ಕೆಂಪು ಸಮುದ್ರದ ಮೇಲೆ ಹೌತಿ ಬಂಡುಕೋರರ ಕರಿನೆರಳು – ಎಚ್ಚರಿಕೆ ನಡುವೆಯೇ ಮತ್ತೊಂದು ಕಾರ್ಗೋ ಶಿಪ್ ಮೇಲೆ ದಾಳಿ!
ಯಾವಾಗ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ತಾರಕಕ್ಕೇರಿತೋ ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರು ಬಾಲ ಬಿಚ್ಚಿದ್ದಾರೆ. ಪದೇ ಪದೇ ಹಡಗುಗಳ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ. ಜಾಗತಿಕ ಸಮುದಾಯದ ಎಚ್ಚರಿಕೆ ನಡುವೆಯೂ ಹೌತಿ ಬಂಡುಕೋರರು ಮತ್ತೊಂದು ಕಾರ್ಗೋ ಶಿಪ್ ಮೇಲೆ ಬಂಡುಕೋರರು ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಹೌದು, ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಮತ್ತೊಂದು ಶಿಪ್ ಮೇಲೆ ದಾಳಿ ನಡೆಸಿದ್ದಾರೆ. ಆಯಕಟ್ಟಿನ ಬಾಬ್ ಎಲ್-ಮಂಡೇಬ್ ಜಲಸಂಧಿ ಬಳಿ ಪ್ರಯಾಣಿಸುತ್ತಿದ್ದ ವ್ಯಾಪಾರಿ ಹಡಗುಗಳ ಮೇಲೆ ಎರಡು ಕ್ಷಿಪಣಿಗಳನ್ನು ಹಾರಿಸಿದ್ದಾರೆ ಎಂದು ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ ಯುಕೆಎಂಟಿಒ ವರದಿ ಮಾಡಿದೆ.
ಇದನ್ನೂ ಓದಿ: ಡಿಕೆಶಿಗೆ ಸಂಪತ್ತೇ ಮುಳುವಾಯ್ತಾ? – ಸಿಎಂ ಆಗುವ ಬದಲು ಮತ್ತೆ ಜೈಲಿಗೆ?
ಬ್ರಿಟನ್‌ನ ರಾಯಲ್ ನೇವಿ ನಡೆಸುತ್ತಿರುವ ಸಂಸ್ಥೆಯು ಸಂಕ್ಷಿಪ್ತ ಸಂದೇಶದಲ್ಲಿ “ಹಡಗು ಮತ್ತು ಸಿಬ್ಬಂದಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಹೌತಿ ಬಂಡುಕೋರರು ದಕ್ಷಿಣ ಕೆಂಪು ಸಮುದ್ರಕ್ಕೆ ಎರಡು ಹಡಗು ನಿಗ್ರಹ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದಾರೆ ಎಂದು US ಸೆಂಟ್ರಲ್ ಕಮಾಂಡ್ ಹೇಳಿದೆ, ಅಲ್ಲಿ ಅನೇಕ ವಾಣಿಜ್ಯ ಹಡಗುಗಳು ಇದ್ದವು ಆದರೆ “ಯಾವುದೇ ಹಾನಿಯನ್ನು ವರದಿ ಮಾಡಿಲ್ಲ”.
“ಈ ಕಾನೂನುಬಾಹಿರ ಕ್ರಮಗಳು ಡಜನ್‌ಗಟ್ಟಲೆ ಮುಗ್ಧ ನಾವಿಕರ ಜೀವಕ್ಕೆ ಅಪಾಯವನ್ನುಂಟುಮಾಡಿದೆ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯದ ಮುಕ್ತ ಹರಿವನ್ನು ಅಡ್ಡಿಪಡಿಸುವುದನ್ನು ಮುಂದುವರೆಸಿದೆ” ಎಂದು ಸೆಂಟ್‌ಕಾಮ್ ಟ್ವಿಟರ್‌ನಲ್ಲಿ ಹೇಳಿದೆ. ಇದು ನವೆಂಬರ್ 19 ರಿಂದ ಈ ಪ್ರದೇಶದಲ್ಲಿ ವ್ಯಾಪಾರಿ ಹಡಗುಗಳ ವಿರುದ್ಧ 24 ನೇ ದಾಳಿಯಾಗಿದೆ.