‘ಪಕ್ಕದ ಮನೆಯವರಿಂದ ಕೋಳಿ ಕೊಲೆಗೆ ಯತ್ನ’ – ಹುಂಜದ ಸಮೇತ ಠಾಣೆಗೆ ಬಂದ ಮಹಿಳೆ..!

‘ಪಕ್ಕದ ಮನೆಯವರಿಂದ ಕೋಳಿ ಕೊಲೆಗೆ ಯತ್ನ’ – ಹುಂಜದ ಸಮೇತ ಠಾಣೆಗೆ ಬಂದ ಮಹಿಳೆ..!

ಮಹಿಳೆಯೊಬ್ಬಳು ಹುಂಜವನ್ನ ಹಿಡಿದುಕೊಂಡು ಪೊಲೀಸ್ ಸ್ಟೇಷನ್​ ಗೆ ಬಂದಿದ್ಲು. ಇದನ್ನ ನೋಡಿ ಠಾಣೆಯಲ್ಲಿದ್ದ ಪೊಲೀಸರು ಮನಸ್ಸಿನಲ್ಲಿ ಸಣ್ಣದೊಂದು ಆಸೆ ಮೂಡಿತ್ತು. ಎಲ್ಲೋ ಈ ಕೋಳಿಯನ್ನ ನಮಗೆ ಕೊಡೋಕೆ ತಂದಿದ್ದಾರೋ ಏನೋ ಅನ್ಕೊಳ್ತಿದ್ರು. ಆದ್ರೆ ಆ ಲೇಡಿ ಹೇಳಿದ ಕಥೆ ಕೇಳಿ ಪೊಲೀಸರ ತಲೆ ಗಿರ್ಽ ಅಂದಿದೆ.

ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿರುವ ವಿಚಿತ್ರ ಘಟನೆಯೊಂದು ಈಗ ಭಾರೀ ಸದ್ದು ಮಾಡ್ತಿದೆ. ಯಾಕಂದ್ರೆ ಕಂಕುಳಲ್ಲಿ ಕೋಳಿ ಹಿಡ್ಕೊಂಡು ಪತಿ ಜೊತೆ ಠಾಣೆಗೆ ಬಂದ ಮಹಿಳೆ ಒಂದೇ ಸಮನೆ ಬೊಬ್ಬೆ ಹೊಡೆದಿದ್ದಾಳೆ. ಅವಳ ಅವತಾರ ಕಂಡ ಪೊಲೀಸರು ಯಾಕಮ್ಮ ಏನಾಯ್ತು ಅಂತಾ ವಿಚಾರಿಸಿದ್ದಾರೆ. ಈ ವೇಳೆ ಮಹಿಳೆ ತನ್ನ ಕೋಳಿಯನ್ನ ಪಕ್ಕದ ಮನೆಯವರು ಕೊಲೆ ಮಾಡೋಕೆ ಪ್ರಯತ್ನಿಸುತ್ತಿದ್ದರು. ಹೀಗಾಗಿ ನೀವು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ : ಹಾಡುತ್ತಾ ಕುಣಿಯುತ್ತಾ ಕುಸಿದೇ ಬಿಟ್ಟ ಯುವಕ- ಮದುವೆ ಸಮಾರಂಭದಲ್ಲಿ ವಿಧಿಯ ಅಟ್ಟಹಾಸ

ರತನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಲ್ದಾಹ ಗ್ರಾಮದ ನಿವಾಸಿ ಜಾಂಕಿಬಾಯಿ ಬಿಂಜ್ವಾರ್ ಅನ್ನೋ ಮಹಿಳೆಯೇ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜಾಂಕಿಬಾಯಿ ಕೋಳಿಗಳನ್ನ ಸಾಕುತ್ತಿದ್ದು ಅವರ ಮನೆಯ ಕೋಳಿಗಳು ಅಲ್ಲಿ ಇಲ್ಲಿ ಓಡಾಡುತ್ತವೆ. ಆದ್ರೆ ಅವರು ಸಾಕಿರುವ ಕೋಳಿಗಳಲ್ಲಿ ಈ ಒಂದು ಕೋಳಿಯನ್ನು ಕೊಲ್ಲಲು ಪ್ರಯತ್ನ ಮಾಡಿದ್ದಾರೆ. ಕೋಳಿ ಮೇಲೆ ಆಗಿರುವ ಗಾಯದಿಂದಲೇ ಅದು ಗೊತ್ತಾಗುತ್ತದೆ ಎಂದಿದ್ದಾರೆ.

ನಮ್ಮ ಪಕ್ಕದ ಮನೆಯವರು ಕೋಳಿಯನ್ನ ಕೊಂದು ತಿನ್ನುವ ಮನಃಸ್ಥಿತಿಯವರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯೊಂದಿಗೆ ಆಕೆಯ ಪತಿ ಮಲಿಕ್ರಂ ಕೂಡ ಪೊಲೀಸ್ ಠಾಣೆಗೆ ಬಂದಿದ್ದಾರೆ. ಹುಂಜವನ್ನು ಕದ್ದು ಕೊಲ್ಲಲು ಯತ್ನಿಸಿದ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸುವಂತೆ ದಂಪತಿ ಆಗ್ರಹಿಸಿದ್ದಾರೆ.

ಮಹಿಳೆಯ ಪ್ರಕಾರ, ಇದಕ್ಕೂ ಮೊದಲು ಪಕ್ಕದ ಮನೆಯವರು ಅದೇ ರೀತಿಯಲ್ಲಿ ಕೋಳಿಯನ್ನು ಕದ್ದಿದ್ದಾರೆ. ಈ ವಿಚಾರವಾಗಿ ಎರಡು ಮನೆಗೂ ಜಗಳ ಉಂಟಾಗಿದೆ. ಜತೆಗೆ ಇಬ್ಬರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಗಾಯಗೊಂಡಿದ್ದ ಕೋಳಿಯೊಂದಿಗೆ ಮಹಿಳೆ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಠಾಣೆಯ ಉಸ್ತುವಾರಿ ಪ್ರಸಾದ್ ಸಿನ್ಹಾ ತಿಳಿಸಿದ್ದಾರೆ. ದೂರು ಸ್ವೀಕರಿಸಿ ಮಹಿಳೆಯನ್ನು ಮನವೊಲಿಸಿ ಮನೆಗೆ ಕಳುಹಿಸಿದ್ದಾರೆ. ಸದ್ಯ ಈ ವಿಚಾರದಲ್ಲಿ ತನಿಖೆ ನಡೆಯುತ್ತಿದೆ.

suddiyaana