ATM ದರೋಡೆ ಆಯ್ತು.. ಈಗ ಬ್ಯಾಂಕ್ ಟಾರ್ಗೆಟ್! – ಬೆಂಗಳೂರಿನ ಕೆನರಾ ಬ್ಯಾಂಕ್ನಲ್ಲಿ ಕಳ್ಳತನಕ್ಕೆ ಯತ್ನ!

ರಾಜ್ಯದಲ್ಲಿ ಎಟಿಎಂ ದರೋಡೆ ಪ್ರಕರಣ ಪದೇ ಪದೆ ಬೆಳಕಿಗೆ ಬರುತ್ತಿದೆ. ಇದೀಗ ಬ್ಯಾಂಕ್ ಮೇಲೂ ಕಳ್ಳರ ವಕ್ರ ದೃಷ್ಠಿ ಬಿದ್ದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಬ್ಯಾಂಕ್‌ವೊಂದ್ರಲ್ಲಿ ದರೋಡೆಗೆ ಯತ್ನಿಸಿರುವ ಘಟನೆ ಬೆಳಕಿಗಿದೆ ಬಂದಿದೆ.
ಇದನ್ನೂ ಓದಿ: ಟಾಕ್ಸಿಕ್‌ಗಾಗಿ ರಾಕಿ ಭಾಯ್ ಹೊಸ ಅವತಾರ! – ಗಡ್ಡ, ಮೀಸೆಗೆ ಕತ್ತರಿ.. ಯಶ್ ಈಗ ಸಖತ್ ಯಂಗ್
ಶೇಷಾದ್ರಿಪುರಂ ಬಳಿ ಇರುವ ಕೆನರಾ ಬ್ಯಾಂಕ್ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಳ್ಳರು ನುಗ್ಗಿದ್ದಾರೆ. ಬ್ಯಾಂಕ್ ಹಿಂಬದಿ ಇದ್ದ ಗ್ರಿಲ್ ಕಟ್ ಮಾಡಿ ಒಳ ನುಗ್ಗಿರುವ ಕಳ್ಳರು ಎಲ್ಲೆಡೆ ಓಡಾಡಿದ್ದಾರೆ. ಬಳಿಕ ಸ್ಟ್ರಾಂಗ್ ರೂಮ್ ಬಳಿ ಹೋಗಿ ವೈರ್ ಕಟ್ ಮಾಡಿದ್ದಾರೆ. ಸ್ಟ್ರಾಂಗ್ ರೂಮ್ ಬಳಿ ವೈರ್ ಕಟ್ ಮಾಡ್ತಿದ್ದಂತೆ ಸೈರನ್ ಮೊಳಗಿದೆ. ಸೈರನ್ ಸದ್ದು ಕೇಳಿ ಗಾಬರಿಯಾದ ಕದೀಮರು ಸ್ಥಳದಿಂದಲೇ ಎಸ್ಕೇಪ್ ಆಗಿದ್ದಾರೆ ಎನ್ನಲಾಗ್ತಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬ್ಯಾಂಕ್ ಹಿಂಬದಿ ಇದ್ದ ಗ್ರಿಲ್ ಕಟ್ ಮಾಡಿ ಕಳ್ಳರು ಒಳಗೆ ನುಗ್ಗಿದ್ದಾರೆ ಎಂದು ವರದಿ ಆಗಿದೆ.
ಸೈರನ್ ಆಗ್ತಿದ್ದಂತೆ ದುಷ್ಕರ್ಮಿಗಳು ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಶೇಷಾದ್ರಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆ ಸೋಕೋ ಟೀಮ್ ಕೂಡ ಶೋಧ ನಡೆಸಿದೆ.
ಘಟನೆ ಬೆನ್ನಲ್ಲೇ ಪೊಲೀಸರು ಬ್ಯಾಂಕ್‌ಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್ ಸೇವೆ ಬಂದ್ ಮಾಡಿಸಿದ್ದು, ಬ್ಯಾಂಕ್ ಗೆ ಬಂದು ಗ್ರಾಹಕರು ವಾಪಾಸ್ ಹೋಗಿದ್ದು, ಆತಂಕ ಹೊರಹಾಕಿದ್ದಾರೆ. ಬ್ಯಾಂಕ್‌ಗೆ ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಮಚೀಂದ್ರ ಭೇಟಿ ನೀಡಿದೆ ಘಟನೆ ಬಗ್ಗೆ ಸ್ಥಳೀಯ ಪೊಲೀಸರ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ.

ನೋಡಿರಿ

