೈಕೊಡ್ತಾರಾ ಆಸೀಸ್ ಪ್ಲೇಯರ್ಸ್?
ಆರ್ ಸಿಬಿ ತಂಡದ ಸ್ಟ್ರೈಕ್ ಬೌಲರ್ ಜೋಶ್ ಹ್ಯಾಜಲ್ ವುಡ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲರ್ ಮಿಚೆಲ್ ಸ್ಟಾರ್ಕ್
ಹೈದ್ರಾಬಾದ್ ನ ಸ್ಟಾರ್ಸ್ ಪ್ಯಾಟ್ ಕಮ್ಮಿನ್ಸ್ & ಟ್ರಾವಿಸ್ ಹೆಡ್
ಪ್ರಸ್ತುತ ಆರ್ಸಿಬಿ ಮತ್ತು ಎಸ್ಆರ್ಹೆಚ್ ಮತ್ತು ಡಿಸಿಯಂತಹ ತಂಡಗಳು ಟಾಪ್ 4 ರೇಸ್ನಲ್ಲಿ ಬಿಗ್ ಫೈಟ್ ಕೊಡ್ತಿವೆ. ಈ ಹಂತದಲ್ಲಿ ಸ್ಟಾರ್ ಆಟಗಾರರು ತಂಡವನ್ನು ತೊರೆದರೆ ಪ್ರಮುಖ ಪಂದ್ಯಗಳಿಗೆ ಬದಲಿ ಆಟಗಾರರನ್ನು ಹುಡುಕುವುದು ಅಸಾಧ್ಯ. ಹೀಗಾಗಿ ಮೇನ್ ಪ್ಲೇಯರ್ಗಳೇ ಮಿಸ್ ಆದ್ರೆ ಹೇಗೆ ಅನ್ನೋ ಪ್ರಶ್ನೆಯೂ ಇದೆ. ಹಾಗೇ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಜಲ್ವುಡ್ರಂತಹ ಹಿರಿಯ ಬೌಲರ್ಗಳಿಗೆ ಪಾಕಿಸ್ತಾನ ಪ್ರವಾಸಕ್ಕೆ ವಿಶ್ರಾಂತಿ ನೀಡಬಹುದು ಅನ್ನೋ ಮಾತುಗಳೂ ಇವೆ.

ನೋಡಿರಿ

