ಸೆಲ್ಫಿ ಕೊಡಲು ನಿರಾಕರಿಸಿದ್ದಕ್ಕೆ ಸಿಟ್ಟು- ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಕಾರಿನ ಮೇಲೆ ದಾಳಿ

ಸೆಲ್ಫಿ ಕೊಡಲು ನಿರಾಕರಿಸಿದ್ದಕ್ಕೆ ಸಿಟ್ಟು- ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಕಾರಿನ ಮೇಲೆ ದಾಳಿ

ಸೆಲ್ಫಿ ಕೊಡಲು ನಿರಾಕರಿಸಿದ್ದಕ್ಕೆ ಅಪರಿಚಿತ ಯುವಕರ ಗುಂಪೊಂದು ಭಾರತ ಕ್ರಿಕೆಟ್ ತಂಡದ ಆಟಗಾರ ಪೃಥ್ವಿ ಶಾ ಕಾರಿನ ಮೇಲೆ ದಾಳಿ ನಡೆಸಿದೆ. ಮುಂಬೈನ ಜೋಗೇಶ್ವರಿ ಲಿಂಕ್ ರೋಡ್ ಲೋಟಸ್ ಗ್ಯಾಸ್ ಸ್ಟೇಷನ್ ಬಳಿ ಪೃಥ್ವಿ ಶಾ ಹಾಗೂ ಅವರ ಸ್ನೇಹಿತ ಕಾರಿನಲ್ಲಿ ಹೊಗುತ್ತಿರುವ ವೇಳೆ ಬೇಸ್ ಬಾಲ್ ಬ್ಯಾಟ್‌ನಿಂದ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಮುಂಬೈನ ಪಂಚತಾರಾ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಓಶಿವಾರಾ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ 8 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಇದನ್ನೂ ಓದಿ:  ಐಸಿಸಿ ಟೆಸ್ಟ್ ರ‍್ಯಾಂಕಿಂಗ್​ ನ 6 ವಿಭಾಗಗಳಲ್ಲಿ ಭಾರತ ನಂ.1 – ಏಷ್ಯಾದ ಮೊದಲ ಕ್ರಿಕೆಟ್ ಟೀಂ ಸಾಧನೆ..!

ವರದಿಯ ಪ್ರಕಾರ ಸನಾ ಗಿಲ್ ಮತ್ತು ಶೋಬಿತ್ ಠಾಕೂರ್ ಎಂಬ ಇಬ್ಬರು ಯುವಕರು ಪೃಥ್ವಿ ಶಾ ಬಳಿ ಸೆಲ್ಫಿಗೆ ಮನವಿ ಮಾಡಿದ್ದಾರೆ. ಅದಕ್ಕೆ ಒಪ್ಪಿದ ಪೃಥ್ವಿ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಅವರು ಮತ್ತೊಮ್ಮೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಪೃಥ್ವಿ ನಿರಾಕರಿಸಿದ್ದಾರೆ. ಸೆಲ್ಫಿಗೆ ಒತ್ತಾಯಿಸಿದ್ದರಿಂದ ಹೋಟೆಲ್ ವ್ಯವಸ್ಥಾಪಕರಿಗೆ ಪೃಥ್ವಿ ಶಾ ತಿಳಿಸಿದ್ದಾರೆ. ಬಳಿಕ ಹೋಟೆಲ್‌ನವರು ಆ ಗುಂಪನ್ನು ಹೊರಗೆ ಕಳಿಸಿದ್ದಾರೆ. ಇದರಿಂದ ಕೆರಳಿದ ಆ ಗುಂಪು, ಪೃಥ್ವಿ ಶಾ ಅವರು ಊಟ ಮುಗಿಸಿ ಹೊರಗೆ ಬರುತ್ತಿದ್ದಂತೆ ಬೇಸ್ಬಾಲ್ ಬ್ಯಾಟ್‌ಗಳಿಂದ ಬಿಎಂಡಬ್ಲ್ಯೂ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಕಾರಿನ ಹಿಂಭಾಗ, ಮುಂಭಾಗದ ಗಾಜುಗಳನ್ನು ಪುಡಿ ಮಾಡಿದ್ದಾರೆ. ನಂತರ ಪೃಥ್ವಿ ಶಾ ಅವರನ್ನು ಬೇರೆ ಕಾರಿನಲ್ಲಿ ಕಳುಹಿಸಲಾಗಿದೆ.

ಪೃಥ್ವಿ ಶಾ ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ನೀಡಿದ ದೂರಿನ ಪ್ರಕಾರ, ಮೊದಲು ಅಪರಿಚಿತರ ಗುಂಪೊಂದು ಬೇಸ್ಬಾಲ್ ಬ್ಯಾಟ್ಗಳಿಂದ ಕಾರಿನ ಮೇಲೆ ದಾಳಿ ನಡೆಸಿತು. ನಂತರ ಹಣ ಕೊಡದಿದ್ದರೇ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿತು ಎಂದು ತಿಳಿಸಿದ್ದಾರೆ. ಘಟನೆಯ ನಂತರ ಓಶಿವಾರಾ ಪೊಲೀಸರು 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

suddiyaana