ಡ್ರೈವಿಂಗ್‌ ವೇಳೆ ಸೆಲ್ಫಿ ತೆಗೆಯಲು ಮುಂದಾದ ಕಾರು ಚಾಲಕ – ಒಂದೇ ಕುಟುಂಬದ ಐವರು ದುರಂತ ಸಾವು

ಡ್ರೈವಿಂಗ್‌ ವೇಳೆ ಸೆಲ್ಫಿ ತೆಗೆಯಲು ಮುಂದಾದ ಕಾರು ಚಾಲಕ – ಒಂದೇ ಕುಟುಂಬದ ಐವರು ದುರಂತ ಸಾವು

ಇದು ಸ್ಮಾರ್ಟ್‌ ಫೋನ್‌ ಯುಗ. ಕೈಯಲ್ಲೊಂದು ಫೋನ್‌ ಇದ್ರೆ ಸಾಕು. ಜಗತ್ತನ್ನೇ ಮರೆತು ಬಿಡುತ್ತಾರೆ. ಸೆಲ್ಫಿ, ರೀಲ್ಸ್‌, ಸೋಶಿಯಲ್‌ ಮೀಡಿಯಾ ಅಂತಾ ದಿನವಿಡಿ ಅದ್ರಲ್ಲೇ ಮುಳುಗಿ ಹೋಗುತ್ತಾರೆ. ಸುತ್ತ ಮುತ್ತ ಏನಾಗುತ್ತಿದೆ, ತಾವೇನು ಮಾಡುತ್ತಿದ್ದೇವೆ ಅಂತಾ ಕೂಡ ಅವರಿಗೆ ಅರಿವಿರುವುದಿಲ್ಲ. ಇದೀಗ ಇಲ್ಲೊಂದು ಕುಟುಂಬ ಸೆಲ್ಪಿ ತೆಗದುಕೊಳ್ಳಲು ಹೋಗಿ ಮಸಣ ಸೇರಿದ್ದಾರೆ.

ಜಾರ್ಖಂಡ್​ ರಾಜ್ಯದ ದಿಯೋಘರ್​ನ​ಲ್ಲಿ ಈ ಘಟನೆ ನಡೆದಿದೆ. ಕಾರು ಚಾಲಕ ಡ್ರೈವಿಂಗ್‌ ವೇಳೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾನೆ. ಪರಿಣಾಮ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ಒಂದೇ ಕುಟುಂಬದ ಐದು ಮಂದಿ ದುರಂತ ಸಾವಿಗೀಡಾಗಿರುವ ದಾರುಣ ಘಟನೆ ದಿಯೋಘರ್​ನ​ ಸಿಕಾತಿಯಾ​ ಬ್ಯಾರೆಜ್​ನಲ್ಲಿರುವ ಸೇತುವೆಯಲ್ಲಿ ನಡೆದಿದೆ.

ಇದನ್ನೂ ಓದಿ: ಕತ್ತೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ! – ಕತ್ತೆ ಏರಿ ಬರಲು ಕಾರಣವೇನು ಗೊತ್ತಾ?

ದಿಯೋಘರ್​ನ ಅಸಾನ್ಸೋಲ್​ ಸಂಕುಲ್​ ಗ್ರಾಮದಿಂದ ಗಿರಿಧಿಹ್​ ಜಿಲ್ಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರು ಚಾಲನೆ ವೇಳೆ ಚಾಲಕ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ನದಿಗೆ ಬಿದ್ದಿತು ಎಂದು ವರದಿಯಾಗಿದೆ. ಚಾಲಕ ಓರ್ಬ ಇಂಜಿನಿಯರ್​ ಎಂದು ತಿಳಿದುಬಂದಿದೆ.

ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸ್ಥಳೀಯರ ನೆರವಿನಿಂದ ಕಾರನ್ನು ನದಿಯಿಂದ ಹೊರಗೆ ತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಿಯೋಘರ್​ ಸದಾರ್​ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಅಪಘಾತ ಸಂಬಂಧ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Shwetha M