ಮಂಗಳೂರಿನಲ್ಲಿ ಯುವಕನ‌ ಮೇಲೆ ತಲ್ವಾರ್‌ನಿಂದ ದಾಳಿ! – ಓರ್ವ ವಶಕ್ಕೆ

ಮಂಗಳೂರಿನಲ್ಲಿ ಯುವಕನ‌ ಮೇಲೆ ತಲ್ವಾರ್‌ನಿಂದ ದಾಳಿ! – ಓರ್ವ ವಶಕ್ಕೆ

ಕಳೆದ ಐದಾರು ತಿಂಗಳು ಮಂಗಳೂರಿನಲ್ಲಿ ಶಾಂತಿ ನೆಲಿಸಿತ್ತು. ಆದ್ರೀಗ ಮಂಗಳೂರಿನಲ್ಲಿ ಮತ್ತೆ ಮಾರಕ ದಾಳಿ ನಡೆದಿದೆ. ಯುವಕ ಮೇಲೆ ತಲವಾರ್‌ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಇನ್ಮುಂದೆ 9 ತಿಂಗಳ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ – ರೂಲ್ಸ್‌ ಬ್ರೇಕ್‌ ಮಾಡಿದ್ರೆ ದಂಡ ಫಿಕ್ಸ್!‌

ಮಂಗಳೂರು ಹೊರವಲಯದ ಬಜಪೆಯಲ್ಲಿ ಈ ಘಟನೆ ನಡೆದಿದೆ.  ಬಜಪೆ ಸಮೀಪದ ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಮೇಲೆ ನಾಲ್ವರು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ಪೈಕಿ ಪೊಲೀಸರು ಓರ್ವ ಆರೋಪಿ ಸಿನಾನ್‌ನನ್ನು ಬಂಧಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಬಜಪೆ ಬಳಿ ನಾಲ್ವರು ಆರೋಪಿಗಳು ಬೈಕ್‌ನಲ್ಲಿ ತೆರಳುವಾಗ ತಲವಾರ್ ಹಿಡಿದು ಸಾಗುತ್ತಿದ್ದರು. ಈ ವೇಳೆ ಅಖಿಲೇಶ್ ಎಂಬುವವರು ವಿಡಿಯೋ ಮಾಡಿದ್ದಾರೆ. ಇದನ್ನು ಕಂಡ ಆರೋಪಿಗಳು ಅಖಿಲೇಶ್ ಮೇಲೆ ತಲ್‌ವಾರ್‌ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ ಹೋಗುವಾಗ ಆರೋಪಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯ ಹಲ್ಲೆಗೊಳಗಾದ ಗಾಯಾಳುವಿಗೆ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನ ಹಿಡಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Shwetha M